ನವದೆಹಲಿ: ಬಜೆಟ್ ಸಂಸತ್ ಅಧಿವೇಶನವು (Budget Session) ಜನವರ 31ರಂದು ಆರಂಭವಾಗಲಿದ್ದು, ಏಪ್ರಿಲ್ 6ವರೆಗೂ ಮುಂದುವರಿಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ. ಕಲಾಪ ನಡೆಸಲು ಅಸಾಧ್ಯವಾದ ಕಾರಣ ಚಳಿಗಾಲದ ಅಧಿವೇಶನವನ್ನು ನಿಗದಿತ ಅವಧಿಗಿಂತ ಮುಂಚೆಯೇ ಸ್ಥಗಿತಗೊಳಿಸಲಾಗಿತ್ತು.
2023ರ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಂಡು ಏಪ್ರಿಲ್ 6ರ ವರೆಗೆ ನಡೆಯಲಿದೆ. 27 ಅವಧಿಯ ಅಧಿವೇಶನವೂ ಒಟ್ಟು 66 ದಿನಗಳವರೆಗೆ ನಡೆಯಲಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸದ ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ, ಬಜೆಟ್ ಮಂಡನೆ ಹಾಗೂ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ಮುನ್ನೋಡುತ್ತಿದ್ದೇನೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಅಧಿವೇಶನದ ಸಂದರ್ಭದಲ್ಲಿ, ಸಂಸತ್ ಸ್ಥಾಯಿ ಸಮಿತಿ ಎದುರಿರುವ ಹಲವು ರಾಜ್ಯಗಳ ಅನುದಾನಗಳ ಬೇಡಿಕೆ ಕುರಿತು ನಿರ್ಣಯ ಕೈಗೊಳ್ಳಲು ಹಾಗೂ ವಿವಿಧ ಸಚಿವಾಲಯಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ವರದಿ ಸಿದ್ಧ ಪಡಿಸಲು ಫೆಬ್ರವರಿ 14 ರಿಂದ ಮಾರ್ಚ್ 12ರ ವರೆಗೆ ವಿರಾಮ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಇಂಡಿಯಾ-ಚೀನಾ ಸಂಘರ್ಷದ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಕೇಂದ್ರ ಸರ್ಕಾರವು ಚಳಿಗಾಲದ ಅಧಿವೇಶನದಲ್ಲಿ ಅವಕಾಶ ಕಲ್ಪಿಸಲಿಲ್ಲ ಎಂದು ಆರೋಪಿಸಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಕಲಾಪಕ್ಕೆ ಅಡ್ಡಿಯಾಗಿತ್ತು. ಮುಂಬರುವ ಬಜೆಟ್ ಅಧಿವೇಶನವು, 2024ರ ಚುನಾವಣೆಗಿಂತ ಮುಂಚೆ ನಡೆಯಲಿರುವ ಪೂರ್ಣ ಪ್ರಮಾಣದ ಬಜೆಟ್ ಅಧಿವೇಶನವಾಗಿರಲಿದೆ.
ಇದನ್ನೂ ಓದಿ | Parliament Winter Session | 6 ದಿನ ಮೊದಲೇ ಸಂಸತ್ ಅಧಿವೇಶನ ಅಂತ್ಯ, ಪಾಸಾಗಲಿಲ್ಲ 16 ವಿಧೇಯಕ