ನವದೆಹಲಿ: ಸಂಸತ್ ಬಜೆಟ್ (Budget Session) ಅಧಿವೇಶನದ ಎರಡನೇ ಹಂತದ ಕಲಾಪಗಳು ಸೋಮವಾರದಿಂದ ಆರಂಭವಾಗಲಿದ್ದು, ಹಲವು ವಿಷಯಗಳನ್ನು ಚರ್ಚೆಗೆ ಎಳೆಯುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸೋಮವಾರ ಬೆಳಗ್ಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಉದ್ಯಮಿ ಗೌತಮ್ ಅದಾನಿ ಕುರಿತು ಹಿಂಡನ್‌ಬರ್ಗ್ ವರದಿ, ಪ್ರತಿಪಕ್ಷಗಳ ನಾಯಕರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ, ನಿರುದ್ಯೋಗ, ಬೆಲೆಯೇರಿಕೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ಯೋಜನೆ ರೂಪಿಸಿವೆ.
ಎರಡನೇ ಹಂತದ ಅಧಿವೇಶನದಲ್ಲಿ ಬಜೆಟ್ ಅಂಗೀಕಾರ ಹಾಗೂ ಹಲವು ಸಚಿವಾಲಯಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಜನವರಿ 31ರಿಂದ ಬಜೆಟ್ ಅಧಿವೇಶನ ಆರಂಭವಾಗಿದೆ. ಏಪ್ರಿಲ್ 6ರಂದು ಅಧಿವೇಶನ ಮುಗಿಯಲಿದೆ.
ಇದನ್ನೂ ಓದಿ: B S Yediyurappa: ಬಿ.ಎಸ್.ಯಡಿಯೂರಪ್ಪ ಕೊನೇ ಅಧಿವೇಶನ; ವಿಧಾನಸೌಧದಲ್ಲಿ ಫೋಟೊ ಸೆಷನ್