Site icon Vistara News

ಬಡವರಿಗೆ 4 ಕೋಟಿ ಪಕ್ಕಾ ಮನೆ ನಿರ್ಮಿಸಿದ ನನಗೆ ಒಂದೇ ಒಂದು ಸ್ವಂತ ಮನೆ ಇಲ್ಲ ಎಂದ ಮೋದಿ!

built 4 crore pucca house but i havent one for me Says PM Narendra modi

ಸತ್ನಾ, ಮಧ್ಯಪ್ರದೇಶ: ನಾನು ಬಡ ಜನರಿಗಾಗಿ 4 ಕೋಟಿ ಪಕ್ಕಾ ಮನೆಗಳನ್ನು (pucca house) ನಿರ್ಮಿಸಿಕೊಟ್ಟಿದ್ದೇನೆ. ಆದರೆ, ನನಗಾಗಿ ಒಂದು ಮನೆಯನ್ನು ಕಟ್ಟಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು. ಮಧ್ಯ ಪ್ರದೇಶದ ವಿಧಾನಸಭೆ ಚುನಾವಣಾ ಪ್ರಚಾರ (Madhya Pradesh Election) ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ ಅವರು, ಮಧ್ಯಪ್ರದೇಶದ ಮತದಾರರ ಪ್ರತಿ ಮತಕ್ಕೂ “ತ್ರಿಶಕ್ತಿ” ಶಕ್ತಿ. ಬಿಜೆಪಿಗೆ ಮತ್ತೆ ಸಂಸತ್ತಿನಲ್ಲಿ ಸರ್ಕಾರ ರಚಿಸಲು, ಕೇಂದ್ರದಲ್ಲಿ ಪ್ರಧಾನಿಯನ್ನು ಬಲಪಡಿಸಲು ಮತ್ತು “ಭ್ರಷ್ಟ” ಕಾಂಗ್ರೆಸ್ (Congress Party) ಅನ್ನು ಅಧಿಕಾರದಿಂದ ದೂರವಿಡಲು ಈ ತ್ರಿಶಕ್ತಿ ಸಹಾಯ ಮಾಡುತ್ತದೆ ಎಂದು ಹೇಳಿದರು. ನವೆಂಬರ್ 17ರಂದು ಮಧ್ಯ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ನೀವು ನೀಡುವ ಒಂದು ವೋಟ್ ಮಧ್ಯ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲು ನೆರವು ನೀಡುತ್ತದೆ. ನಿಮ್ಮ ಒಂದು ವೋಟ್ ದಿಲ್ಲಿಯಲ್ಲಿ ಮೋದಿಯನ್ನು ಬಲಪಡಿಸುತ್ತದೆ, ನಿಮ್ಮ ಒಂದು ವೋಟು ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಮಧ್ಯ ಪ್ರದೇಶದಲ್ಲಿ ಅಧಿಕಾರದಿಂದ ದೂರವಿಡುತ್ತದೆ. ಅದರರ್ಥ ಒಂದು ವೋಟು; ಮೂರು ಅಚ್ಚರಿಗಳು. ಇದೊಂದು ರೀತಿ ತ್ರಿಶಕ್ತಿ ಇದ್ದ ಹಾಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದೇಶದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ ಸೃಷ್ಟಿಸಿದ 10 ಕೋಟಿ ನಕಲಿ ಫಲಾನುಭವಿಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ಪ್ರಧಾನಿ ಹೇಳಿದರು. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಮೋದಿ ಹೇಳಿಕೊಂಡರೆ. ನಾನು ತೆಗೆದುಕೊಂಡು ಕ್ರಮಗಳು ಅವರಿಗೆ ಬಲವಾಗಿ ಹೊಡೆತ ನೀಡಿವೆ ಎಂದು ಹೇಳಿದರು. ಕಠಿಣ ಕ್ರಮಗಳಿಂದಾಗಿ ಸರ್ಕಾರ 2.75 ಲಕ್ಷ ಕೋಟಿ ಜನರ ಉಳಿತಾಯ ಮಾಡಿದೆ ಎಂದರು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಮೋದಿ, “ಇತ್ತೀಚಿನ ದಿನಗಳಲ್ಲಿ ನಾನು ಎಲ್ಲಿಗೆ ಹೋದರೂ, ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಾಗುತ್ತದೆ, ದೇಶದಾದ್ಯಂತ ಸಂತೋಷದ ಅಲೆ ಇದೆ” ಎಂದು ಹೇಳಿದರು. ನಾವು ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಿದ್ದರೆ, 30,000 ಪಂಚಾಯತ್ ಕಟ್ಟಡಗಳನ್ನೂ ನಿರ್ಮಿಸಿದ್ದೇವೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದಾಗಿ, ಬಡವರಿಗೆ ಲಕ್ಷಾಂತರ ಮನೆಗಳನ್ನು ನಿರ್ಮಾಣ ಮಾಡಿದ ರಾಜ್ಯಗಳ ಪೈಕಿ ಮಧ್ಯ ಪ್ರದೇಶ ಕೂಡ ಒಂದಾಗಿದೆ ಎಂದು ಅವರು ಹೇಳಿದರು.

ನನ್ನ 3ನೇ ಅವಧಿಯಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ; ಪಿಎಂ ಮೋದಿ

ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯಾಗಿಸುವುದಾಗಿ (India 3rd largest economy) ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ(PM Narendra Modi). ಮಧ್ಯಪ್ರದೇಶದ (Madhya Pradesh Assembly Election) ದಾಮೋಹ್ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲಿ (Election Rally) ಮಾತನಾಡಿದ ಅವರು, ಬಡ ಜನರಿಗೆ ಐದು ವರ್ಷಗಳ ಕಾಲ ಉಚಿತ ರೇಷನ್ ವಿತರಣೆ ಮಾಡಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅವರು ಈ ಪಾಪವನ್ನು ಮಾಡಲಿ. ನಾನು ಈ ದೇಶದ ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉಚಿತ ರೇಷನ್ ವಿಚರಣೆಯಿಂದ ಮುಂದಿನ ಐದು ವರ್ಷಗಳ ಕಾಲ 80 ಕೋಟಿ ಬಡವರಿಗೆ ಲಾಭವಾಗಲಿದೆ. ನನ್ನನ್ನು ಎಷ್ಟೇ ಬೈದರೂ, ಹೀಯಾಳಿಸಿದರೂ ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವು ಮುಂದುವರಿಯಲಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Telangana polls: ಚುನಾವಣೆ ಪ್ರಚಾರದ ವೇಳೆ ತೆಲಂಗಾಣದಲ್ಲಿ ಕೆಸಿಆರ್ ಪಕ್ಷದ ಸಂಸದನಿಗೆ ಚಾಕು ಇರಿತ

ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದರು. ಆದರೆ, ಆ ರಾಜ್ಯಗಳ ಮುಖ್ಯಮಂತ್ರಿಗಳು ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿ ಕಪ್ಪು ಹಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು.

2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ದೇಶದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಕ್ರಮೇಣ ಅದು 9, 8, 7 ಮತ್ತು 6ನೇ ಸ್ಥಾನಕ್ಕೆ ಹೋಯಿತು. ಆದರೆ ಯಾರೂ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. 5ನೇ ಸ್ಥಾನಕ್ಕೆ ಬಂದು ಬ್ರಿಟನ್‌ ಅನ್ನು ಹಿಂದಿಕ್ಕಿತ್ತು. ಬ್ರಿಟಿಷರು 200 ವರ್ಷಗಳ ಕಾಲ ದೇಶವನ್ನು ಆಳಿದವರು. ಆಗ ಭಾರತದ ಪ್ರಗತಿಯನ್ನು ಕಂಡು ಎಲ್ಲರೂ ನಮ್ಮತ್ತ ನೋಡಲಾರಂಭಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.

Exit mobile version