ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ರೌಡಿಗಳನ್ನು, ಅತ್ಯಾಚಾರಿಗಳು ಸೇರಿ ಹಲವು ರೀತಿಯ ಅಪರಾಧಿಗಳನ್ನು ಮಟ್ಟಹಾಕಲು ‘ಬುಲ್ಡೋಜರ್’ಗಳನ್ನು (Bulldozer) ಬಳಸುತ್ತಿದ್ದು, ಇದಕ್ಕಾಗಿ ಅವರು ಬುಲ್ಡೋಜರ್ ಬಾಬಾ ಎಂದೇ ಖ್ಯಾತಿಯಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕೆಲ ದಿನಗಳ ಹಿಂದೆ ಬರೇಲಿಯಲ್ಲಿ ನಡು ರಸ್ತೆಯಲ್ಲೇ ಗುಂಡು ಹಾರಿಸಿದ ದುಷ್ಕರ್ಮಿಗಳ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಗುರುವಾರ (ಜೂನ್ 27) ಧ್ವಂಸಗೊಳಿಸಲಾಗಿದೆ.
ಬಿಜೆಪಿ ಮಾಜಿ ಶಾಸಕ ಪಪ್ಪು ಭರ್ತೌಲ್ ಅವರ ಆಪ್ತ ರಾಜೀವ್ ರಾಣಾ ಎಂಬುವರ ಹೋಟೆಲ್‌ಅನ್ನು ಹತ್ತಾರು ಬುಲ್ಡೋಜರ್‌ಗಳು ನೆಲಸಮಗೊಳಿಸಿವೆ. ರಾಜೀವ್ ರಾಣಾ ಅವರು ಬರೇಲಿಯಲ್ಲಿ ಸಿಟಿ ಸ್ಟಾರ್ ಹೋಟೆಲ್ ಮಾಲೀಕರಾಗಿದ್ದು, ಇದನ್ನು ಅಕ್ರಮವಾಗಿ ನಿರ್ಮಿಸಿರುವ ಕಾರಣ ಧ್ವಂಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ರಾಜೀವ್ ರಾಣಾ ವಿರುದ್ಧ ಭೂಮಾಫಿಯಾದಲ್ಲಿ ತೊಡಗಿರುವ ಆರೋಪಗಳಿವೆ. ಅಲ್ಲದೆ, ಕೆಲ ದಿನಗಳ ಹಿಂದೆ ಬರೇಲಿಯಲ್ಲಿ ‘ಮಿರ್ಜಾಪುರ’ ಮಾದರಿಯಲ್ಲಿ ಹಗಲಲ್ಲೇ ಗುಂಡಿನ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ, ಭೂ ಮಾಫಿಯಾ ಮಟ್ಟಹಾಕಲು ಬುಲ್ಡೋಜರ್‌ಗಳನ್ನು ಬಳಸಲಾಗಿದೆ.
बरेली पीलीभीत बाईपास पर हुए बवाल के मुख्य आरोपी राजीव पर कार्रवाई होटल पर #BDA विभाग ने पुलिस टीम की मदद से चलाया#बुलडोजर राणा ने अपने आप को पुलिस के आगे फिल्मी स्टाइल मे @BJP के 3 नेताओं का नाम आया सामने #सरेंडर कर दिया @bareilly @Roadper @firing @Baba @bulldozer
— Asif Ansari (@Asifansari9410) June 27, 2024
@incident pic.twitter.com/agNIxajRox
ಬರೇಲಿಯ ಇಜ್ಜತ್ ನಗರದ ಸುತ್ತಮುತ್ತಲೂ ಲ್ಯಾಂಡ್ ಮಾಫಿಯಾ ಜೋರಾಗಿದೆ. ಸುತ್ತಲೂ ಗೂಂಡಾಗಳನ್ನು ಇಟ್ಟುಕೊಂಡವರು, ದುಡ್ಡು ಇರುವವರು ಬಡವರ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ರಾಜೀವ್ ರಾಣಾ ಕೂಡ ಇಜ್ಜತ್ ನಗರದಲ್ಲಿ ಹೀಗೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಲ್ಲದೆ, ಇತ್ತೀಚೆಗೆ ನಡು ರಸ್ತೆಯಲ್ಲೇ ಗುಂಡು ಹಾರಿಸಿದ್ದರು. ಹಲವು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಗುಂಡಿನ ದಾಳಿ-ಪ್ರತಿದಾಳಿ ನಡೆಸಿದ್ದು ಜನರಲ್ಲಿ ಆತಂಕ ಮೂಡಿಸಿತ್ತು.
ಗುಂಡಿನ ದಾಳಿಯ ವಿಡಿಯೊ
In the middle of the road in Bareilly. In broad daylight. 100 rounds of firing between two gangs. Bullets kept on going face to face. The builder sent hired goons to take over the plot. The other party also did the same.
— Aman (@Aman34_) June 22, 2024
Bareilly police already knew that there will be a fight… pic.twitter.com/KsLr4O6j8F
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆಗಾಗ ಕ್ರಿಮಿನಲ್‌ಗಳಿಗೆ ಎಚ್ಚರಿಕೆಯನ್ನೂ ಅವರು ನೀಡುತ್ತಿರುತ್ತಾರೆ. ಕಳೆದ ವರ್ಷ ವಿಧಾನಸಭೆಯಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, “ಉತ್ತರ ಪ್ರದೇಶದ ಎಲ್ಲ ಕ್ರಿಮಿನಲ್‌ಗಳ ಗಾಡ್‌ಫಾದರ್ ಎಂದರೆ ಅಖಿಲೇಶ್ ಯಾದವ್. ಅವರ ಧಮನಿಯಲ್ಲೇ ಕ್ರಿಮಿನಲ್ ಇದ್ದಾನೆ. ಆದರೆ, ನಾನೊಂದು ಮಾತು ಹೇಳುತ್ತೇನೆ ಕೇಳಿ. ರಾಜ್ಯದಲ್ಲಿ ಮಾಫಿಯಾದಲ್ಲಿ ತೊಡಗಿರುವವರನ್ನು ಮಣ್ಣಲ್ಲಿ ಹೂತು ಹಾಕುತ್ತೇನೆ” ಎಂದು ಗುಡುಗಿದ್ದರು. ಈ ವಿಡಿಯೊ ಭಾರಿ ವೈರಲ್ ಆಗಿತ್ತು.
ಇದನ್ನೂ ಓದಿ: Physical Abuse: ಮಧ್ಯಪ್ರದೇಶದಲ್ಲೂ ಬುಲ್ಡೋಜರ್ ಅಸ್ತ್ರ; ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ಮನೆ ನೆಲಸಮ