Site icon Vistara News

Union Cabinet: ರೈತರಿಗೆ ಮೋದಿ ಬಂಪರ್;‌ ಕ್ವಿಂಟಾಲ್‌ ಕಬ್ಬಿಗೆ 315 ರೂ., ಯೂರಿಯಾಗೆ 3.68 ಲಕ್ಷ ಕೋಟಿ ರೂ. ಸಬ್ಸಿಡಿ

Narendra Modi With Farmers

Central Government increases MSP of 6 rabi crops; Rs 150 hike for wheat

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಬಂಪರ್‌ ಉಡುಗೊರೆ ನೀಡಿದೆ. ಅದರಲ್ಲೂ, ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. 2023-24ನೇ ಸಾಲಿನಲ್ಲಿ (ಅಕ್ಟೋಬರ್‌-ಸೆಪ್ಟೆಂಬರ್) ಒಂದು ಕ್ವಿಂಟಾಲ್‌ ಕಬ್ಬಿಗೆ ಕೇಂದ್ರ ಸರ್ಕಾರವು 315 ರೂಪಾಯಿ ನ್ಯಾಯಯುತ ಹಾಗೂ ಪ್ರೋತ್ಸಾಹ ಧನ (Fair and Remunerative Price-FRP) ನೀಡುವುದಾಗಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪ್ರಸಕ್ತ ವರ್ಷದ ಅಕ್ಟೋಬರ್‌ನಿಂದ 2024ರ ಸೆಪ್ಟೆಂಬರ್‌ವರೆಗೆ ಎಫ್‌ಆರ್‌ಪಿ ಜಾರಿಯಲ್ಲಿದೆ. ಇದರಿಂದ ದೇಶದ 5 ಕೋಟಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಕ್ವಿಂಟಾಲ್‌ಗೆ 315 ರೂಪಾಯಿ ಎಫ್‌ಆರ್‌ಪಿ ಪಡೆಯಲಿದ್ದಾರೆ. ಹಾಗೆಯೇ, ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೂ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೃಷಿ ವೆಚ್ಚಗಳು ಹಾಗೂ ದರಗಳ ಆಯೋಗ (CACP) ಶಿಫಾರಸಿನಂತೆ ಕೇಂದ್ರ ಸರ್ಕಾರವು ಎಫ್‌ಆರ್‌ಪಿ ಹೆಚ್ಚಿಸಲು ತೀರ್ಮಾನಿಸಿದೆ.

ಮೋದಿ ಅವಧಿಯಲ್ಲಿ ಎಫ್‌ಆರ್‌ಪಿ ಏರಿಕೆ

FRP Hike Under Modi Government

(ಚಿತ್ರಕೃಪೆ- PIB)

ಇದನ್ನೂ ಓದಿ: MSP For Copra | ಕೊಬ್ಬರಿಗೆ ಬೆಂಬಲ ಬೆಲೆ, ಬಡವರಿಗೆ ಇನ್ನೂ 1 ವರ್ಷ ಉಚಿತ ಪಡಿತರ ವಿತರಣೆ, ಕೇಂದ್ರದ ಭರ್ಜರಿ ಕೊಡುಗೆ

2022-23ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಂದ 1.11 ಲಕ್ಷ ಕೋಟಿ ರೂಪಾಯಿ ಮೌಲ್ಯದ 3,353 ಲಕ್ಷ ಟನ್‌ ಕಬ್ಬು ಖರೀದಿಸಿವೆ. ದೇಶದಲ್ಲಿ ಭತ್ತದ ನಂತರ ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ಇರುವುದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ.

ಯೂರಿಯಾಗೆ 3.68 ಲಕ್ಷ ಕೋಟಿ ರೂ. ಸಬ್ಸಿಡಿ

ಕೇಂದ್ರ ಸರ್ಕಾರವು 2022-23ರಿಂದ 2024-25ನೇ ಸಾಲಿನವರೆಗೆ ಅಂದರೆ, ಮೂರು ವರ್ಷಗಳ ಅವಧಿಗೆ ಯೂರಿಯಾ ರಸಗೊಬ್ಬರಕ್ಕೆ 3.68 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಘೋಷಿಸಿದೆ. ಇದರಿಂದಲೂ ಕೋಟ್ಯಂತರ ರೈತರು ಕಡಿಮೆ ಬೆಲೆಗೆ ರಸಗೊಬ್ಬರ ಖರೀದಿಸಲು ಸಾಧ್ಯವಾಗಲಿದೆ.

ಸದ್ಯ, 45 ಕೆ.ಜಿಯ ಯೂರಿಯಾ ಬ್ಯಾಗ್‌ಗೆ 242 ರೂಪಾಯಿ ಸಬ್ಸಿಡಿ ಇದೆ. ಇದೇ ಸಬ್ಸಿಡಿಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

Exit mobile version