ಜಮ್ಮು-ಕಾಶ್ಮೀರ: ಯಾತ್ರಿಕರಿದ್ದ ಬಸ್(Bus)ವೊಂದು ಬೆಟ್ಟದ ಮೇಲಿನಿಂದ ಉರುಳಿ ಬಿದ್ದಿದ್ದು(Bus Accident), 9 ಜನ ಮೃತಪಟ್ಟಿದ್ದು, 40 ಜನರಿಗೆ ಗಂಭೀರ ಗಾಯಗಳಾಗಿವೆ. ಜಮ್ಮು-ಕಾಶ್ಮೀರ(Jammu-Kashmir)ದ ಚೌಕಿ ಚೌರಾ ಟುಗಿ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಲಿಧಾರ್ ಪ್ರದೇಶದಲ್ಲಿ ಬೆಟ್ಟ ಮೇಲೆ ಚಲಿಸುತ್ತಿದ್ದ ಬಸ್ ಏಕಾಏಕಿ ಸ್ಕಿಡ್ ಆಗಿ 150 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ಈ ಬಸ್ ಕುರುಕ್ಷೇತ್ರದಿಂದ ಶಿವಖೋರಿಗೆ ಪ್ರಯಾಣಿಸುತ್ತಿತ್ತು.
Major bus accident reported on #Jammu #Rajouri #Poonch national highway near Chowki Choura between Akhnoor and Bhambla. Casualties feared. pic.twitter.com/CxTUotY6mM
— Yogesh Sagotra (@JournalistJmu) May 30, 2024
ಇನ್ನು ಘಟನೆಯಲ್ಲಿ ಹತ್ತಾರು ಜನ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಜಮ್ಮುವಿನ GMC ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕೆಲವು ಗಾಯಾಳುಗಳನ್ನು ಚೌಕಿ ಚೌರ ಆಸ್ಪತ್ರೆ ಮತ್ತು ಅಖ್ನೂರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
#BreakingNews
— DD NEWS JAMMU | डीडी न्यूज़ जम्मू (@ddnews_jammu) May 30, 2024
Bus #accident reported on Jammu Rajouri Poonch national highway between Akhnoor and Bhambla
16 casualties till now
More details awaited @DDNewslive @igtraffic_jk @adgp_igp @anandjainips @Dis_Pol_Jammu @ZPHQJammu @justcsachin @vishesh_jk @dmjammuofficial pic.twitter.com/jgzjERmEtR
ಇದನ್ನೂ ಓದಿ: Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಝಜ್ಜರ್ ಕೊಟ್ಲಿ ಸಮೀಪ ಇತ್ತೀಚೆಗೆ ಬಸ್ ಪಲ್ಟಿಯಾಗಿದ್ದು , 10 ಜನರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 75 ಪ್ರಯಾಣಿಕರನ್ನು ಹೊತ್ತ ಬಸ್, ಪಂಜಾಬ್ನ ಅಮೃತ್ಸರ್ದಿಂದ ಕಾತ್ರಾಕ್ಕೆ ಹೋಗುತ್ತಿತ್ತು. ಕೊಟ್ಲಿ ಬಳಿ ಈ ಬಸ್ ಕಂದಕಕ್ಕೆ ಉರುಳಿಬಿದ್ದಿತ್ತು. ಸೇತುವೆ ಮೇಲಿಂದ ಬಿದ್ದಿದ್ದು, ಬಸ್ ಜಖಂ ಆಗಿದೆ. ಕಾತ್ರಾಕ್ಕೆ ಹೊರಟಿದ್ದ ಈ ಬಸ್ನಲ್ಲಿ ಅನೇಕರು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲಿದ್ದ ಭಕ್ತರೇ ಇದ್ದರು. ಬಹುತೇಕರು ಬಿಹಾರದವರು ಇದ್ದರು. ಆದರೆ ಕಾತ್ರಾ ಇರುವ ರಿಯಾಸಿ ಜಿಲ್ಲೆಯಿಂದ 15 ಕಿಮೀ ದೂರದಲ್ಲಿ, ಕೋಟ್ಲಿ ಬಳಿ ಅಪಘಾತಕ್ಕೀಡಾಗಿತ್ತು.