Site icon Vistara News

ಉಪಚುನಾವಣೆ: ಅಜಂಗಢ, ರಾಮ್‌ ಪುರ ಎಸ್ಪಿ ಕಡೆಗೆ, ಸಂಗ್ರೂರ್‌ನಲ್ಲಿ ಆಪ್‌ಗೆ ಟೈಟ್‌ ಫೈಟ್‌, ತ್ರಿಪುರಾ ಸಿಎಂ ವಿನ್‌

AAP celebration

ನವ ದೆಹಲಿ: ಮೂರು ಲೋಕಸಭಾ ಕ್ಷೇತ್ರಗಳು ಮತ್ತು ೧೫ ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮುನ್ನಡೆ ಪ್ರವೃತ್ತಿಗಳು ಮತ್ತು ಫಲಿತಾಂಶಗಳು ಹೊರಬೀಳುತ್ತಿದೆ. ಉತ್ತರ ಪ್ರದೇಶದ ಅಜಂ ಗಢ ಮತ್ತು ರಾಮ್‌ಪುರ ಕ್ಷೇತ್ರಗಳಲ್ಲಿ ಸಮಾಜವಾದಿ ಪಾರ್ಟಿ ಗೆಲುವಿನೆಡೆಗೆ ದಾಪುಗಾಲು ಹಾಕುತ್ತಿದೆ. ಈ ಕ್ಷೇತ್ರಗಳಲ್ಲಿ ಈ ಹಿಂದೆ ಕ್ರಮವಾಗಿ ಎಸ್ಪಿಯ ಅಜಂ ಖಾನ್‌ ಮತ್ತು ಅಖಿಲೇಶ್‌ ಯಾದವ್‌ ಗೆದ್ದಿದ್ದರು. ಅವರು ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದರಿಂದ ಈ ಸ್ಥಾನಗಳು ತೆರವಾಗಿದ್ದವು. ಎರಡೂ ಸ್ಥಾನಗಳನ್ನು ಎಸ್‌ಪಿ ಉಳಿಸಿಕೊಳ್ಳುವ ಹಾದಿಯಲ್ಲಿದೆ. ತ್ರಿಪುರಾ ಸಿಎಂ ಮಾಣಿಕ್‌ ಸಹಾ ಅವರಿಗೆ ಈ ಚುನಾವಣೆ ಮಹತ್ವದ್ದಾಗಿದ್ದು, ಅವರು ಬೋರ್ಡವಾಲಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

ಪಂಜಾಬ್‌ನ ಸಂಗ್ರೂರ್‌ನಲ್ಲಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ಭಗವಂತ್‌ ಸಿಂಗ್‌ ಮಾನ್‌ ಗೆದ್ದಿದ್ದರು. ಅವರು ಕಳೆದ ವರ್ಷ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದರಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಸ್ಥಾನ ಖಾಲಿ ಇತ್ತು. ಇದೀಗ ಮತ ಎಣಿಕೆ ಮುಂದುವರಿಯುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ, ಆಮ್‌ ಆದ್ಮಿ ಪಾರ್ಟಿಯ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌ ಮತ್ತು ಶಿರೋಮಣಿ ಅಕಾಲಿ ದಳದ ಗುರ್ಮಿತ್‌ ಸಿಂಗ್‌ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಶಿರೋಮಣಿ ಅಕಾಲಿ ದಳವೇ ೩೦೦೦ ಮತಗಳಿಂದ ಮುಂದಿದೆ.

ಇತರ ಮುನ್ನಡೆ ವಿವರ ಹೀಗಿದೆ
-ತ್ರಿಪುರಾದ ಜುಬರಾಜ್‌ನಗರ ಕ್ಷೇತ್ರದಲ್ಲಿ ಬಿಜೆಪಿ ಸಿಪಿಎಂಗಿಂತ ೪೦೦೦ ಮತಗಳ ಮುನ್ನಡೆಯಲ್ಲಿದೆ.
– ಆಂಧ್ರ ಪ್ರದೇಶದ ಆತ್ಮಾಕುರ್‌ ಕ್ಷೇತ್ರದಲ್ಲಿ ವೈಎಸ್‌ಆರ್‌ಸಿ ಅಭ್ಯರ್ಥಿಗೆ ೩೦೦೦೦ ಮತ ಬಿದ್ದರೆ, ಪ್ರತಿಸ್ಪರ್ಧಿ ಬಿಜೆಪಿಗೆ ಸಿಕ್ಕಿದ್ದು ಇದುವರೆಗೆ ೫೦೦೦ ಮಾತ್ರ
– ದೆಹಲಿಯ ರಾಜೀಂದರ್‌ ನಗರ್‌ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಾರ್ಟಿಯ ದುರ್ಗೇಶ್‌ ಪಾಠಕ್‌ ಗೆಲುವಿನ ಹಾದಿಯಲ್ಲಿ

ಎಲ್ಲೆಲ್ಲಿ ಚುನಾವಣೆ ನಡೆದಿತ್ತು?

ವಿಧಾನಸಭಾ ಚುನಾವಣೆ: ೧೧ ರಾಜ್ಯ, ೧೫ ಕ್ಷೇತ್ರ

ದಿಲ್ಲಿ- ರಾಜೀಂದರ್‌ ನಗರ್‌
ಜಾರ್ಖಂಡ್‌- ಮಂದಾರ್‌
ತ್ರಿಪುರಾ- ಅಗರ್ತಲಾ, ಜುಬರಾಜ್‌ ನಗರ್‌, ಸುರ್ಮಾ, ಬೋರ್ಡವಾಲಿ
ಒಡಿಶಾ: ಬೃಜರಾಜ್‌ ನಗರ್
ಕೇರಳ: ತ್ರಿಕ್ಕಕರ
ಉತ್ತರಾಖಂಡ: ಚಂಪಾವಟ್‌
ಮಹಾರಾಷ್ಟ್ರ: ಕೊಲ್ಲಾಪುರ ಉತ್ತರ
ಛತ್ತೀಸ್‌ಗಢ: ಖೈರಗಢ
ಪ.ಬಂಗಾಳ: ಬಳ್ಳಿಗುಂಗ್, ಅಸನ್ಸೋಲ್‌
ಬಿಹಾರ: ಬೋಚಹಾನ್‌
ಅಸ್ಸಾಂ: ಮಜುಲಿ

ಲೋಕಸಭಾ ಮರು ಚುನಾವಣೆ
ಉತ್ತರ ಪ್ರದೇಶ: ಅಜಂ ಗಢ, ರಾಮ್‌ ಪುರ
ಪಂಜಾಬ್‌: ಸಂಗ್ರೂರ್‌
ಇದನ್ನೂ ಓದಿ| ವಿಸ್ತಾರ Explainer: ಶಿವ ಸೇನೆ ಚಿಹ್ನೆ ʼಬಿಲ್ಲು ಬಾಣʼ ಯಾರ ಬತ್ತಳಿಕೆಗೆ ಹೋಗಲಿದೆ?

Exit mobile version