Site icon Vistara News

Byju’s Company: ಮೋದಿ… ಪ್ಲೀಸ್ ಹೆಲ್ಪ್ ಮಾಡಿ ಎಂದು ಕಣ್ಣೀರಿಟ್ಟ ಬೈಜೂಸ್ ಕಂಪನಿಯ ಮಹಿಳಾ ಉದ್ಯೋಗಿ!

Akansha Khemka

ನವದೆಹಲಿ: ಎಜುಟೆಕ್ ಬೈಜೂಸ್ ಕಂಪನಿಯ (Edutech Byju’s Company) ತೊಂದರೆಗಳು ಮುಗಿಯುವಂತೆ ಕಾಣುತ್ತಿಲ್ಲ. ಅಲ್ಲಿನ ಉದ್ಯೋಗಿಗಳು (Employee) ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಅದೇ ರೀತಿ, ಮಹಿಳಾದ ಉದ್ಯೋಗಿಯೊಬ್ಬರು ಕೆಲಸದಿಂದ ತೆಗೆದು ಹಾಕಿದ ಬಗ್ಗೆ ವಿಡಿಯೋವೊಂದನ್ನು (Viral Video) ಸೋಷಿಯಲ್ ಮೀಡಿಯಾದಲ್ಲಿ (Social Media) ಷೇರ್ ಮಾಡಿದ್ದಾರೆ. ಕಂಪನಿಯು ಹೇಗೆ ಗ್ರಾಹಕರು ಮತ್ತು ನೌಕರರಿಗೆ ವಂಚನೆ ಎಸಗುತ್ತಿದೆ ಎಂಬುದನ್ನು ಮಹಿಳಾ ಉದ್ಯೋಗಿ ವಿಡಿಯೋದಲ್ಲಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಕೇಂದ್ರ ಸರ್ಕಾರವು(Central Government) ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಅಳುತ್ತಲೇ ಅವರು ಕೋರಿಕೊಂಡಿದ್ದಾರೆ.

ಆಕಾಂಶಾ ಖೇಮ್ಕಾ ವಿಡಿಯೋ

ಕಳೆದ ಒಂದೂವರೆ ವರ್ಷಗಳಿಂದ ಬೈಜುಸ್‌ನಲ್ಲಿ ಅಕಾಡೆಮಿಕ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಕಾಂಶಾ ಖೇಮ್ಕಾ ಅವರು ತಮ್ಮ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದಾರೆ. ಅವರಿಂದ ಒತ್ತಾಯವಾಗಿ ರಾಜೀನಾಮೆ ಪಡೆದುಕೊಂಡಿರುವ ಕಂಪನಿಯು, ಅವರಿಗೆ ನೀಡಬೇಕಾದ ಬಾಕಿ ಮೊತ್ತವನ್ನು ನೀಡದೇ ಸತಾಯಿಸುತ್ತಿದೆ. ಈ ಕುರಿತು ಅವರು ವಿಡಿಯೋದಲ್ಲಿ ಕಂಪನಿಯ ವಿರುದ್ಧ ಆರೋಪ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Byju Raveendran : ಹೂಡಿಕೆದಾರರ ಎದುರು ಕಣ್ಣೀರಿಟ್ಟ ಬೈಜೂಸ್‌ ರವೀಂದ್ರನ್

ಕಂಪನಿಯು ನನ್ನ ವೇರಿಯೇಬಲ್‌ ಹಣ ಮತ್ತು ಎನ್‌ಕ್ಯಾಶ್‌ಮೆಂಟ್ ಪಾವತಿಸುತ್ತಿಲ್ಲ. ಅವರು ನನಗೆ ತಕ್ಷಣ ರಾಜೀನಾಮೆ ನೀಡುವಂತೆ ಪತ್ರವನ್ನು ಕಳುಹಿಸಿದ್ದಾರೆ. ನನ್ನ ಗಂಡ ಅನಾರೋಗ್ಯಪೀಡಿತರಾಗಿದ್ದಾರೆ. ನಾನು ಸಾಲ ಮಾಡಿದ್ದೇನೆ. ಅದನ್ನು ಮರುಪಾವತಿಸಬೇಕಿದೆ. ಒಂದು ವೇಳೆ ಬೈಜೂಜ್ ನನ್ನ ಸ್ಯಾಲರಿ ರಿಲೀಸ್ ಮಾಡದೇ ಹೋದರೆ ನಾನು ಹೇಗೆ ಬದುಕೋದು. ನನ್ನ ಕುಟಂಬದಲ್ಲಿ ನಾನು ಒಬ್ಬಳೇ ದುಡಿಯುವ ವ್ಯಕ್ತಿಯಾಗಿದ್ದೇನೆ ಎಂದು ಅಳುತ್ತಾ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಅವರು ಲಿಂಕ್ಡ್‌ಇನ್ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ.

ನಮ್ಮ ಸರ್ಕಾರ ದಯವಿಟ್ಟು ನನಗೆ ಮತ್ತು ಇತರ ಉದ್ಯೋಗಿಗಳಿಗೆ ಈ ವಿಷಯ ಕೆಲಸದ ಸಂಸ್ಕೃತಿಯಿಂದ ಪಾರಾಗಲು ಸಹಾಯ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಬೈಜೂಸ್ ನೌಕರರು ಮತ್ತು ಗ್ರಾಹಕರು ಸೇರಿದಂತೆ ಎಲ್ಲಾ ಕಡೆಯಿಂದ ವಂಚನೆ ಮಾಡುತ್ತಿದೆ ಎಂದು ಅವರು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version