Site icon Vistara News

BYJU’s India: ಬೈಜೂಸ್ ಇಂಡಿಯಾ ಸಿಇಒ ಮೃಣಾಲ್ ಮೋಹಿತ್ ರಾಜೀನಾಮೆ

Byjus

ನವದೆಹಲಿ: ಎಜುಟೆಕ್ ಸಂಸ್ಥೆ ಬೈಜೂಸ್ ಸ್ಥಾಪಕ ಪಾಲುದಾರ ಮತ್ತು ಇಂಡಿಯಾ ಆಪರೇಷನ್ಸ್ (BYJU’s India) ಸಿಇಒ ಮೃಣಾಲ್ ಮೋಹಿತ್ (CEO Mrinal Mohit Quits) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಹುದ್ದೆ ತೊರೆದಿದ್ದಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬೈಜೂಸ್ ಇಂಡಿಯಾ ಸಿಇಒ ಸ್ಥಾನಕ್ಕೆ ಈಗ, ಬೈಜೂಸ್ ಇಂಟರ್‌ನ್ಯಾಷನಲ್ ಬಿಸಿನೆಸ್ ಸಿಇಒ ಅರ್ಜುನ್ ಮೋಹನ್ (Arjun Mohan) ಅವರನ್ನು ನೇಮಕ ಮಾಡಲಾಗಿದೆ. ಅವರು ಹೆಚ್ಚುವರಿಯಾಗಿ ಈ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಅರ್ಜುನ್ ಮೋಹನ್ ಅವರು ಇಂಡಿಯಾ ಆಪರೇಷನ್ಸ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬೈಜೂಸ್ ಸಂಸ್ಥಾಪ ಪಾಲುದಾರ ಹಾಗೂ ಇಂಡಿಯಾ ಆಪರೇಷನ್ಸ್‌ನಿಂದ ಹೊರಹೋಗಿರುವ ಮುಖ್ಯಸ್ಥರಾದ ಮೃಣಾಲ್ ಮೋಹಿತ್ ಅವರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿದ್ದಾರೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೋಹನ್ ಅವರು ಜೈಜೂಸ್ ಸ್ಥಾಪಕ ತಂಡದ ಭಾಗವಾಗಿದ್ದರು ಮತ್ತು ಅವರ ಹಿಂದಿನ ಅವಧಿಯಲ್ಲಿ ಮುಖ್ಯ ಬಿಸಿನೆಸ್ ಆಫೀಸರ್ ಆಗಿದ್ದರು. ಕಳೆದ ಜುಲೈನಲ್ಲಿ ಅಪ್‌ಗ್ರಾಡ್‌ ತೊರೆದು ಕಂಪನಿ ಸೇರ್ಪಡೆಯಾಗಿದ್ದರು.

ಬೈಜೂಸ್ ಇಂದು ಗಮನಾರ್ಹವಾದ ಎತ್ತರವನ್ನು ತಲುಪಿದ್ದರೆ, ಅದು ನಮ್ಮ ಸಂಸ್ಥಾಪಕ ತಂಡದ ಅಸಾಧಾರಣ ಪ್ರಯತ್ನಗಳಿಂದಾಗಿಯೇ ಸಾಧಅಯವಾಗಿದೆ. ಮೃಣಾಲ್ ಅವರ ಕೊಡುಗೆಗಳು ನಮ್ಮ ಸಂಸ್ಥೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿವೆ. ನಾವು ಅವರಿಗೆ ಕಹಿಯಾದ ವಿದಾಯವನ್ನು ನೀಡುತ್ತೇವೆ ಎಂದು ಬೈಜೂಸ್ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಬೈಜು ರವೀಂದ್ರನ್ ಅವರು ಹೇಳಿದ್ದಾರೆ.

ಕಣ್ಣೀರಿಟ್ಟ ಬೈಜೂಸ್ ಕಂಪನಿಯ ಮಹಿಳಾ ಉದ್ಯೋಗಿ!

ಎಜುಟೆಕ್ ಬೈಜೂಸ್ ಕಂಪನಿಯ (Edutech Byju’s Company) ತೊಂದರೆಗಳು ಮುಗಿಯುವಂತೆ ಕಾಣುತ್ತಿಲ್ಲ. ಅಲ್ಲಿನ ಉದ್ಯೋಗಿಗಳು (Employee) ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಅದೇ ರೀತಿ, ಎರಡು ತಿಂಗಳ ಹಿಂದೆ ಮಹಿಳಾ ಉದ್ಯೋಗಿಯೊಬ್ಬರು ಕೆಲಸದಿಂದ ತೆಗೆದು ಹಾಕಿದ ಬಗ್ಗೆ ವಿಡಿಯೋವೊಂದನ್ನು (Viral Video) ಸೋಷಿಯಲ್ ಮೀಡಿಯಾದಲ್ಲಿ (Social Media) ಷೇರ್ ಮಾಡಿದ್ದರು. ಕಂಪನಿಯು ಹೇಗೆ ಗ್ರಾಹಕರು ಮತ್ತು ನೌಕರರಿಗೆ ವಂಚನೆ ಎಸಗುತ್ತಿದೆ ಎಂಬುದನ್ನು ಮಹಿಳಾ ಉದ್ಯೋಗಿ ವಿಡಿಯೋದಲ್ಲಿ ವಿವರಿಸಿದ್ದರು. ಅಷ್ಟೇ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಕೇಂದ್ರ ಸರ್ಕಾರವು(Central Government) ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಅಳುತ್ತಲೇ ಅವರು ಕೋರಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Byju’s Company: ಮೋದಿ… ಪ್ಲೀಸ್ ಹೆಲ್ಪ್ ಮಾಡಿ ಎಂದು ಕಣ್ಣೀರಿಟ್ಟ ಬೈಜೂಸ್ ಕಂಪನಿಯ ಮಹಿಳಾ ಉದ್ಯೋಗಿ!

ಕಳೆದ ಒಂದೂವರೆ ವರ್ಷಗಳಿಂದ ಬೈಜುಸ್‌ನಲ್ಲಿ ಅಕಾಡೆಮಿಕ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಕಾಂಶಾ ಖೇಮ್ಕಾ ಅವರು ತಮ್ಮ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದಾರೆ. ಅವರಿಂದ ಒತ್ತಾಯವಾಗಿ ರಾಜೀನಾಮೆ ಪಡೆದುಕೊಂಡಿರುವ ಕಂಪನಿಯು, ಅವರಿಗೆ ನೀಡಬೇಕಾದ ಬಾಕಿ ಮೊತ್ತವನ್ನು ನೀಡದೇ ಸತಾಯಿಸುತ್ತಿದೆ. ಈ ಕುರಿತು ಅವರು ವಿಡಿಯೋದಲ್ಲಿ ಕಂಪನಿಯ ವಿರುದ್ಧ ಆರೋಪ ಮಾಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version