ನವ ದೆಹಲಿ: ಗುಜರಾತ್- ಹಿಮಾಚಲ ಪ್ರದೇಶಗಳ ವಿಧಾನಸಭೆ ಜತೆಜತೆಗೇ ನಡೆದಿರುವ ಐದು ರಾಜ್ಯಗಳ ಆರು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ವಿಭಿನ್ನ ಪಕ್ಷಗಳು ಮುನ್ನಡೆ ಸಾಧಿಸಿವೆ.
ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭೆ ಕ್ಷೇತ್ರ, ಉತ್ತರಪ್ರದೇಶದ ರಾಮ್‌ಪುರ ಮತ್ತು ಖತೌಲಿ, ಒಡಿಶಾದ ಪಾದಂಪುರ, ರಾಜಸ್ಥಾನದ ಸರ್ದಾರ್‌ಶಹರ್, ಬಿಹಾರದ ಕುರ್ಹಾನಿ ಮತ್ತು ಛತ್ತೀಸ್‌ಗಢದ ಭಾನುಪ್ರತಾಪ್‌ಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.
ಹೈ ಪ್ರೊಫೈಲ್ ಸ್ಪರ್ಧೆ ಕಂಡಿದ್ದ ಮೈನ್‌ಪುರಿ ಲೋಕಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿಯ ಡಿಂಪಲ್ ಯಾದವ್ ಅವರು ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಎಸ್‌ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಮರಣದ ಬಳಿಕ ಸ್ಥಾನ ತೆರವಾಗಿತ್ತು.
ರಾಮ್‌ಪುರದಲ್ಲಿ ಎಸ್‌ಪಿ, ಖತೌಲಿಯಲ್ಲಿ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ), ಸರ್ದಾರ್‌ಶಹರ್ ಹಾಗೂ ಭಾನುಪ್ರತಾಪ್‌ಪುರದಲ್ಲಿ ಕಾಂಗ್ರೆಸ್, ಪಾದಂಪುರದಲ್ಲಿ ಬಿಜು ಜನತಾ ದಳ (ಬಿಜೆಡಿ) ಹಾಗೂ ಕುರ್ಹಾನಿಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತಗಳಿಕೆಯಲ್ಲಿ ಮುಂದಿವೆ.
ಇದನ್ನೂ ಓದಿ | Election result 2022 | ಮೈನ್‌ಪುರಿ ಲೋಕಸಭೆ ಕ್ಷೇತ್ರದಲ್ಲಿ ಡಿಂಪಲ್ ಯಾದವ್ ಮುನ್ನಡೆ