Site icon Vistara News

Bypolls Results 2023: 7 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಪ್ರಾಬಲ್ಯ, ಚಾಂಡಿ ಉಮ್ಮನ್‌ಗೆ ಜಯ, ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ

Chandy Oommen Wins In Bypoll

Bypoll Results 2023: BJP Wins Both Tripura Seats, Chandy Oommen Ahead in Kerala's Puthuppally

ನವದೆಹಲಿ: ಕೇರಳ, ತ್ರಿಪುರ, ಉತ್ತರ ಪ್ರದೇಶ ಸೇರಿ ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ (Bypolls Results 2023) ಸಾಧಿಸಿದೆ. ಕೇರಳದ ಪುತುಪಳ್ಳಿಯಲ್ಲಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್‌ ಅವರು ಗೆಲುವು ಸಾಧಿಸಿದ್ದಾರೆ. ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿರುವುದರಿಂದ ಇಂಡಿಯಾ ಒಕ್ಕೂಟಕ್ಕೆ ಉಪ ಚುನಾವಣೆಯಲ್ಲಿ ಹಿನ್ನಡೆಯಾದಂತಾಗಿದೆ.

ತ್ರಿಪುರದಲ್ಲಿ ಬಿಜೆಪಿ ಜಯಭೇರಿ

ತ್ರಿಪುರದಲ್ಲಿ ಆಡಳಿತಾರೂಢ ಬಿಜೆಪಿಯು ಉಪಚುನಾವಣೆ ನಡೆದ ಎರಡಕ್ಕೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬೊಕ್ಸಾನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ತಫಜ್ಜಲ್‌ ಹುಸೇನ್‌ ಅವರು ಸಿಪಿಎಂನ ಮಿಜಾನ್‌ ಹುಸೇನ್‌ ವಿರುದ್ಧ 30,237 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಧನಪುರ ಕ್ಷೇತ್ರದಲ್ಲಿ ಬಿಜೆಪಿಯ ಬಿಂದು ದೇವನಾಥ್‌ ಅವರು ಸಿಪಿಎಂನ ಕೌಶಿಕ್‌ ಚಂದಾ ವಿರುದ್ಧ 18,871 ಮತಗಳಿಂದ ಗೆದ್ದಿದ್ದಾರೆ.

ಆರಂಭಿಕ ಟ್ರೆಂಡ್‌

ತಂದೆಯ ದಾಖಲೆ ಮುರಿದ ಚಾಂಡಿ ಉಮ್ಮನ್

ಕೇರಳದ ಪುತುಪಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್‌ ಅವರು 36,454 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಂದೆಯ ದಾಖಲೆಯನ್ನು ಮುರಿದಿದ್ದಾರೆ. ಉಮ್ಮನ್‌ ಚಾಂಡಿ ಅವರು 2011ರಲ್ಲಿ 33,245 ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ಪುತ್ರ ಚಾಂಡಿ ಉಮ್ಮನ್‌ ಅವರು 36,454 ಮತಗಳಿಂದ ಗೆದ್ದಿದ್ದಾರೆ. ಪುತುಪಳ್ಳಿ ಕ್ಷೇತ್ರದಿಂದ 12 ಬಾರಿ ಆಯ್ಕೆಯಾಗಿ ದಾಖಲೆ ಸೃಷ್ಟಿಸಿರುವ ಉಮ್ಮನ್‌ ಚಾಂಡಿ ಅವರು ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದಾರೆ.

ಇದನ್ನೂ ಓದಿ: Rahul Gandhi: 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ; ರಾಹುಲ್ ಗಾಂಧಿ ಭವಿಷ್ಯ

ಯಾವ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ?

Exit mobile version