ಪುಣೆ, ಮಹಾರಾಷ್ಟ್ರ: ಮಹಾರಾಷ್ಟ್ರದ ಪುಣೆಯ ಕಸಬಾ ಪೇಟೆಗೆ(Kasba Peth) ನಡೆದ ಬೈಎಲೆಕ್ಷನ್‌ನಲ್ಲಿ ಬಿಜೆಪಿಯ ಹೇಮಂತ್ ರಸಾನೆ(Hemanth Rasane) ಅವರನ್ನು ಸೋಲಿಸಿ, ಕಾಂಗ್ರೆಸ್ ಪಕ್ಷದ ರವೀಂದ್ರ ಧಾಂಗೇಕರ್ (Ravindra Dhangekar) ಅವರು ಜಯಶಾಲಿಯಾಗಿದ್ದಾರೆ. ಇದರೊಂದಿಗೆ, ಆಡಳಿತಾರೂಢ ಏಕನಾಥ ಶಿಂಧೆಯ ಶಿವಸೇನೆ ಹಾಗೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿತ್ತು(Bypoll Results 2023).
ಬಿಜೆಪಿಯು ಚುನಾವಣೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿತ್ತು. ತನ್ನ ಎಲ್ಲಾ ಹಿರಿಯ ನಾಯಕರನ್ನು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರಕ್ಕೆ ನಿಯೋಜಿಸಿತ್ತು. ಆದರೆ, ಅವರ ಪ್ರಯತ್ನದ ಹೊರತಾಗಿಯೂ ಪಕ್ಷಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಸಾನೆ ಪರ ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: Erode East bye-election: ಈರೋಡ್ ಬೈಎಲೆಕ್ಷನ್, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಕಮಲ್ ಹಾಸನ್
1995ರಿಂದ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಈ ಫಲಿತಾಂಶವು ಬಿಜೆಪಿಗೆ ಶಾಕ್ ನೀಡಿದೆ. ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ವಿಜಯವನ್ನು ಆಚರಣೆ ಮಾಡುತ್ತಿದ್ದಾರೆ. ಈ ಕ್ಷೇತ್ರದ ಚುನಾವಣೆಯ ಫಲಿತಾಂಶವು ಮಹಾರಾಷ್ಟ್ರದ ರಾಜಕಾರಣದ ಮೇಲೆ ಪ್ರಭಾವ ಬೀರಲಿದೆ ಎಂಬಂತೆ ಬಿಂಬಿಸಲಾಗುತ್ತಿದೆ.