Site icon Vistara News

Bypolls 2023: ಪಂಜಾಬ್, ಯುಪಿ, ಮೇಘಾಲಯ, ಒಡಿಶಾ ರಾಜ್ಯದ 5 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ

Bypolls for 5 constituencies in Punjab, UP, Meghalaya, Odisha

ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಬುಧವಾರ ದಿಲ್ಲಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಿ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ದೇಶದ ವಿವಿಧೆಡೆ ಖಾಲಿಯಾಗಿರುವ ಒಂದು ಲೋಕಸಭೆ ಹಾಗೂ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ (Bypolls 2023) ಕೂಡ ಘೋಷಣೆ ಮಾಡಿದೆ. ಕರ್ನಾಟಕ ಎಲೆಕ್ಷನ್ ವೇಳಾಪಟ್ಟಿಯಂತೆ ಈ ಬೈ ಎಲೆಕ್ಷನ್‌ಗಳು ನಡೆಯಲಿವೆ.

ಯಾವ ಯಾವ ರಾಜ್ಯಗಳಲ್ಲಿ ಬೈಎಲೆಕ್ಷನ್

ಒಡಿಶಾ, ಉತ್ತರ ಪ್ರದೇಶ, ಮೇಘಾಲಯ ರಾಜ್ಯಗಳ ವಿಧಾನಸಭೆ ಕ್ಷೇತ್ರಗಳಿಗೆ ಬೈಎಲೆಕ್ಷನ್ ನಡೆದರೆ, ಪಂಜಾಬ್‌ನ ಒಂದು ಸಂಸತ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದ ಎರಡು ಹಾಗೂ ಒಡಿಶಾ, ಮೇಘಾಲಯದ ತಲಾ ಒಂದೊಂದು ವಿಧಾನಸಭೆ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲಿದೆ.

ಯಾವ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದೆ

ಲೋಕಸಭೆ ಕ್ಷೇತ್ರ: ಜಲಂಧರ್, (ಪಂಜಾಬ್). ವಿಧಾನಸಭೆ ಕ್ಷೇತ್ರಗಳು: ಜರ್ಸುಗುಡ (ಒಡಿಶಾ), ಛನ್ಬೆ (ಉತ್ತರ ಪ್ರದೇಶ), ಸುಯರ್ (ಉತ್ತರ ಪ್ರದೇಶ) ಮತ್ತು ಸೊಹಿಯಾಂಗ್ (ಮೇಘಾಲಯ). ಈ ಎಲ್ಲಾ ಐದು ಸ್ಥಾನಗಳಿಗೆ ಮೇ 10 ರಂದು ಮತದಾನ ನಡೆಯಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ದಿನ ಅಂದರೆ ಮೇ 13ರಂದು ರಿಸಲ್ಟ್ ಪ್ರಕಟವಾಗಲಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾ ಪಟ್ಟಿ ಹೀಗಿದೆ…

ಗೆಜೆಟ್ ನೋಟಿಫಿಕೇಷನ್- ಏ.13
ನಾಮಿನೇಷನ್‌ಗೆ ಕೊನೆ ದಿನ- ಏ.20
ನಾಮಪತ್ರ ಪರಿಶೀಲನೆ- ಏ.21
ನಾಮಪತ್ರ ಹಿಂಪಡೆಯಲು ಕೊನೆ ದಿನ- ಏ.24
ಮತದಾನ ದಿನಾಂಕ- ಮೇ 10
ಫಲಿತಾಂಶ ಪ್ರಕಟ- ಮೇ 13
ಎಲೆಕ್ಷನ್ ಪ್ರಕ್ರಿಯೆ ಪೂರ್ಣ- ಮೇ 15

ಇದನ್ನೂ ಓದಿ: Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ

ವಯನಾಡ ಲೋಕಸಭೆ ಕ್ಷೇತ್ರಕ್ಕೆ ಯಾವಾಗ ಉಪ ಚುನಾವಣೆ?

ಕೇಂದ್ರ ಚುನಾವಣಾ ಆಯೋಗವು ಬುಧವಾರ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜತೆಗೆ, ಹಲವು ರಾಜ್ಯಗಳಲ್ಲಿನ ಬೈ ಎಲೆಕ್ಷನ್ ವೇಳಾಪಟ್ಟಿಯನ್ನು ತಿಳಿಸಿದೆ. ಆದರೆ, ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ವಯನಾಡ ಕ್ಷೇತ್ರಕ್ಕೆ ಬೈಎಲೆಕ್ಷನ್ ಘೋಷಣೆ ಮಾಡಿಲ್ಲ. ರಾಹುಲ್ ಗಾಂಧಿ ಅವರ ಮನವಿ ಮತ್ತು ಅದರ ಬಗ್ಗೆ ನಿರ್ಧಾರಕ್ಕೆ ಮುಂಚಿತವಾಗಿ ಚುನಾವಣೆಯನ್ನು ಘೋಷಿಸಿದ್ದರೆ ಚುನಾವಣಾ ಸಂಸ್ಥೆಗೆ ಸವಾಲು ಹಾಕುವುದಾಗಿ ಕಾಂಗ್ರೆಸ್ ಹೇಳಿತ್ತು.

Exit mobile version