Site icon Vistara News

Bypolls Results 2023: ವಿವಿಧ ರಾಜ್ಯಗಳ 7 ಕ್ಷೇತ್ರಗಳಲ್ಲಿ 4 ಕ್ಷೇತ್ರ ಗೆದ್ದ ಇಂಡಿಯಾ ಕೂಟ! ಬೈಎಲೆಕ್ಷನ್‌ನಲ್ಲಿ ಬಿಜೆಪಿಗೆ ಹಿನ್ನಡೆ

Phalodi satta market

ನವವದೆಹಲಿ: ವಿವಿಧ ರಾಜ್ಯಗಳ ವಿಧಾನಸಭೆಗೆ ನಡೆದ ಏಳು ಕ್ಷೇತ್ರದ ಉಪ ಚುನಾವಣೆಯಲ್ಲಿ (Bypolls 2023) ಇಂಡಿಯಾ ಕೂಟ (India Bloc) 4 ಕ್ಷೇತ್ರಗಳನ್ನು ಗೆದ್ದರೆ, ಬಿಜೆಪಿ 3 ಸ್ಥಾನಗಳಿಗಷ್ಟೇ ತೃಪ್ತಿಪಡಬೇಕಾಯಿತು. (Bypolls Results 2023). ತ್ರಿಪುರಾದ (Tripura) ಧನ್ಪುರ್ ಮತ್ತು ಬಾಕ್ಸಾನಗರ್ ಹಾಗೂ ಉತ್ತರಾಖಂಡದ (Uttarakhand) ಬಾಗೇಶ್ವರ್ ಕ್ಷೇತ್ರದಲ್ಲಿ ಬಿಜೆಪಿ ಗೆದಿದ್ದೆ. ಈ ಪೈಕಿ ಬಾಕ್ಸಾನಗರ್ ಕ್ಷೇತ್ರವು ಈ ಹಿಂದೆ ಸಿಪಿಎಂನ ಪಾಲಾಗಿತ್ತು! ಇದೇ ವೇಳೆ, ಪಶ್ಚಿಮ ಬಂಗಾಳದ (West Bengal) ಧುಪ್ಗುರಿಯಲ್ಲಿ ಟಿಎಂಸಿ, ಉತ್ತರ ಪ್ರದೇಶದ (Uttar Pradesh) ಘೋಸಿಯಲ್ಲಿ ಸಮಾಜವಾದಿ ಪಾರ್ಟಿ, ಕೇರಳದ (Keral) ಪುತ್ತುಪ್ಪಲ್ಲಿಯಲ್ಲಿ ಕಾಂಗ್ರೆಸ್ (Congress) ಮತ್ತು ಜಾರ್ಖಂಡ್‌ನ ದುಮ್ರಿಯಲ್ಲಿ ಜೆಎಂಎಂ (JMM) ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದ ದುಪ್ಗುರಿ ಕ್ಷೇತ್ರವನ್ನು ಈ ಮೊದಲು ಬಿಜೆಪಿ ಪ್ರತಿನಿಧಿಸುತ್ತಿತ್ತು. ಅಲ್ಲೀಗ ತೃಣಮೂಲ ಕಾಂಗ್ರೆಸ್ (Trinmool Congress) ಗೆದ್ದಿದೆ.

ತ್ರಿಪುರಾದಲ್ಲಿ ಬಿಜೆಪಿಯ ತಫಜ್ಜಲ್ ಹೊಸೈನ್ ಅವರು ಬೊಕ್ಸಾನಗರ ಕ್ಷೇತ್ರವನ್ನು ಗೆದ್ದುಕೊಂಡರೆ, ಬುಡಕಟ್ಟು ಪ್ರಾಬಲ್ಯವಿರುವ ಧನಪುರದಲ್ಲಿ ಬಿಂದು ದೇಬನಾಥ್ ಜಯಶಾಲಿಯಾಗಿದ್ದಾರೆ. ಉತ್ತರಾಖಂಡದ ಬಾಗೇಸ್‌ವರ್‌ನಲ್ಲಿ, ಬಿಜೆಪಿಯ ಪಾರ್ವತಿ ದಾಸ್‌ಗಿಂತ ಆರಂಭಿಕ ಮುನ್ನಡೆ ಸಾಧಿಸಿದ ನಂತರ, ಕಾಂಗ್ರೆಸ್ ಪಕ್ಷದ ಬಸಂತ್ ಕುಮಾರ್ ಹಿಂದೆ ಬಿದ್ದರು. ಅಂತಿಮವಾಗಿ ದಾಸ್ ಅವರು 2,400 ಮತಗಳಿಂದ ಕುಮಾರ್ ಅವರನ್ನು ಸೋಲಿಸಿದರು. ನಾಲ್ಕು ಬಾರಿ ಶಾಸಕರಾಗಿದ್ದ ಚಂದನ್ ರಾಮ್ ದಾಸ್ ಅವರು ಏಪ್ರಿಲ್‌ನಲ್ಲಿ ನಿಧನರಾದ ನಂತರ ಉಪಚುನಾವಣೆ ನಡೆದಿತ್ತು.

ಆಡಳಿತಾರೂಢ ಸಿಪಿಎಂಗೆ ದೊಡ್ಡ ಹೊಡೆತ ನೀಡುವ ಮೂಲಕ ಕಾಂಗ್ರೆಸ್-ಯುಡಿಎಫ್ ಮೈತ್ರಿಕೂಟದ ಚಾಂಡಿ ಉಮ್ಮನ್ ಕೇರಳದ ಪುತ್ತುಪ್ಪಲ್ಲಿ ಉಪಚುನಾವಣೆಯಲ್ಲಿ 36,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಉಮ್ಮನ್ ಅವರು ಮೊದಲ ಸುತ್ತಿನಲ್ಲಿ ಗೆಲುವಿನ ಹಾದಿ ಹಿಡಿದಿದ್ದರು. ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ದುಮ್ರಿ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಭ್ಯರ್ಥಿ ಬೇಬಿ ದೇವಿ ಜಯಗಳಿಸಿದ್ದಾರೆ. ಎಜೆಎಸ್‌ಯು ಪಕ್ಷದ ಯಶೋದಾ ದೇವಿ ಅವರನ್ನು 17,000 ಮತಗಳಿಂದ ಸೋಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: India Bloc : ಇಂಡಿಯಾ ಕೂಟದ ಸಮಿತಿಗಳಿಗೆ ಕನಿಮೋಳಿ ಸೇರಿದಂತೆ 7 ಹೊಸ ಸದಸ್ಯರ ನೇಮಕ

ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಜನಪ್ರಿಯ ಒಬಿಸಿ ನಾಯಕ ದಾರಾ ಸಿಂಗ್ ಚೌಹಾಣ್ ಅವರು ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರ ರಾಜೀನಾಮೆಯಿಂದ ಘೋಸಿಯಲ್ಲಿ ಉಪಚುನಾವಣೆ ನಡೆದಿತ್ತು. ಸಮಾಜವಾದಿ ಪಕ್ಷದ ಸುಧಾಕರ್ ಸಿಂಗ್ ಅವರು 42,000 ಮತಗಳಿಂದ ಮುನ್ನಡೆಯಲ್ಲಿದ್ದು, ಗೆಲುವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಪರಿಣಾಮ, ಈ ಹಿಂದೆ ಬಿಜೆಪಿ ಶಾಸಕರಿದ್ದ ಧುಗ್ಪುರಿ ಕ್ಷೇತ್ರದಲ್ಲಿಇಂಡಿಯಾ ಬ್ಲಾಕ್ ಗೆಲ್ಲಲು ಸಾಧ್ಯವಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version