Site icon Vistara News

Cabinet Meeting: ವಿಶೇಷ ಸಂಸತ್ ಅಧಿವೇಶನಲ್ಲಿ ಮಹಿಳಾ ಮೀಸಲು ವಿಧೇಯಕ ಮಂಡನೆ! ಸಂಪುಟ ಸಭೆಯಲ್ಲಿ ನಿರ್ಧಾರ?

PM Narendra Modi

ನವದೆಹಲಿ: ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವನ್ನು (Women Reservation Bill) ಕೇಂದ್ರ ಸರ್ಕಾರವು ವಿಶೇಷ ಸಂಸತ್ ಅಧಿವೇಶನ ಮಂಡಿಸುವ ಬಗ್ಗೆ, ಸೋಮವಾರ ಸಂಜೆ ನಡೆದ ಸಚಿವ ಸಂಪುಟದಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಚಿವ ಸಂಪುಟ ಸಭೆ ನಡೆದ ಸಾಮಾನ್ಯವಾಗಿ ಕೇಂದ್ರ ಸಚಿವರು, ಸಂಪುಟ ತೀರ್ಮಾನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ, ಸೋಮವಾರ ಆ ರೀತಿಯ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿಲ್ಲ. ಇದರೊಂದಿಗೆ ವಿಶೇಷ ಸಂಸತ್ ಅಧಿವೇಶನದ ಅಜೆಂಡಾ ಬಗೆಗಿರುವ ಕುತೂಹಲವನ್ನು ಹಾಗೆ ಕಾಯ್ದಿಟ್ಟುಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.

ಈ ವಿಶೇಷ ಅಧಿವೇಶನದಲ್ಲಿ “ಐತಿಹಾಸಿಕ ನಿರ್ಧಾರಗಳನ್ನು” ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮುಂಜಾನೆ ನೀಡಿದ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಸಭೆಯು ಕುತೂಹಲವನ್ನು ಹೆಚ್ಚಿಸಿತ್ತು. ಅದಕ್ಕೂ ಮುನ್ನ ಪ್ರಮುಖ ಸಭೆಗಳ ಸರಣಿಯನ್ನು ಸಹ ನಡೆಸಲಾಯಿತು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಸಭೆಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡ ಉಪಸ್ಥಿತರಿದ್ದರು.

ಮಹಿಳೆಯರಿಗೆ ಅಥವಾ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೇರಿದಂತೆ “ಒಂದು ರಾಷ್ಟ್ರ ಒಂದು ಚುನಾವಣೆ” ಮತ್ತು ದೇಶದ ಹೆಸರು ಬದಲಾವಣೆವರೆಗಿನ ಅನೇಕ ಬಿಲ್‌ಗಳ ಕುರಿತು ಚರ್ಚೆ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರವು ಇದುವರೆಗೂ ಬಿಟ್ಟುಕೊಟ್ಟಿಲ್ಲ.

ನೆಹರೂ ಹೊಗಳುತ್ತಲೇ ಕಾಂಗ್ರೆಸ್‌ಗೆ ಕುಟುಕಿದ ಮೋದಿ

ಹಳೆಯ ಸಂಸತ್‌ ಸಂಸತ್‌ ಭವನದಲ್ಲಿ (Special Parliament Session) ಸೋಮವಾರ ಕೊನೆಯ ಅಧಿವೇಶನದ ದಿನವಾದ ಕಾರಣ ನರೇಂದ್ರ ಮೋದಿ ಅವರು ಹಲವರಿಗೆ ಧನ್ಯವಾದ ತಿಳಿಸಿದರು. ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಅವರು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಸೇರಿ ಹಲವು ವ್ಯಕ್ತಿಗಳನ್ನು ಸ್ಮರಿಸಿದರು. ಹಿಂದಿನ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಅವರ ಕಾರ್ಯವನ್ನು ಶ್ಲಾಘಿಸುತ್ತಲೇ, ತುರ್ತು ಪರಿಸ್ಥಿತಿ ಜಾರಿಯಾಗಿದ್ದೂ ಇದೇ ಸಂಸತ್‌ನಲ್ಲಿ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕುಟುಕಿದರು.

ಈ ಸುದ್ದಿಯನ್ನೂ ಓದಿ: Women’s Reservation Bill | ಮಹಿಳಾ ಮೀಸಲು ವಿಧೇಯಕ ಮಂಡನೆ, ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

“ಹಳೆಯ ಸಂಸತ್‌ ಭವನವು ಕಳೆದ 75 ವರ್ಷದಲ್ಲಿ ದೇಶದ ವಿಕಾಸಕ್ಕೆ ಕಾರಣವಾಗಿದೆ. ಇದೇ ಸಂಸತ್‌ನಲ್ಲಿ ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು ಸಭೆ ನಡೆಸಲಾಗಿದೆ. ನೆಹರು ಅವರ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಸಚಿವರಾದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಸಮಗ್ರ ಜನರಿಗೆ ತಲುಪುವ ಯೋಜನೆಗಳನ್ನು ರೂಪಿಸಿದರು. ಆ ಮೂಲಕ ದೇಶದ ಜನರಿಗೆ ಯೋಜನೆ ತಲುಪುವಲ್ಲಿ ಮೊದಲ ಸರ್ಕಾರವು ಮುನ್ನುಡಿ ಬರೆಯಿತು” ಎಂದು ಮೋದಿ ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version