Site icon Vistara News

Cable Television Network: ಕೇಬಲ್ ಟಿವಿ ನಿಯಮಗಳಿಗೆ ತಿದ್ದುಪಡಿ ಮಾಡಿದ ಪ್ರಸಾರ ಸಚಿವಾಲಯ; ಏನೇನು ಬದಲಾವಣೆ?

cable tv

ಹೊಸದಿಲ್ಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (information & broadcast ministry) ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (Cable Television Network) ನಿಯಮಗಳು- 1994ರಲ್ಲಿ ಹಲವು ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ಗುರುವಾರ ಹೊರಡಿಸಿದೆ. ಮಲ್ಟಿ-ಸಿಸ್ಟಮ್ ಆಪರೇಟರ್‌ಗಳಿಗೆ (MSO) ನೋಂದಣಿಗಳ ನವೀಕರಣಕ್ಕಾಗಿ ಹೊಸ ಕಾರ್ಯವಿಧಾನವನ್ನು ಇದು ನಿಗದಿಪಡಿಸಿದೆ.

ಇಂಟರ್‌ನೆಟ್‌ ಒದಗಿಸುವಿಕೆಗಾಗಿ (Internet penetration) ಕೇಬಲ್ ಆಪರೇಟರ್‌ಗಳು (Cable operators) ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರೊಂದಿಗೆ (broadband providers) ತಮ್ಮ ಮೂಲಸೌಕರ್ಯವನ್ನು ಹಂಚಿಕೊಳ್ಳಲು ಸಹ ಪರಿಷ್ಕೃತ ನಿಯಮಗಳು ಅನುಮತಿಸುತ್ತವೆ.

ನೂತನ ನಿಯಮಗಳ ಅಡಿಯಲ್ಲಿ, MSOಗಳು ಆನ್‌ಲೈನ್ ನೋಂದಣಿ ಅಥವಾ ನವೀಕರಣಕ್ಕಾಗಿ ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್ ಅನ್ನು ಬಳಸಬೇಕಾಗುತ್ತದೆ. ನೋಂದಣಿಗಳು ಹತ್ತು ವರ್ಷಗಳ ಕಾಲ ಮಾನ್ಯವಾಗಿರುತ್ತವೆ. ನವೀಕರಣಕ್ಕಾಗಿ ₹1 ಲಕ್ಷದ ಸ್ಥಿರ ಸಂಸ್ಕರಣಾ ಶುಲ್ಕವಿದೆ. ನವೀಕರಣಕ್ಕಾಗಿ ಅರ್ಜಿಗಳನ್ನು ಪ್ರಸ್ತುತ ನೋಂದಣಿಯ ಅವಧಿ ಮುಗಿಯುವ ಎರಡರಿಂದ ಏಳು ತಿಂಗಳ ಮೊದಲು ಸಲ್ಲಿಸಬೇಕು.

ನವೀಕರಣ ಪ್ರಕ್ರಿಯೆಯು ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ. ಇದು ಕೇಬಲ್ ಆಪರೇಟರ್‌ಗಳಿಗೆ ತಮ್ಮ ಸೇವೆಗಳನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಗ್ಯಾರಂಟಿ ನೀಡುತ್ತದೆ. ಆದ್ದರಿಂದ ಈ ವಲಯವನ್ನು ವಿದೇಶಿ ಹೂಡಿಕೆಗೆ ಆಕರ್ಷಕವಾಗಿ ಮಾಡುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಏಳು ತಿಂಗಳೊಳಗೆ ನೋಂದಣಿ ಅವಧಿ ಮುಗಿಯುವ ಎಂಎಸ್‌ಒಗಳು ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಯಾವುದೇ ಸಹಾಯದ ಅಗತ್ಯವಿದ್ದರೆ, ಪೋರ್ಟಲ್‌ನಲ್ಲಿ ಲಭ್ಯವಿರುವ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಇಮೇಲ್ ಕಳುಹಿಸಬಹುದು.

ಹಿಂದೆ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಮಗಳು- 1994ರ ಅಡಿಯಲ್ಲಿ ಹೊಸ MSO ನೋಂದಣಿಗಳನ್ನು ಮಾತ್ರ ನೀಡಲಾಗುತ್ತಿತ್ತು. ನಿಯಮಗಳು MSO ನೋಂದಣಿಗಳಿಗೆ ಮಾನ್ಯತೆಯ ಅವಧಿಯನ್ನು ನಿರ್ದಿಷ್ಟಪಡಿಸಿರಲಿಲ್ಲ ಅಥವಾ ಆನ್‌ಲೈನ್ ಅರ್ಜಿಗಳ ಕಡ್ಡಾಯ ಫೈಲಿಂಗ್ ಅನ್ನೂ ನಿಗಡಿಪಡಿಸಿರಲಿಲ್ಲ.

“ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರೊಂದಿಗೆ ಕೇಬಲ್ ಆಪರೇಟರ್‌ಗಳ ಮೂಲಸೌಕರ್ಯ ಹಂಚಿಕೆಗೆ ಸಂಬಂಧಿಸಿದ ನಿಬಂಧನೆಯನ್ನು ಸೇರಿಸುವುದರಿಂದ ವರ್ಧಿತ ಇಂಟರ್ನೆಟ್ ಒದಗಿಸುವಿಕೆ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯ ಅವಳಿ ಪ್ರಯೋಜನವನ್ನು ಒದಗಿಸುತ್ತದೆ. ಇದು ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಹೆಚ್ಚುವರಿ ಮೂಲಸೌಕರ್ಯದ ಅಗತ್ಯವನ್ನು ಕಡಿಮೆ ಮಾಡುತ್ತದೆ” ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: Cable TV Channel Price hike : 4.5 ಕೋಟಿ ಕೇಬಲ್‌ ಟಿ.ವಿ ಗ್ರಾಹಕರಿಗೆ ಜೀ, ಸ್ಟಾರ್‌, ಸೋನಿ ಪ್ರಸಾರ ಸ್ಥಗಿತ

Exit mobile version