Site icon Vistara News

Amit Shah: ಮೋದಿ ವಿರುದ್ಧ ರಾಹುಲ್‌ ಗಾಂಧಿ ಸಮರ್ಥ ಪ್ರಧಾನಿ ಅಭ್ಯರ್ಥಿಯೇ? ಅಮಿತ್‌ ಶಾ ಉತ್ತರ ಏನು?

bjp karnataka amit shah road show postponed

ನವದೆಹಲಿ: ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ರಾಹುಲ್‌ ಗಾಂಧಿ ಅವರ ವರ್ಚಸ್ಸು ಹೆಚ್ಚಾಗಿದೆ. ದೇಶಾದ್ಯಂತ ೧೪೫ ದಿನ, ೩,೫೦೦ಕ್ಕೂ ಅಧಿಕ ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ರಾಹುಲ್‌ ಗಾಂಧಿ ಅವರು ಜನರ ಬೆಂಬಲ ಗಳಿಸಿದ್ದಾರೆ. ಇದರ ಬೆನ್ನಲ್ಲೇ, ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೀವ್ರ ಸ್ಪರ್ಧೆಯೊಡ್ಡಲು, ಪ್ರಬಲ ಪ್ರಧಾನಿ ಅಭ್ಯರ್ಥಿ ಎನಿಸಲು ರಾಹುಲ್‌ ಗಾಂಧಿ ಸಮರ್ಥರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ, ರಾಹುಲ್‌ ಗಾಂಧಿ ಅವರು ಮೋದಿಗೆ ಪ್ರಬಲ ಸ್ಪರ್ಧಿಯೇ ಎಂಬ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರಿಸಿದ್ದು, “ಮೋದಿ ಅವರಿಗೆ ಸ್ಪರ್ಧೆಯೇ ಇಲ್ಲ” ಎಂದಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅಮಿತ್‌ ಶಾ, “ಪ್ರಧಾನಿ ನರೇಂದ್ರ ಮೋದಿ ಅವರು ಕಡಿಮೆ ಅವಧಿಯಲ್ಲಿಯೇ ದೇಶವನ್ನು ಅಭಿವೃದ್ಧಿಗೊಳಿಸಿದ್ದಾರೆ. ದೇಶದ ೬೦ ಕೋಟಿ ಬಡವರಿಗೆ ಮೋದಿ ಸರ್ಕಾರ ಆಸರೆಯಾಗಿದೆ. ಸರ್ವ ಕ್ಷೇತ್ರಗಳಲ್ಲಿಯೂ ಭಾರತ ಮುನ್ನಡೆಯಲ್ಲಿದೆ. ಹಾಗಾಗಿ, ಜನಬೆಂಬಲ ಅವರ ಪರವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪರ್ಧೆಯೇ ಇಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅದಾನಿ ಪ್ರಕರಣದ ಬಗ್ಗೆ ಶಾ ಪ್ರತಿಕ್ರಿಯೆ

ಗೌತಮ್‌ ಅದಾನಿ ವಿರುದ್ಧ ಹಿಂಡನ್‌ಬರ್ಗ್‌ ತನಿಖಾ ವರದಿ, ಅದು ದೇಶಾದ್ಯಂತ ಸುದ್ದಿಯಾದ ಕುರಿತು ಪ್ರತಿಕ್ರಿಯಿಸಿದ ಅಮಿತ್‌ ಶಾ, “ದೇಶದ ಕಾನೂನು ಸಮರ್ಥವಾಗಿದ್ದು, ಅದರ ಪಾಡಿಗೆ ಅದು ಕಾರ್ಯನಿರ್ವಹಿಸುತ್ತಿದೆ. ಪ್ರಕರಣದಲ್ಲಿ ಸರ್ಕಾರ ಮುಚ್ಚಿಡುವಂಥದ್ದು ಏನೂ ಇಲ್ಲ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Amit Shah: ಮಂಡ್ಯದ ಜನರು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ; ಈ ಬಾರಿ ಬಿಜೆಪಿಗೆ ಅಧಿಕಾರ ಖಚಿತ: ಅಮಿತ್‌ ಶಾ ಸಂದರ್ಶನ

Exit mobile version