Site icon Vistara News

Cancer: ಬ್ಯಾಂಡೇಜ್ ಬಳಸುವವರಿಗೆ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್!

Cancer

ಬೆಂಗಳೂರು: ಗಾಯ ವಾಸಿಯಾಗಲು ಬ್ಯಾಂಡೇಜ್ ಬಳಸುತ್ತೇವೆ, ಆದರೆ ಈ ಬ್ಯಾಂಡೇಜ್ ಗಳೇ ಕ್ಯಾನ್ಸರ್ ನಂತಹ (Cancer) ಮಾರಕ ಕಾಯಿಲೆಗೆ ಕಾರಣವಾಗುತ್ತವೆ ಎಂಬುದನ್ನು ನಂಬಲು ಕಷ್ಟವೆನಿಸಬಹುದು, ಆದರೆ ಇದು ನಿಜ ಎನ್ನುತ್ತವೆ ಇತ್ತೀಚಿನ ಅಧ್ಯಯನ. ಅಧ್ಯಯನದ ಪ್ರಮುಖ ಆವಿಷ್ಕಾರವು ಕೇವಲ ಆಘಾತಕಾರಿ ಮಾತ್ರವಲ್ಲ, ಬ್ಯಾಂಡೇಜ್ ಬಳಸುವ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ದೊಡ್ಡ ಎಚ್ಚರಿಕೆಯಾಗಿದೆ.

ಏನಿದು PFAS?

ಇತ್ತೀಚೆಗೆ ಪರೀಕ್ಷಿಸಲಾದ ಇಪತ್ತಾರು ಬ್ಯಾಂಡೇಜ್ ಗಳಲ್ಲಿ ಆರ್ಗ್ಯಾನಿಕ್ ಫ್ಲೋರಿನ್ ಅಂಶ ಪತ್ತೆಯಾಗಿದೆ, ಇದು PFAS ಎಂದು ಕರೆಯಲ್ಪಡುವ ರಾಸಾಯನಿಕಗಳ ಗುಂಪಿನ ಸೂಚಕವಾಗಿದೆ, ಮಮವೇಶನ್ (Mamavation) ಹೊಸ ವರದಿಯು ಇದನ್ನು ಬಹಿರಂಗಪಡಿಸಿದೆ. ಈ ರಾಸಾಯನಿಕಗಳು ತೆರೆದ ಗಾಯಗಳ ಮೂಲಕ ರಕ್ತವನ್ನು ಪ್ರವೇಶಿಸಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನ ತಿಳಿಸಿದೆ.

ಎನ್ವಿರಾನ್ಮೆಂಟಲ್ ವೆಲ್ನೆಸ್ ಬ್ಲಾಗ್ ಆಂಡ್ ಕಮ್ಯುನಿಟಿ, EHN.org  ಸಹಭಾಗಿತ್ವದಲ್ಲಿ  US ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ-ಪ್ರಮಾಣೀಕೃತ ಲ್ಯಾಬ್‌ನಿಂದ 40 ಬ್ಯಾಂಡೇಜ್‌ಗಳನ್ನು ಪರೀಕ್ಷೆಗೊಳಪಡಿಸಿತು. ಅವುಗಳಲ್ಲಿ 26 ಆರ್ಗ್ಯಾನಿಕ್ ಫ್ಲೋರಿನ್ ಅನ್ನು ಪತ್ತೆಹಚ್ಚಬಹುದಾದ ಮಟ್ಟವನ್ನು ಹೊಂದಿದೆ. ಕಪ್ಪು ಮತ್ತು ಕಂದು ಬಣ್ಣದ ಚರ್ಮದ ಟೋನ್‌ಗಳನ್ನು ಹೊಂದಿರುವ 16 ಬ್ಯಾಂಡೇಜ್‌ಗಳಲ್ಲಿ 10 ಬ್ಯಾಂಡೇಜ್ ಗಳು PFAS ನ ಶಾಶ್ವತ ರಾಸಾಯನಿಕಗಳ ಸೂಚನೆಗಳನ್ನು ಹೊಂದಿದ್ದವು ಎಂದು ಅಧ್ಯಯನ ತಿಳಿಸಿದೆ.

ಪರೀಕ್ಷಿಸಿದ ಒಟ್ಟು ಬ್ಯಾಂಡೇಜ್‌ಗಳಲ್ಲಿ ಶೇ.65 PFAS “ಶಾಶ್ವತ ರಾಸಾಯನಿಕಗಳ” ಸೂಚನೆಗಳನ್ನು ಹೊಂದಿದ್ದವು. ಜನರಿಗೆ ಮಾರಾಟ ಮಾಡಲಾದ ಕಪ್ಪು ಮತ್ತು ಕಂದು ಬಣ್ಣದ ಚರ್ಮದ ಟೋನ್‌ಗಳನ್ನು ಹೊಂದಿರುವ ಬ್ಯಾಂಡೇಜ್ ಗಳಲ್ಲಿ ಶೇ. 63 ಬ್ಯಾಂಡೇಜ್‌ಗಳು PFAS “ಶಾಶ್ವತ ರಾಸಾಯನಿಕಗಳ” ಸೂಚನೆಗಳನ್ನು ಹೊಂದಿದ್ದವು. 11 ppm ನಿಂದ 328 ppm ವರೆಗಿನ ಆರ್ಗ್ಯಾನಿಕ್ ಫ್ಲೋರಿನ್ ಮಟ್ಟವನ್ನು ಕಂಡುಹಿಡಿದಿದೆ.

ತೆರೆದ ಗಾಯಗಳ ಮೇಲೆ ಬ್ಯಾಂಡೇಜ್‌ಗಳನ್ನು ಹಾಕುವುದರಿಂದ ಮಕ್ಕಳು ಮತ್ತು ವಯಸ್ಕರನ್ನು PFAS ಗೆ ಒಡ್ಡಬಹುದು. ಗಾಯದ ಆರೈಕೆಗಾಗಿ ಪಿಎಫ್‌ಎಎಸ್ ಅಗತ್ಯವಿರುವುದಿಲ್ಲ ಎಂಬುದು ಡೇಟಾದಿಂದ ಸ್ಪಷ್ಟವಾಗಿದೆ. ಆದ್ದರಿಂದ ಉದ್ಯಮವು ಸಾರ್ವಜನಿಕರ ಹಿತದೃಷ್ಟಿಯಿಂದ ಪಿಎಫ್‌ಎಎಸ್-ಮುಕ್ತ ವಸ್ತುಗಳನ್ನು ಆಯ್ಕೆ ಮಾಡಬೇಕು ಎಂದು ಅಧ್ಯಯನದ ಸಹ-ಲೇಖಕಿ ಮತ್ತು ರಾಷ್ಟ್ರೀಯ ಪರಿಸರ ಆರೋಗ್ಯ ವಿಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ವಿಷಶಾಸ್ತ್ರ ಕಾರ್ಯಕ್ರಮದ ಮಾಜಿ ನಿರ್ದೇಶಕರು ಡಾ. ಲಿಂಡಾ ಎಸ್. ಬಿರ್ನ್‌ಬಾಮ್ ಕಳವಳ ವ್ಯಕ್ತಪಡಿಸಿದ್ದಾರೆ.

ಬ್ಯಾಂಡೇಜ್‌ಗಳಲ್ಲಿ PFAS ಅನ್ನು ಏಕೆ ಬಳಸಲಾಗುತ್ತದೆ?

Mamavation ಪ್ರಕಾರ, PFAS ರಾಸಾಯನಿಕಗಳನ್ನು ಅವುಗಳ ಜಲನಿರೋಧಕ ಗುಣಗಳಿಗಾಗಿ ಬ್ಯಾಂಡೇಜ್‌ಗಳಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಈ ರಾಸಾಯನಿಕಗಳು ಬೆಳವಣಿಗೆ, ಸಂತಾನೋತ್ಪತ್ತಿ, ಸ್ಥೂಲಕಾಯತೆ ಮತ್ತು ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ವಿವಿಧ ಆರೋಗ್ಯ ವಿಷಯಗಳಿಗೆ ಸಂಬಂಧಿಸಿವೆ. PFAS ಮತ್ತು ಪಾಲಿಫ್ಲೋರೊಅಲ್ಕೈಲ್ ಪದಾರ್ಥಗಳು, ಶಾಖ, ತೈಲ, ಕಲೆಗಳು, ಗ್ರೀಸ್ ಮತ್ತು ನೀರಿಗೆ ನಿರೋಧಕವಾದ ಸಂಶ್ಲೇಷಿತ ರಾಸಾಯನಿಕಗಳಾಗಿವೆ. ಅವು ಸಾಮಾನ್ಯವಾಗಿ ಅಂಟುಗಳು, ನಾನ್‌ಸ್ಟಿಕ್ ಕುಕ್‌ವೇರ್ ಮತ್ತು ಆಹಾರ ಪ್ಯಾಕೇಜಿಂಗ್‌ನಂತಹ ಉತ್ಪನ್ನಗಳಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ:Rahul Gandhi: ರಾಹುಲ್‌ ಗಾಂಧಿ ಯಾವ್ಯಾವ ಕಂಪನಿಗಳ ಶೇರು ಖರೀದಿಸಿದ್ದಾರೆ ನೋಡಿ!

ಅಧ್ಯಯನದ ಪ್ರಕಾರ ಹೆಚ್ಚಿನ ಮಟ್ಟದ ಫ್ಲೋರಿನ್ ಹೊಂದಿರುವ ಬ್ಯಾಂಡೇಜ್‌ಗಳು: ಬ್ಯಾಂಡ್-ಎಡ್, ಸಿವಿಎಸ್ ಹೆಲ್ತ್, ಇಕ್ವೇಟ್, ರೈಟ್ ಏಡ್, ಟಾರ್ಗೆಟ್, ಕುರಾಡ್, ಅಮೆಜಾನ್ ನ ಸೊಲಿಮೊ (100 ppm ಗಿಂತಲೂ ಹೆಚ್ಚು )

Exit mobile version