ನವದೆಹಲಿ: ಪ್ರಶ್ನೆಗಾಗಿ ನಗದು (cash for query) ಪ್ರಕರಣದ ಆರೋಪ ಎದುರಿಸುತ್ತಿದ್ದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (Mahua Moitra) ಅವರು ಲೋಕಸಭೆಯಿಂದ ಉಚ್ಚಾಟನೆಗೊಂಡ (Expelled from lok Sabha) ಬೆನ್ನಲ್ಲೇ, ಭಾರತೀಯ ಜನತಾ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ(BJP Party). ಬಿಜೆಪಿಯ ವಿರುದ್ಧ ಮುಂದಿನ 30 ವರ್ಷಗಳ ಕಾಲ, ಸಂಸತ್ತಿನ ಒಳಗೆ ಮತ್ತು ಹೊರಗೆ, ರಸ್ತೆಯಲ್ಲಿ ಹೋರಾಟ ನಡೆಸುತ್ತೇನೆ ಎಂದು ಮಹುವಾ ಮೋಯಿತ್ರಾ ಹೇಳಿದ್ದಾರೆ. ಭಾರತೀಯ ಜನತಾ ಪಾರ್ಟಿಯು ಮುಸ್ಲಿಮರು ಮತ್ತು ಮಹಿಳೆಯರನ್ನು ದ್ವೇಷಿಸುತ್ತದೆ ಎಂದು ಅವರು ಆರೋಪಿಸಿದರು(BJP Hates Muslim and Woman). ಈ ಮಧ್ಯೆ, ತಮ್ಮ ಪಕ್ಷದ ಸಂಸದೆಯಾಗಿದ್ದ ಮಹುವಾ ಮೋಯಿತ್ರಾ ಅವರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಪಂಗಾಳ ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಅವರು, ಮಹುವಾ ಉಚ್ಚಾಟನೆಯು ಸಾಂವಿಧಾನಿಕ ಹಕ್ಕುಗಳಿಗ ಮಾಡಿದ ದ್ರೋಹ ಎಂದು ಬಿಜೆಪಿ ವಿರುದ್ದ ಟೀಕಿಸಿದ್ದಾರೆ.
ಲಾಗಿನ್ ಪೋರ್ಟಲ್‌ನಿಂದ ರಾಷ್ಟ್ರೀಯ ಭದ್ರತೆಗೆ ಸವಾಲು ಉಂಟಾಗುತ್ತದೆಯೇ? ಅದಾನಿ ನಮ್ಮ ಎಲ್ಲ ಬಂದರುಗಳು, ಎಲ್ಲ ವಿಮಾನ ನಿಲ್ದಾಣಗಳನ್ನು ಖರೀದಿಸುತ್ತಿದ್ದಾನೆ… ಆತನ ಷೇರುದಾರರು ವಿದೇಶಿ ಹೂಡಿಕೆದಾರರು ಮತ್ತು ಗೃಹ ಸಚಿವಾಲಯವು ಆತನಿಗೆ ಕ್ಲೀನ್ ಚಿಟ್, ನಮ್ಮ ಎಲ್ಲ ಮೂಲಸೌಕರ್ಯಗಳನ್ನು ಖರೀದಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ಮಹುವಾ ಮೋಯಿತ್ರಾ ತಿಳಿಸಿದರು.
my speech on the steps of parliament today pic.twitter.com/pe0MyJf3Af
— Mahua Moitra (@MahuaMoitra) December 8, 2023
ಸಂಸತ್ತಿನಲ್ಲಿ ಎದ್ದು ನಿಂತು ಬಿಜೆಪಿಯ ರಮೇಶ್ ಬಿದುರಿ ಅವರು, ಮುಸ್ಲಿಂ ಸಂಸದರಲ್ಲಿ ಒಬ್ಬರಾಗಿರುವ ದಾನಿಸ್ ಅಲಿ ವಿರುದ್ಧ ಅಪಮಾನಕಾರಿ ಹೇಳಿಕೆಯನ್ನು ನೀಡುತ್ತಾರೆ. ಬಿಜೆಪಿಯಿಂದ ಸಂಸತ್ತಿಗೆ 303 ಸಂಸದರನ್ನು ಕಳುಹಿಸುತ್ತದೆ. ಆದರೆ, ಒಬ್ಬರು ಮುಸ್ಲಿಮ್ ಸಂಸದರಿಲ್ಲ. ದಾನಿಸ್ ಅಲಿ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದರೂ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ನೀವು ಅಲ್ಪ ಸಂಖ್ಯಾತರನ್ನು ದ್ವೇಷಿಸುತ್ತೀರಿ, ನೀವು ಮಹಿಳೆಯನ್ನು ದ್ವೇಷಿಸುತ್ತೀರಿ. ನಿಮೆಗೆ ನಾರಿ ಶಕ್ತಿಯನ್ನು ಕಂಡರಾಗಲ್ಲ ಎಂದು ಮಹುವಾ ಮೋಯಿತ್ರಾ ಹೇಳಿದ್ದಾರೆ.
ಸಾಂವಿಧಾನಿಕ ಹಕ್ಕುಗಳಿಗೆ ಬಗೆದ ದ್ರೋಹ- ಮಹುವಾ ಬೆಂಬಲಕ್ಕೆ ನಿಂತ ದೀದಿ
ಬಿಜೆಪಿಯು ಮಹುವಾ ಅವರ ನಿಲುವನ್ನು ಸಮರ್ಥಿಸಿಕೊಳ್ಳಲು ಮತ್ತು ಅವರ ಪರಿಸ್ಥಿತಿಯನ್ನು ವಿವರಿಸಲು ಅವಕಾಶ ನೀಡಲಿಲ್ಲ. ಇದು ಸಾಂವಿಧಾನಿಕ ಹಕ್ಕುಗಳಿಗೆ ದ್ರೋಹವಾಗಿದೆ ಎಂದು ಟಿಎಂಸಿ ನಾಯಕಿಯೂ ಆಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿದ ಬಳಿಕ ಅವರು ಈ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿಗೆ ಪ್ರತಿಪಕ್ಷಗಳನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಎದುರಿಸಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಿಜೆಪಿ ಎಷ್ಟು ಸೇಡು ತೀರಿಸಿಕೊಳ್ಳುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಯುವ ಪೀಳಿಗೆಗೆ ಸೇರಿದ ಮಹಿಳೆಯೊಬ್ಬರು ಕಿರುಕುಳಕ್ಕೆ ಒಳಗಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಹೇಗೆ ಕೊಲ್ಲಬಹುದು ಎಂಬುದಕ್ಕೆ ಇದು ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಪಕ್ಷವು ಯಾವಾಗಲೂ ಮಹುವಾ ಮೊಯಿತ್ರಾ ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದರು.
ಭಾರತೀಯ ಪ್ರಜಾಪ್ರಭುತ್ವವ ಇತಿಹಾಸದಲ್ಲಿ ಇದೊಂದು ದುಃಖದ ದಿನ ಎಂದು ಹೇಳಿದ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ಮೋದಿ ಅವರು ಈ ಪ್ರಕರಣವನ್ನು ಪರಿಗಣಿಸಬಹುದು ಎಂದು ಭಾವಿಸಿದ್ದೆ. ಭಾರತೀಯ ಸಂಸತ್ತಿಗೆ ಇದು ದುಃಖದ ದಿನ. ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ.
ಮಹುವಾ ಮೋಯಿತ್ರಾ ಅವರು ಮುಂದಿನ ಚುನಾವಣೆ ಗೆಲ್ಲಲಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಇದು ನನ್ನ ಗಾಢ ನಂಬಿಕೆಯಾಗಿದೆ. ಬಿಜೆಪಿ ಜನರಿಗೆ ದ್ರೋಹ ಮಾಡಿದೆ. ನೀವು ಅಷ್ಟೊಂದು ಬಲಶಾಲಿಗಳೇ ಆಗಿದ್ದರೆ ಆಕೆಯನ್ನು ಚನಾವಣೆಯಲ್ಲಿ ಸೋಲಿಸಬಹುದಾಗಿತ್ತು. ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mahua Moitra: ಪ್ರಶ್ನೆ ಕೇಳಲು ಲಂಚ; ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಲೋಕಸಭೆಯಿಂದ ಉಚ್ಚಾಟನೆ