Site icon Vistara News

Cash For Question Row: ಸಂಸದೆ ಮಹುವಾ ಎಂಪಿ ಲಾಗಿನ್ ಬೇರೆಯವರು ಬಳಸಿದ್ದರೆ ಮಹಾಪರಾಧ!

Cash For Question Row, If Mahua Moitra MP login used by someone else, it is serious crime

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರ ಪ್ರಶ್ನೆಗಾಗಿ ಲಂಚ ಪ್ರಕರಣವು (Cash For Question Row) ತಿರುವು ಪಡೆದುಕೊಂಡಿದ್ದು, ಅದಾನಿ ಗ್ರೂಪ್ (Adani Group) ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಪ್ರಶ್ನೆಗಳನ್ನು ಕೇಳಲು ಮಹುವಾ ಅವರು ತಮ್ಮ ಎಂಪಿ ಲಾಗಿನ್ (MP Login) ನೀಡಿದ್ದರು ಎಂದು ಉದ್ಯಮಿ ದರ್ಶನ್ ಹಿರಾನಂದಿನಿ (Darshan Hiranandani) ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದೀಯ ನೈತಿಕ ಸಮಿತಿ ಸದಸ್ಯ ವಿನೋದ್ ಸೋನಕರ್ ಅವರು, ಎಂಪಿ ಲಾಗಿನ್ ಅನ್ನು ಮೂರನೇ ವ್ಯಕ್ತಿ ಬಳಸಿರುವುದು ಅಪರಾಧವಾಗುತ್ತದೆ. ಆದರೆ, ಉದ್ಯಮಿಯಿಂದ ಯಾವುದೇ ಪತ್ರ ಬಂದಿಲ್ಲ ಎಂದು ಹೇಳಿದ್ದಾರೆ.

ಯಾರಾದರೂ ಸಂಸದರ ಲಾಗಿನ್ ಅನ್ನು ಬಳಸಿದ್ದರೆ, ಅದು ತುಂಬಾ ಗಂಭೀರವಾದ ಅಪರಾಧವಾಗಿದೆ. ದೂರುದಾರರ ಎಲ್ಲ ಪುರಾವೆಗಳನ್ನು ನಾವು ಅಕ್ಟೋಬರ್ 26ರಂದು ಪರಿಶೀಲಿಸುತ್ತೇವೆ. ಅವರಿಗೆ ಪುರಾವೆಗಳೊಂದಿಗೆ ಆಗಮಿಸುವಂತೆ ಸೂಚಿಸ್ದದೇವೆ. ಎರಡೂ ಕಡೆಯಿಂದ ದೊರೆಯುವ ಪುರಾವೆಗಳನ್ನು ನಾವು ಪರಿಶೀಲಿಸಲಿದ್ದೇವೆ ಎಂದು ವಿನೋದ್ ಸೋನಕರ್ ಅವರು ಹೇಳಿದ್ದಾರೆ. ಸಂಸತ್ತಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕರಣ ನಡೆದಿದೆ. ಇದೊಂದು ವಿಶಿಷ್ಟ ಮತ್ತು ಗಂಭೀರ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಮಹುವಾ ಮೋಯಿತ್ರಾ ಅವರು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂ ಕೋರ್ಟ್ ಲಾಯರ್ ಹಾಗೂ ತಮ್ಮ ಮಾಜಿ ಪಾರ್ಟ್ನರ್ ಅನಂತ್ ದೇಹದ್ರಾಯಿ ವಿರುದ್ದ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್‌ನ ಜಸ್ಟೀಸ್ ಸಚಿನ್ ದತ್ತಾ ಅವರ ಮುಂದೆ ಬಂದಿದ್ದು, ಅಕ್ಟೋಬರ್ 31ರಂದು ವಿಚಾರಣೆ ನಡೆಯಲಿದೆ.

ಉದ್ಯಮಿಯು ಅರ್ಜಿದಾರರಿಗೆ(ಮಹುವಾ) ದುಬಾರಿ ಗಿಫ್ಟ್‌ ಕೊಟ್ಟಿರುವ ಅಫಿಡವಿಟ್‌ ಅನ್ನು ಹರಿಬಿಟ್ಟಿದ್ದಾರೆ ಎಂಬ ಮಾಹಿತಿಯನ್ನು ದಿಲ್ಲಿ ಹೈಕೋರ್ಟ್‌ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಪರ ವಕೀಲರು ತಿಳಿಸಿದರು. ಆಗ ಮೋಯಿತ್ರಾ ಅವರ ವಕೀಲರು, ಟಿಎಂಸಿ ಸಂಸದರು ಸಾರ್ವಜನಿಕ ವ್ಯಕ್ತಿಯಾಗಿದ್ದು, ಸಮಾಜದಲ್ಲಿ ಗೌರವದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ದುರದೃಷ್ಟವಶಾತ್, ಅವರು ಜೈ ಅನಂತ್ ದೇಹದ್ರಾಯಿ ಅವರ ಗೆಳೆಯರೂ ಆಗಿದ್ದರು ಎಂದು ತಿಳಿಸಿದರು. ಎರಡು ಕಡೆ ವಾದಗಳನ್ನು ಆಲಿಸಿದ ಕೋರ್ಟ್, ಅಕ್ಟೋಬರ್ 31ಕ್ಕೆ ಮುಂದಿನ ವಿಚಾರಣೆ ನಡೆಸಲಿದೆ.

ಏನಿದು ಲಂಚಕ್ಕಾಗಿ ಪ್ರಶ್ನೆ ಪ್ರಕರಣ?

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ತೃಣಮೂಲ ಕಾಂಗ್ರೆಸ್ ಶಾಸಕಿ ಮಹುವಾ ಮೋಯಿತ್ರಾ (MP Mahua Moitra) ಅವರು ಲಂಚ ಪಡೆದಿದ್ದಾರೆಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕ ಸಭಾ ಸ್ರೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಬಳಿಕ ಇಡೀ ಪ್ರಕರಣ ಬಯಲಾಗಿತ್ತು. ಅಲ್ಲದೇ, ಕೂಡಲೇ ಸಂಸದ ಸ್ಥಾನದಿಂದ ಅಮಾನತು ಮಾಡುವಂತೆ ಅವರು ಕೋರಿದ್ದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್(Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಮೋಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ: MP Mahua Moitra: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಸಂಸದೆ ಮಹುವಾ ಮೋಯಿತ್ರಾ! ಬಿಜೆಪಿ ಆರೋಪ

ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದಿನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೋಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಿನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version