Site icon Vistara News

Kamal Haasan: ಜಾತಿಯೇ ನನ್ನ ರಾಜಕೀಯ ಪ್ರತಿಸ್ಪರ್ಧಿ ಎಂದ ನಟ ಕಮಲ್‌ ಹಾಸನ್‌

Kamal Haasan

Not Joined INDIA Bloc, Will Support Anyone Who Thinks About Nation: Says Kamal Haasan

ಚೆನ್ನೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೈಗೊಂಡ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಸುದ್ದಿಯಾಗಿದ್ದ ಮಕ್ಕಳ್‌ ನೀಧಿ ಮೈಯಮ್‌ ಪಕ್ಷದ ಅಧ್ಯಕ್ಷರೂ ಆದ ನಟ ಕಮಲ್‌ ಹಾಸನ್‌ (Kamal Haasan) ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳನ್ನು ಉಲ್ಲೇಖಿಸದ ನಟ, “ಜಾತಿಯೇ ನನ್ನ ಪ್ರಬಲ ರಾಜಕೀಯ ಪ್ರತಿಸ್ಪರ್ಧಿ” ಎಂದು ಹೇಳಿದರು.

ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್‌ ಅವರ ‘ನೀಲಂ ಬುಕ್ಸ್‌’ ಪುಸ್ತಕ ಮಳಿಗೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ನನ್ನ ರಾಜಕೀಯ ಪ್ರತಿಸ್ಪರ್ಧೆ ಎಂದರೆ ಜಾತಿಯೇ. ನಾನು ಇದನ್ನು ೨೧ ವರ್ಷದಿಂದ ಹೇಳುತ್ತಲೇ ಬಂದಿದ್ದೇನೆ. ಈಗಲೂ ಇದನ್ನೇ ಹೇಳುತ್ತಿದ್ದೇನೆ. ನನ್ನ ಈ ಅಭಿಪ್ರಾಯವು ಎಂದಿಗೂ ಬದಲಾಗುವುದಿಲ್ಲ” ಎಂದು ತಿಳಿಸಿದರು.

ತಮಿಳುನಾಡಿನ ಈರೋಡ್‌ ವಿಧಾನಸಭೆ ಕ್ಷೇತ್ರಕ್ಕೆ ಫೆಬ್ರವರಿ ೨೭ರಂದು ಉಪ ಚುನಾವಣೆ ನಡೆಯಲಿದ್ದು, ಕಮಲ್‌ ಹಾಸನ್‌ ಅವರು ಈಗಾಗಲೇ ಡಿಎಂಕೆ ಅಭ್ಯರ್ಥಿಗೆ ನಮ್ಮ ಬೆಂಬಲ ಎಂಬುದಾಗಿ ಘೋಷಿಸಿದ್ದಾರೆ. ಕಮಲ್‌ ಹಾಸನ್‌ ಅವರು ಬೇರೆ ಪಕ್ಷದವರಾಗಿಯೂ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.

ಇದನ್ನೂ ಓದಿ: Kamal Haasan: ಇಂಡಿಯನ್ 2 ಚಿತ್ರೀಕರಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಕಮಲ್‌ ಹಾಸನ್‌: ವಿಡಿಯೊ ವೈರಲ್‌!

Exit mobile version