ನವ ದೆಹಲಿ: ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ವಿವಿಧ ಹಂತದ ಆಪರೇಷನ್ ಗರುಡ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಇಂಟರ್‌ಪೋಲ್ ನೆರವಿನ ಮೂಲಕ ಸಿಬಿಐ (CBI), ಡ್ರಗ್ಸ್ ಕಳ್ಳ ಸಾಗಣೆ ಜಾಲದ ಮೇಲೆ ಪ್ರಹಾರ ಮಾಡುತ್ತಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟಾರೆ 127 ಪ್ರಕರಣಗಳನ್ನು ದಾಖಲಿಸಿ, 175 ಜನರನ್ನು ಬಂಧಿಸಿದೆ. ಇದರೊಂದಿಗೆ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ.
ಪಂಜಾಬ್, ದಿಲ್ಲಿ, ಹಿಮಾಚಪ್ರದೇಶ, ಮಣಿಪುರ್, ಮಹಾರಾಷ್ಟ್ರ, ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ವೇಳೆ, 6,600 ಶಂಕಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಇದೇ ವೇಳೆ, ತಲೆಮರೆಸಿಕೊಂಡಿದ್ದ ಆರು ಜನರನ್ನು ಕೂಡ ಬಂಧಿಸಲಾಗಿದೆ.
ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಬಿಐ, ಇಂಟರ್‌ಪೋಲ್ ಜತೆಗೂಡಿ ಅಂತಾರಾಷ್ಟ್ರೀಯ ಮಾದಕವಸ್ತು ಸಾಗಣೆಯನ್ನು ತಡೆಯಲಾಗುತ್ತಿದೆ. ಇದಕ್ಕೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕೂಡ ಕೈಜೋಡಿಸಿದೆ. ವಿಶೇಷವಾಗಿ ಹಿಂದೂ ಮಹಾಸಾಗರದ ಮೇಲೆ ಹೆಚ್ಚು ಕೇಂದ್ರೀಕರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಸಮುದ್ರ ಮಾರ್ಗವನ್ನು ಬಳಸಿಕೊಂಡು ಮಾದಕ ವಸ್ತು ಅಕ್ರಮ ಸಾಗಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ |ಗುಜರಾತ್ ಕರಾವಳಿಯಲ್ಲಿ ಡ್ರಗ್ಸ್ ತರುತ್ತಿದ್ದ ಪಾಕ್ ಬೋಟ್ ಜಪ್ತಿ; 200 ಕೋಟಿ ರೂ ಬೆಲೆಯ ಮಾದಕ ವಸ್ತು ವಶ