ನವದೆಹಲಿ: ಸುಮಾರು 290 ಜನರ ಸಾವಿಗೆ ಕಾರಣವಾದ ಮತ್ತು ನೂರಾರು ಜನರು ಗಾಯಗೊಂಡಿರುವ ಒಡಿಶಾದ ಬಾಲಸೋರ್ ರೈಲು (Odisha Train Accident) ಅಪಘಾತಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದ ಮೂವರು ರೈಲ್ವೆ ನೌಕರರ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಮೂವರು ರೈಲ್ವೆ ಉದ್ಯೋಗಿಗಳಾದ ಅರುಣ್ ಕುಮಾರ್ ಮಹಾಂತ, ಮೊಹಮ್ಮದ್ ಅಮೀರ್ ಖಾನ್ ಮತ್ತು ಪಪ್ಪು ಕುಮಾರ್ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ. ಪ್ರಮುಖವಾಗಿ ಅವರಿಬ್ಬರೂ ಘಟನೆ ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಭಾರತೀಯ ರೈಲ್ವೆಯ ಇತಿಹಾಸದ ಅತ್ಯಂತ ಭೀಕರ ರೈಲು ಅಪಘಾತದಲ್ಲಿ ಸುಮಾರು 290 ಜನರು ಮೃತಪಟ್ಟಿದ್ದರು. ಸಿಗ್ನಲ್ ವೈಫಲ್ಯದಿಂದಾಗಿ ಮೂರು ರೈಲುಗಳ ಅವಘಡಕ್ಕೆ ಒಳಗಾಗಿದ್ದವು. ಘಟನೆ ನಡೆದು ಒಂದು ತಿಂಗಳ ನಂತರ ಜುಲೈನಲ್ಲಿ ಮೂವರು ರೈಲ್ವೆ ನೌಕರರನ್ನು ಬಂಧಿಸಲಾಗಿತ್ತು. ಅರುಣ್ ಕುಮಾರ್ ಮಹಾಂತ, ಹಿರಿಯ ಸೆಕ್ಷನ್ ಎಂಜಿನಿಯರ್ ಗಳಾದ ಮೊಹಮ್ಮದ್ ಅಮೀರ್ ಖಾನ್, ಪಪ್ಪು ಕುಮಾರ್ ಅವರನ್ನು ಸಿಬಿಐ ಬಂಧಿಸಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಮತ್ತು 201 ರ ಅಡಿಯಲ್ಲಿ ಮೂವರನ್ನು ಬಂಧಿಸಲಾಗಿತ್ತು. ಅವರೆಲ್ಲರೂ ಘಟನೆಗೆ ಕಾರಣರಾದ ಹೊರತಾಗಿಯೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದೆ. ಈ ಅಂಶಗಳು ತನಿಖಾ ವಿವರದಲ್ಲಿದೆ.
ಕೋರಮಂಡಲ್ ಎಕ್ಸ್ಪ್ರೆಸ್ ರೈಲು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಎಕ್ಸ್ಪ್ರೆಸ್ ಮತ್ತು ಬಾಲಸೋರ್ನ ಬಹನಗ ಬಜಾರ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು/
ಬಹನಗ ಬಜಾರ್ ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 94ರಲ್ಲಿ ದುರಸ್ತಿ ಕಾರ್ಯವನ್ನು ಮಹಾಂತ ಅವರು ಎಲ್ಸಿ ಗೇಟ್ ಸಂಖ್ಯೆ 79 ರ ಸರ್ಕ್ಯೂಟ್ ರೇಖಾಚಿತ್ರವನ್ನು ಬಳಸಿಕೊಂಡು ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ. ಆರೋಪಿಯ ಕರ್ತವ್ಯವೆಂದರೆ ಪರೀಕ್ಷೆ, ಕೂಲಂಕುಷ ಪರಿಶೀಲನೆ ಮತ್ತು ಅಸ್ತಿತ್ವದಲ್ಲಿರುವ ಸಿಗ್ನಲ್ ಮತ್ತು ಇಂಟರ್ಲಾಕಿಂಗ್ ಬದಲಾವಣೆ ಮಾಡುವುದು. ಅನುಮೋದಿತ ಯೋಜನೆ ಮತ್ತು ಸೂಚನೆಗಳಿಗೆ ಅನುಗುಣವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು. ಆದರೆ, ಅವರೆಲ್ಲರೂ ಸೂಚನೆ ಮತ್ತು ನಿಯಮಗಳನ್ನು ಮೀರಿ ಕೆಲಸ ಮಾಡಿದ್ದರು ಎಂಬುದಾಗಿ ಸಿಬಿಐ ತನಿಖೆಯಿಂದ ಗೊತ್ತಾಗಿದೆ.
ಮದುರೈ ರೈಲು ಬೆಂಕಿ ರಹಸ್ಯ ಬಯಲು; ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಕಾರಣ!
ಲಕ್ನೋದಿಂದ ರಾಮೇಶ್ವರಂಗೆ(Lucknow to Rameshwaram) ತೆರಳುತ್ತಿದ್ದ ಪ್ರವಾಸಿ ರೈಲಿನ ಕೋಚ್‌ನಲ್ಲಿ ಬೆಂಕಿ(Madurai Train Fire) ಅವಘಡದಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ(Tamil Nadu train fire) ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಮದುರೈ ರೈಲ್ವೆ ಜಂಕ್ಷನ್ ಬಳಿ ನಿಂತಿದ್ದ ಭಾರತ್ ಗೌರವ್ ವಿಶೇಷ ಪ್ರವಾಸಿ ಕೋಚ್‌ನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆರಂಭಿಕ ಹಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಹತ್ತು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದುರಂತ ಸಂಭವಿಸಲು ಪ್ರಮುಖ ಕಾರಣ ಪ್ರಯಾಣಿಕರೊಬ್ಬರು ಅಕ್ರಮವಾಗಿ ಬಳಸಿದ ಎಲ್‌ಪಿಜಿ ಸಿಲಿಂಡರ್(gas cylinders in train) ಎಂದು ತಿಳಿದುಬಂದಿದೆ.
ಅವಘಡಕ್ಕೆ ಅಕ್ರಮ ಗ್ಯಾಸ್ ಸಿಲಿಂಡರ್ ಕಾರಣ
ಈ ಅವಘಡಕ್ಕೆ ಕೋಚ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಎಲ್‌ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ ಎರಡು ಬೋಗಿಗಳಿಗೆ ಹತ್ತಿಕೊಂಡ ಬೆಂಕಿ ಬಳಿಕ ಇಡೀ ರೈಲಿಗೆ ಹೊತ್ತಿಕೊಂಡಿದೆ. ಬೆಳಗಿನ ಜಾವ 5.15ರ ಹೊತ್ತಿಗೆ ಈ ಅವಘಡ ಸಂಭವಿಸಿದೆ. ಐಆರ್‌ಸಿಟಿಸಿ ಪೋರ್ಟಲ್ ಬಳಸಿ ಯಾರು ಬೇಕಾದರೂ ಪಾರ್ಟಿ ಕೋಚ್ ಬುಕ್ ಮಾಡಬಹುದಾಗಿದೆ. ಆದರೆ ಯಾವುದೇ ದಹನಕಾರಿ ವಸ್ತುಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅನುಮತಿ ಇಲ್ಲ. ಈ ಕೋಚ್ ಸಾರಿಗೆ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಆದರೆ ಈ ಗುಂಪು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡಿದ್ದೇ ದುರಂತಕ್ಕೆ ಪ್ರಮುಖ ಕಾರಣ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಗಣೇಶನ್ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಸ್ಥಳದಲ್ಲಿ ಚದುರಿದ ವಸ್ತುಗಳ ಪೈಕಿ ಸಿಲಿಂಡರ್ ಮತ್ತು ಆಲೂಗಡ್ಡೆಯ ಚೀಲ ಸಿಕ್ಕಿದೆ.
ಇದನ್ನೂ ಓದಿ : ಕರ್ನಾಟಕ–ಭಾರತ್ ಗೌರವ್ ಕಾಶಿ ದರ್ಶನ ಪ್ಯಾಕೇಜ್ ಟೂರ್ಗೆ ಬುಕ್ಕಿಂಗ್ ಆರಂಭ
ಶಿಕ್ಷಾರ್ಹ ಅಪರಾಧ
1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ಪ್ರಯಾಣಿಕರು ರೈಲಿನಲ್ಲಿ ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್, ಆ್ಯಸಿಡ್, ಸೀಮೆ ಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್ ಮತ್ತು ಸ್ಟೌ ಹಾಗೂ ಸ್ಫೋಟಕಗಳಂತಹ ಬೆಂಕಿಯುಂಟಾಗುವ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದೀಗ ಈ ದುರಂತಕ್ಕೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಗ್ಯಾಸ್ ಸಿಲಿಂಡರ್ ಬಳಸಲು ಅನುಮತಿ ನೀಡದೇ ಇದ್ದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ.