Site icon Vistara News

Delhi Liquor Policy Case: ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ವಿಚಾರಣೆ ನಡೆಸುತ್ತಿರುವ ಸಿಬಿಐ, ಬಂಧನವಾಗುತ್ತಾ?

Manish Sisodia

ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi Liquor Policy Case) ಸಂಬಂದಿಸಿದಂತೆ ಕೇಂದ್ರ ತನಿಖಾ ದಳ(CBI) ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ವಿಚಾರಣೆಗೊಳಪಡಿಸುತ್ತಿದೆ. ಆಪ್‌ ಬೆಂಬಲಿಗರ ಭಾರೀ ಬೆಂಬಲದೊಂದಿಗೆ ಸಿಸೋಡಿಯಾ (Manish Sisodia) ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ ಆಗಮಿಸಿದರು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಈ ಹಿಂದೆ ಸಿಬಿಐ ನೋಟಿಸ್ ನೀಡಿತ್ತು. ಇದೇ ವೇಳೆ, ಮುಂದಿನ ಏಳೆಂಟು ತಿಂಗಳು ದೂರ ಹೋಗುವೆ ಎಂದು ಸಿಸೋಡಿಯಾ ಹೇಳಿದ್ದಾರೆ. ಆ ಮೂಲಕ ಭಾನುವಾರವೇ ತಮ್ಮ ಬಂಧನವಾಗಬಹುದು ಎಂದು ಅವರು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್

ಭಾನುವಾರ ಬೆಳಗ್ಗೆ ಅಪಾರ ಆಪ್ ಬೆಂಬಲಿಗರೊಂದಿಗೆ ಮನೆಯಿಂದ ಹೊರ ಸಿಸೋಡಿಯಾ ಅವರು ದಿಲ್ಲಿಯ ರಾಜಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನಡಿದರು. ಅಲ್ಲಿ ಮಾತನಾಡಿದರು. ಆಪ್‌ ನಾಯಕರು ಮಾತನಾಡಿ, ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಲಿದ್ದು, ಸಾಕಷ್ಟು ಆಪ್ ನಾಯಕರನ್ನು ಗೃಹ ಬಂಧನದಲ್ಲಿರಸಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Amanatullah Khan | ದಿಲ್ಲಿಯಲ್ಲಿ ಆಪ್‌ಗೆ ಮತ್ತೊಂದು ಸಂಕಷ್ಟ, ಶಾಸಕ ಅಮಾನತುಲ್ಲಾ ಖಾನ್‌ ಬಂಧನ

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಮನೀಶ್ ನಿಮ್ಮೊಂದಿಗೆ ದೇವರಿದ್ದಾನೆ. ಲಕ್ಷಾಂತರ ಮಕ್ಕಳು, ತಾಯಂದಿರ ಆಶೀರ್ವಾದ ನಿಮ್ಮ ಮೇಲಿದೆ. ನೀವು ಯಾವಾಗ ಜೈಲಿಗೆ ಹೋಗುತ್ತೀರಿ, ಆಗ ಅದು ಈ ದೇಶ ಮತ್ತು ಸಮಾಜಕ್ಕೆ ಶಾಪವಲ್ಲ, ಬದಲಿಗೆ ಅದೊಂದು ವೈಭವ. ನೀವು ಜೈಲಿನಿಂದ ಶೀಘ್ರವೇ ಹಿಂದುರಿಗೆ ಎಂದು ನಾನು ಪ್ರಾರ್ಥಿಸುತ್ತೇನೆ. ದಿಲ್ಲಿಯ ಎಲ್ಲ ಮಕ್ಕಳು, ಪೋಷಕರು ನಾವು ನಿಮ್ಮ ಬರುವಿಕೆಗಾಗಿ ಕಾಯುತ್ತಿರುತ್ತೇವೆ ಎಂದು ಹೇಳಿದ್ದಾರೆ.

Exit mobile version