Site icon Vistara News

CBI Raid: ಸಂದೇಶ್‌ಖಾಲಿ ಟಿಎಂಸಿ ನಾಯಕನ ಆಪ್ತನ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರದ ಮೂಲ ಪತ್ತೆ

CBI Raid

CBI Raid

ಕೋಲ್ಕತ್ತಾ: ಸಿಬಿಐ ಮತ್ತು ಎನ್ಎಸ್‌ಜಿ ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ(Sandeshkhali)ಯಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಗುಂಡುಗಳು ಮತ್ತು ಕಾರ್ಟ್ರಿಜನ್‌ನ ಮೂಲ ಅಂಗಡಿಯನ್ನು ಕೋಲ್ಕತ್ತಾದಲ್ಲಿ ಪತ್ತೆಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ (CBI Raid). ವಿವಿಧ ಮದ್ದುಗುಂಡುಗಳಲ್ಲದೆ, ಅಮಾನತುಗೊಂಡ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್‌ (Sheikh Shahjahan)ನ ಆಪ್ತ ಸಹಾಯಕ ಮತ್ತು ಸಂಬಂಧಿಯ ನಿವಾಸದಲ್ಲಿ ಹಲವು ವಿದೇಶಿ ಮತ್ತು ಭಾರತ ನಿರ್ಮಿತ ಬಂದೂಕುಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ವೇಳೆ ಸಿಬಿಐ ಮದ್ದುಗುಂಡು ಅಂಗಡಿಯ ಒಂದೆರಡು ಖರೀದಿ ಬಿಲ್‌ ಸೇರಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದು ತನಿಖೆಯಲ್ಲಿ ಪ್ರಧಾನ ಪಾತ್ರವಹಿಸಿತ್ತು ಮತ್ತು ಕೋಲ್ಕತ್ತಾದಲ್ಲಿನ ಈ ಅಂಗಡಿಯನ್ನು ಗುರುತಿಸಲು ನೆರವಾಯಿತು. ಬಿಲ್‌ ಮೇಲೆ ಖರೀದಿದಾರ ಶಹಜಹಾನ್‌ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಸ್ತುಗಳನ್ನು ಖರೀದಿಸಲು ಮದ್ದುಗುಂಡು ಅಂಗಡಿಗೆ ಯಾರು ಹೋಗಿದ್ದರು ಎನ್ನುವುದನ್ನು ಕಂಡುಹಿಡಿಯಲು ಸಿಬಿಐ ಈಗ ಪ್ರಯತ್ನಿಸುತ್ತಿದೆ.

ಶುಕ್ರವಾರ ನಡೆದ ಪರಿಶೋಧನೆ ವೇಳೆ ದೇಶೀಯ ನಿರ್ಮಿತ ಬಾಂಬ್‌ಗಳು ಎಂದು ಶಂಕಿಸಲಾದ ಕೆಲವು ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ) ತಂಡಗಳು ನಿರ್ವಹಿಸುತ್ತಿವೆ ಮತ್ತು ವಿಲೇವಾರಿ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಸಂದೇಶ್‌ಖಾಲಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಅನೇಕ ದಾಳಿಗಳನ್ನು ನಡೆಸಿದೆ.

ಸಂದೇಶ್‌ಖಾಲಿಯಲ್ಲಿ ನಡೆದ ಭೂ ಕಬಳಿಕೆ ಮತ್ತು ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಐದು ಮಂದಿ ಮತ್ತು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಏನಿದು ಘಟನೆ?

ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿದ ಸಿಬಿಐ ಪೊಲೀಸ್‌ ಸೇವಾ ರಿವಾಲ್ವರ್‌, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಶಪಡಿಸಿಕೊಂಡಿತ್ತು. ಇವನ್ನು ಶಹಜಹಾನ್‌ ಶೇಖ್‌ನ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿದ ಸಿಬಿಐ ಪೊಲೀಸ್‌ ಸೇವಾ ರಿವಾಲ್ವರ್‌, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಶಪಡಿಸಿಕೊಂಡಿತ್ತು. ಇವನ್ನು ಶಹಜಹಾನ್‌ ಶೇಖ್‌ನ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶೋಧದಲ್ಲಿ ವೇಳೆ ಸಿಬಿಐ, ಬಾಂಬ್‌ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ, ಕೇಂದ್ರ ಅರೆಸೇನಾ ಪಡೆ, ಪಶ್ಚಿಮ ಬಂಗಾಳ ಪೊಲೀಸರು ಭಾಗವಹಿಸಿದ್ದರು.

ಇ.ಡಿ ತಂಡವು ಕಳೆದುಕೊಂಡಿದ್ದ ಕೆಲವು ವಸ್ತುಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಸಂದೇಶ್‌ಖಾಲಿಯಲ್ಲಿ ಶೇಖ್‌ನ ಸಹಚರರ ನಿವಾಸದಲ್ಲಿ ಬಚ್ಚಿಡಲಾಗಿದೆ ಎನ್ನುವ ಮಾಹಿತಿ ಮೇರೆಗೆ ಸಿಬಿಐ ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದವು. ಶಸ್ತ್ರಾಸ್ತ್ರಗಳ ಪೈಕಿ ವಿದೇಶಿ ನಿರ್ಮಿತ ಬಂದೂಕುಗಳೂ ಇದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯ ಮಾಲೀಕನನ್ನು ಅಬು ತಾಲೇಜ್‌ ಮೊಲ್ಲಾಹ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Sandeshkhali Violence: ಸಂದೇಶ್‌ಖಾಲಿ ಪ್ರಕರಣ ಆರೋಪಿ ಶಹಜಹಾನ್‌ ಕೊನೆಗೂ ಸಿಬಿಐ ಕೈಗೆ

ಸಹಾಯವಾಣಿ

ಶಹಜಹಾನ್‌ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸಂದೇಶ್‌ಖಾಲಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಭೂಮಿ ಮಾಲೀಕರಿಗಾಗಿ ಪ್ರತ್ಯೇಕ ಸಹಾಯವಾಣಿ ಮತ್ತು ಇಮೇಲ್‌ ವಿಳಾಸ ಆರಂಭಿಸಿದೆ. ಇದರ ಮೂಲಕ ಸಂತ್ರಸ್ತರು ತಮಗಾದ ಅನ್ಯಾಯ ಹೇಳಿಕೊಳ್ಳಬಹುದಾಗಿದೆ. ಅವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಸಿಬಿಐ ಭರವಸೆ ನೀಡಿದೆ.

Exit mobile version