Site icon Vistara News

Sonali Phogat | ಸಿಬಿಐ ಹೆಗಲೇರಿದ ಸೋನಾಲಿ ಫೋಗಟ್ ಕೊಲೆ ತನಿಖೆ

Sonali Phogat

ನವ ದೆಹಲಿ: ಗೋವಾದ ಪಬ್‌ವೊಂದರಲ್ಲಿ ಕೊಲೆಯಾದ, ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಫೋಗಟ್ ಕೊಲೆ ಪ್ರಕರಣ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ವಹಿಸಬೇಕು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ.

ಏತನ್ಮಧ್ಯೆ, ಸೋನಾಲಿ ಫೋಗಟ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ಲೀಸ್ ರೆಸ್ಟೋರೆಂಟ್ ಮಾಲೀಕ ಎಡ್ವಿನ್ ನ್ಯೂನ್ಸ್, ದತ್ತಪ್ರಸಾದ್ ಗಾಂವ್ಕರ್ ಅವರನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಗೋವಾ ಕೋರ್ಟ್ ಈ ಆರೋಪಿಗಳ ಬೇಲ್ ಅಪ್ಲಿಕೇಷನ್ ರಿಜೆಕ್ಟ್ ಮಾಡಿತ್ತು. ಸೋನಾಲಿ ಫೋಗಟ್ ಸಹಚರರೇ ಡ್ರಗ್ಸ್ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಾಯವು ಮುಂಚೆ ಡ್ರಗ್ಸ್ ನೀಡುವ ವಿಡಿಯೋಗಳು ವೈರಲ್ ಆಗಿವೆ.

ಸುಶಾಂತ್ ಸಿಂಗ್ ರೀತಿ ಆಗುವುದ ಬೇಡ
ಹರ್ಯಾಣದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ (Sonali Phogat) ಸಾವು ಪ್ರಕರಣ ಕೂಡ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರೀತಿಯಲ್ಲಿ ಬಗೆಹರಿಸಲಾದ ಕೇಸ್ ಉಳಿ ಯಬಹುದು ಎಂಬ ಅನುಮಾನಗಳು ಶುರುವಾಗಿವೆ. ಸ್ವತಃ ಸೋನಾಲಿ ಫೋಗಟ್ ಕುಟುಂಬದ ಸದಸ್ಯರೇ ಇಂಥದೊಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ರೀತಿಯಲ್ಲೇ ಸೋನಾಲಿ ಪ್ರಕರಣವೂ ನಡೆಯುವುದು ಬೇಡ ಎಂದು ನಾವು ಆಶಿಸುತ್ತೇವೆ ಎಂದು ಸೋನಾಲಿ ಅವರ ಸಹೋದರ ಕುಲ್ದೀಪ್ ಫೋಗಟ್ ಹೇಳಿದ್ದಾರೆ. ಸುಶಾಂತ್ ಸಿಂಗ್ ಕೊಲೆಯಾಗಿದ್ದಾನೆ ಎಂದು ಅವರ ಕುಟುಂಬವು ಈಗಲೂ ನಂಬುತ್ತದೆ. ಆತನಿಗೆ ಡ್ರಗ್ ನೀಡಲಾಗಿತ್ತು. ಈ ಪ್ರಕರಣವು ಅಂತ್ಯವನ್ನು ಇನ್ನೂ ಕಂಡಿಲ್ಲ. ಡ್ರಗ್ ಸೇವನೆ ಅಥವಾ ಡ್ರಗ್ ನೀಡುವುದರ ಬಗೆಗಿನ ಕೇಸ್ ಇದಲ್ಲ. ಇದು ಕೊಲೆಗೆ ಸಂಬಂಧಿಸಿದ ಕೇಸ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | Explainer | ಟಿಕ್‌ಟಾಕ್, ಬಿಗ್‌ಬಾಸ್, ಆ್ಯಕ್ಟಿಂಗ್, ಪಾಲಿಟಿಕ್ಸ್… ಕೊಲೆಯಾದ Sonali Phogat ಅವರ ಜೀವನದ ಕುತೂಹಲದ ಕತೆ!

Exit mobile version