ನವದೆಹಲಿ: ಸಂಬಂಧಿಸಿದ ಹಲವರ ಸಲಹೆಗಳ ಮೇರೆಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನೇಕ ಬದಲಾವಣೆಗಳನ್ನು ಘೋಷಣೆ ಮಾಡಿದೆ(CBSE Board Exam 2024). ಮಕ್ಕಳನ್ನು, ಪೋಷಕರನ್ನು ಮತ್ತು ಒಟ್ಟಾರೆ ಅವರ ವ್ಯಕ್ತಿತ್ವ, ಶೈಕ್ಷಣಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಹೊಸ ಹೊಸ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಮಾಡದಿರುವುದು ಸೇರಿದಂತೆ ಅನೇಕ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಕೈಗೊಂಡಿರುವ ಹೊಸ ಬದಲಾವಣೆಗಳು ವಿದ್ಯಾರ್ಥಿಗಳ (Students) ಮೇಲಿನ ಮಾನಸಿಕ ಒತ್ತಡವನ್ನು (Mental Stress) ಕಡಿಮೆ ಮಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಕೌಂಟೆನ್ಸಿಗೆ ಆನ್ಸರ್ ಬುಕ್ ಇಲ್ಲ
ಅಕೌಂಟೆನ್ಸಿ ವಿಷಯದಲ್ಲಿ ನೀಡಲಾಗುತ್ತಿದ್ದ ಉತ್ತರ ಪುಸ್ತಕಗಳನ್ನು ರದ್ದುಪಡಿಸಲು ಮಂಡಳಿ ನಿರ್ಧರಿಸಿದೆ. ಆನ್ಸರ್ ಬುಕ್ ಬದಲಿಗೆ ಟೇಬಲ್ಸ್ ಒದಗಿಸಲಾಗುತ್ತದೆ. 2024 ರಿಂದ 12 ನೇ ತರಗತಿಯಲ್ಲಿ ಇತರ ವಿಷಯಗಳಲ್ಲಿ ಒದಗಿಸಲಾದ ಸಾಮಾನ್ಯ ಸಾಲುಗಳ ಉತ್ತರ ಪುಸ್ತಕಗಳನ್ನು ಅಕೌಂಟೆನ್ಸಿ ವಿಷಯದಲ್ಲೂ ಒದಗಿಸಲಾಗುವುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಡಿವಿಷನ್, ಡಿಸ್ಟಿಂಕ್ಷನ್ ಅಥವಾ ಅಗ್ರೇಗೆಟ್ ಇಲ್ಲ
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗಿತ ಪರೀಕ್ಷೆಗಳಿಗೆ ಇನ್ನು ಮುಂದೆ ಡಿವಿಷನ್, ಡಿಸ್ಟಿಂಕ್ಷ್ ಅಥವಾ ಅಗ್ರೇಗೆಟ್ ಘೋಷಣೆ ಮಾಡುವುದಿಲ್ಲ ಎಂದು ಹೇಳಿದೆ. ವಿದ್ಯಾರ್ಥಿಗಳ ಶೇಕಡಾವಾರು ಲೆಕ್ಕಾಚಾರದ ಮಾನದಂಡವನ್ನು ತಿಳಿಸಲು ಬಹು ಅಭ್ಯರ್ಥಿಗಳಿಂದ ಮನವಿಗಳನ್ನು ಸ್ವೀಕರಿಸಿದ ನಂತರ ಮಂಡಳಿಯು ಇದನ್ನು ಘೋಷಿಸಿತು. ಹಾಗಾಗಿ, ಇನ್ನು ಮುಂದೆ ಮಂಡಳಿಯು ವಿದ್ಯಾರ್ಥಿಗಳು ಪಡೆಯುವ ಶೇಕಡವಾರು ಅಂಕಗಳನ್ನು ಲೆಕ್ಕ ಹಾಕುವುದಾಗಲೀ, ಘೋಷಣೆ ಮಾಡುವುದಾಗಲೀ ಅಥವಾ ಮಾಹಿತಿ ನೀಡುವುದಾಗಲಿ ಮಾಡುವುದಿಲ್ಲ ಎಂದು ಹೇಳಿದೆ.
ಕ್ರೀಡೆ, ಒಲಂಪಿಯಾಡ್ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮತ್ತು ಅಂತರರಾಷ್ಟ್ರೀಯ ಒಲಂಪಿಯಾಡ್‌ಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಂಡಳಿಯು ನಂತರದ ದಿನಾಂಕದಲ್ಲಿ ವಿಶೇಷ ಪರೀಕ್ಷೆಗಳನ್ನು ನಡೆಸುತ್ತದೆ ಎಂದು ಮಂಡಳಿ ಹೇಳಿದೆ. ಆದಾಗ್ಯೂ, ವಿಭಾಗ ಮತ್ತು ಪ್ರಾಯೋಗಿಕ ಪರೀಕ್ಷೆಗಳಿಗೆ ಯಾವುದೇ ಪ್ರತ್ಯೇಕ ಅಥವಾ ವಿಶೇಷ ಪರೀಕ್ಷಾಅವಕಾಶಗಳಿರುವುದಿಲ್ಲ.
ಸ್ಯಾಂಪಲ್ ಪ್ರಶ್ನೆ ಪತ್ರಿಕೆ ಮಾರ್ಕಿಂಗ್ ಸ್ಕೀಂ
10ನೇ ತರಗತಿಗೆ ಮತ್ತು 77ನೇ ತರಗತಿಗೆ 12ನೇ ತರಗತಿಗೆ ಒಟ್ಟು 60 ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cbseacademic.nic.inನಲ್ಲಿ ಪರಿಶೀಲಿಸಬಹುದು. ಪ್ರತಿ ಉತ್ತರಕ್ಕೆ ಅಂಕಗಳೊಂದಿಗೆ ಉತ್ತರಗಳು ಅಂಕ ಯೋಜನೆಯಲ್ಲಿ ಕಾಣ ಸಿಗುತ್ತವೆ.
ವರ್ಷಕ್ಕೆ ಎರಡು ಬಾರಿ ಬೋರ್ಡ್ ಎಕ್ಸಾಂ
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಹೊಸ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಸಿದ್ಧವಾಗಿದೆ. 2024 ರ ಶೈಕ್ಷಣಿಕ ಅಧಿವೇಶನಕ್ಕಾಗಿ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಘೋಷಿಸಿದರು. ಎನ್‌ಸಿಎಫ್ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು. ಎರಡು ಪರೀಕ್ಷೆಗಳ ಪೈಕಿ ಉತ್ತಮ ಅಂಕಗಳ ರಿಸಲ್ಟ್ ಅನ್ನು ಉಳಿಸಿಕೊಳ್ಳಬಹುದಾಗಿದೆ. ತಾನು ಪರೀಕ್ಷೆ ಬರೆಯಲು ಸಜ್ಜಾಗಿದ್ದೇನೆ ಎಂಬ ವಿಷಯಕ್ಕೆ ಮಾತ್ರವೇ ಎಕ್ಸಾಂ ಕೂಡ ಬರೆಯಬಹುದು.
ಈ ಸುದ್ದಿಯನ್ನೂ ಓದಿ: ಸಿಬಿಎಸ್‌ಇ 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!