ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಕಳೆದ ವರ್ಷಗಳ ಫಲಿತಾಂಶಗಳಲ್ಲಿ ಭಾರೀ ಎಡವಟ್ಟು ನಡೆದಿರುವುದನ್ನು ಪತ್ತೆ ಹಚ್ಚಿದೆ. ಕೆಲವು ವಿಷಯಗಳಲ್ಲಿ ಥಿಯರಿ(Theory) ಮತ್ತು ಪ್ರಾಯೋಗಿಕ(Practical) ಅಂಕಗಳಲ್ಲಿನ ವ್ಯತ್ಯಾಸ ಪತ್ತೆ ಆಗಿದ್ದು, ಸುಮಾರು 500 CBSE-ಸಂಯೋಜಿತ ಶಾಲೆಗಳಲ್ಲಿ 50% ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ನಡುವಿನ ಅಂಕಗಳಲ್ಲಿ ಈ ವ್ಯತ್ಯಾಸ ಕಂಡುಬಂದಿದ್ದು, AI ಟೂಲ್ ಇದನ್ನು ಪತ್ತೆಹಚ್ಚಿದ್ದು, ಅಂತಹ ಶಾಲೆಗಳಿಗೆ ತಮ್ಮ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆ(internal assessment procedures)ಯನ್ನು ಪರಿಶೀಲಿಸಲು ಶಿಕ್ಷಣ ಮಂಡಳಿಯು ಸಲಹೆ ನೀಡಿದೆ.
ಮಂಡಳಿಯು ಹೊರಡಿಸಿದ ಅಧಿಕೃತ ಸೂಚನೆಯಲ್ಲಿ, ಶಾಲೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳ ಸಮಯದಲ್ಲಿ ನಿಖರವಾದ ಮೌಲ್ಯಮಾಪನದ ಅತ್ಯಗತ್ಯ ಎಂಬುದನ್ನು ಉಲ್ಲೇಖಿಸಿದೆ. ಇನ್ನು ಈ ಮೌಲ್ಯಮಾಪನವು ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಅನುಕೂಲ ಆಗುವ ರೀತಿಯಲ್ಲಿ ಪಾರದರ್ಶಕವಾಗಿ ನಡೆಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಖಾಸಗಿ ಶಾಲೆಗಳು ಎಲ್ಲ ವಿದ್ಯಾರ್ಥಿಗಳಿಗೂ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ನೀಡುತ್ತಿರುವುದನ್ನು ಸಿ ಬಿ ಎಸ್ ಇ ಆಕ್ಷೇಪಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸುಧಾರಿತ AI ಪರಿಕರಗಳ ಮೂಲಕ, ಸುಮಾರು 500 CBSE-ಸಂಯೋಜಿತ ಶಾಲೆಗಳಲ್ಲಿ 50% ಅಥವಾ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕೆಲವು ವಿಷಯಗಳಲ್ಲಿ ಸಿದ್ಧಾಂತ ಮತ್ತು ಪ್ರಾಯೋಗಿಕ ಅಂಕಗಳ ನಡುವಿನ ಗಮನಾರ್ಹ ವ್ಯತ್ಯಾಸವನ್ನು ಪತ್ತೆಹಚ್ಚಿದೆ. ಹೀಗಾಗಿ ಅಂತಹ ಶಾಲೆಗಳಿಗೆ ತಮ್ಮ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆ(internal assessment procedures)ಯನ್ನು ಪರಿಶೀಲಿಸಬೇಕಿದೆ. CBSE-ಸಂಯೋಜಿತ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಯೋಗಿಕ ಪರೀಕ್ಷೆಗಳನ್ನು ಮೌಲ್ಯಮಾಪನ ಮಾಡುವಾಗ ಶಾಲೆಗಳು ನ್ಯಾಯಯುತವಾಗಿ ಮತ್ತು ನಿಖರತೆಗೆ ಆದ್ಯತೆ ನೀಡಬೇಕೆಂದು CBSE ಬಯಸುತ್ತದೆ ಎಂದು ಹೇಳಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಮೇ, 13ರಂದು 12ನೇ ತರಗತಿ ಫಲಿತಾಂಶ (CBSE 12th Results 2024) ಇಂದು ಪ್ರಕಟವಾಗಿತ್ತು. ಈ ವರ್ಷದ ತೇರ್ಗಡೆ (Pass) ಪ್ರಮಾಣ ಶೇ.87.98ರಷ್ಟಿದೆ. 16,33,730 ಮಂದಿ ನೋಂದಾಯಿಸಿಕೊಂಡಿದ್ದು, ಅದರಲ್ಲಿ 16,21,224 ಮಂದಿ ಪರೀಕ್ಷೆ ಬರೆದು, 14,26,420 ಮಂದಿ ಪಾಸ್ ಆಗಿದ್ದಾರೆ. ಬೆಂಗಳೂರಿನಲ್ಲಿ (Bangalore CBSE 12th Results 2024) ಫಲಿತಾಂಶದ ಪ್ರಮಾಣ ಶೇ.96.95ರಷ್ಟಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 10ನೇ ತರಗತಿ ಬೋರ್ಡ್ ಪರೀಕ್ಷೆ ಮಾರ್ಚ್ 13 ರಂದು ಕೊನೆಗೊಂಡಿತು. ಈ ಪರೀಕ್ಷೆಯನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದಾದ್ಯಂತ ಬರೆದಿದ್ದಾರೆ. ಹಾಗೆಯೇ 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 2 ರಂದು ಅಂತ್ಯಗೊಂಡಿತು.
ಇದನ್ನೂ ಓದಿ:Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಇಂದೇ ಸಚಿವ ನಾಗೇಂದ್ರ ರಾಜೀನಾಮೆ?