Site icon Vistara News

CBSE Exam Date | ವಿದ್ಯಾರ್ಥಿಗಳೇ ಗಮನಿಸಿ, ಜಾಲತಾಣಗಳಲ್ಲಿರುವ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ನಕಲಿ

UGCET 2024 Online verification of UGCET records Information publish on karnataka examination authority website

ನವದೆಹಲಿ: ಸಾಮಾಜಿಕ ಜಾಲತಾಣಗಳು ಮಾಹಿತಿ ರವಾನೆ, ಮನರಂಜನೆ, ಸುದ್ದಿ ತಿಳಿದುಕೊಳ್ಳುವುದು ಸೇರಿ ಹಲವು ರೀತಿಯಲ್ಲಿ ಸಕಾರಾತ್ಮಕವಾಗಿ ಬಳಕೆಯಾಗುತ್ತಿವೆ. ಹಾಗೆಯೇ, ಇವು ನಕಲಿ ಸುದ್ದಿಗಳನ್ನು ಬಿತ್ತರಿಸುವ ತಾಣವಾಗಿಯೂ ಮಾರ್ಪಾಡಾಗಿವೆ. ಇದಕ್ಕೆ ಉದಾಹರಣೆ ಎಂಬಂತೆ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE Exam Date)ಯ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ ಎಂಬ ವದಂತಿ ಜಾಲತಾಣಗಳಲ್ಲಿ ಹರಿದಾಡಿವೆ. ಇದು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡಲು ಕಾರಣವಾಗಿದೆ.

ಜಾಲತಾಣಗಳ ವದಂತಿ ಕುರಿತು ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ೧೦ ಹಾಗೂ ೧೨ನೇ ತರಗತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ ಎಂಬ ವದಂತಿ ಹರಿದಾಡುತ್ತಿದೆ. ಒಬ್ಬೊಬ್ಬರು ಒಂದೊಂದು ಡೇಟ್‌ಗಳನ್ನು ನೀಡಿದ್ದಾರೆ. ಆದರೆ, ಇದೆಲ್ಲ ನಕಲಿ ಸುದ್ದಿಯಾಗಿದ್ದು, ಇನ್ನೂ ಪರೀಕ್ಷಾ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ಯಾರೂ ಗೊಂದಲಕ್ಕೀಡಾಗಬೇಡಿ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

ಇದನ್ನೂ ಓದಿ | JEE Advanced Result 2022 | ಓದಿನ ಸಮಯಕ್ಕಿಂತ ಗ್ರಹಿಕೆ ಮುಖ್ಯ ಎಂದ AIR ಟಾಪರ್‌ ಬೆಂಗಳೂರಿನ ಶಿಶಿರ್‌

Exit mobile version