Site icon Vistara News

CCTV On Deity Face | ತಮಿಳುನಾಡಿನಲ್ಲಿ ದೇವತೆ ಮುಖಕ್ಕೆ ಸಿಸಿಟಿವಿ ಅಳವಡಿಕೆ, ಡಿಎಂಕೆ ವಿರುದ್ಧ ಅಣ್ಣಾಮಲೈ ಆಕ್ರೋಶ

CCTV On Deity's Face In Tamilnadu

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ದೇವಾಲಯದಲ್ಲಿ ದೇವತೆಯ ವಿಗ್ರಹಕ್ಕೆ ಸಿಸಿಟಿವಿ ಅಳವಡಿಸಿರುವುದು (CCTV On Deity Face) ವಿವಾದಕ್ಕೆ ಕಾರಣವಾಗಿದೆ. ಅರುಣಾಚಲೇಶ್ವರ ದೇವಾಲಯದಲ್ಲಿರುವ ದೇವತೆಯ ಮುಖಕ್ಕೆ ಸಿಸಿಟಿವಿ ಅಳವಡಿಸಲಾಗಿದ್ದು, ಇದಕ್ಕೆ ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ಖಂಡನೆ ವ್ಯಕ್ತಪಡಿಸಿದ್ದಾರೆ.

“ಡಿಎಂಕೆ ಸರ್ಕಾರಕ್ಕೆ ಆಗಮಗಳ ಬಗ್ಗೆ ನಂಬಿಕೆ ಇಲ್ಲ. ಹಿಂದೂ ದೇವಾಲಯಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಉಸ್ತುವಾರಿಯನ್ನು ನಾಸ್ತಿಕರು ವಹಿಸಿಕೊಂಡ ಕಾರಣದಿಂದಲೇ ದೇವತೆಯ ಮುಖಕ್ಕೆ ಸಿಸಿಟಿವಿ ಅಳವಡಿಸುವಂತಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಡಿಎಂಕೆ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ” ಎಂದು ಟೀಕಿಸಿದ್ದಾರೆ.

“ದೇವತೆಯ ಮೂರ್ತಿಯನ್ನು ವಿರೂಪಗೊಳಿಸಿದ್ದಕ್ಕೆ ಯಾರು ಜವಾಬ್ದಾರಿ? ಧಾರ್ಮಿಕ ದತ್ತಿ ಇಲಾಖೆಯು ದೇವತೆಗಳ ಮೂರ್ತಿಗಳ ಮೇಲಿನ ಬಂಗಾರವನ್ನು ಕರಗಿಸಿ, ಚಿನ್ನದ ಗಟ್ಟಿಗಳನ್ನಾಗಿ ಮಾಡಲಾಗುತ್ತಿದೆ. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತಿದೆ. ಇಂತಹ ಕೃತ್ಯವನ್ನು ದೇವರು ಹಾಗೂ ಜನ ಕ್ಷಮಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Defacement | ನಾಗದೇವರ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳು, ಆರೋಪಿಗಳ ಪತ್ತೆಗೆ ಸಿಸಿ ಟಿವಿ ಜಾಲಾಟ

Exit mobile version