Site icon Vistara News

Ram Mandir : ಜಗತ್ತಿನಾದ್ಯಂತ ಸಂಭ್ರಮ; ಪಟಾಕಿ ಸಿಡಿಸಿ, ಸಿಹಿ ಹಂಚಿದ ರಾಮಭಕ್ತರು

Ram mandir celebration

ವಿಸ್ತಾರ ನ್ಯೂಸ್​, ಬೆಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಇಡೀ ಭೂಮಂಡಲವೇ ಸಂಭ್ರಮಿಸಿತು. ತ್ರೇತಾಯುಗದಲ್ಲಿ ರಾಮನಿಗೆ ಪಟ್ಟಾಭಿಷೇಕ ಮಾಡುವ ವೇಳೆ ಜನರು ಸಂಭ್ರಮಿಸಿದಂತೆ ಈ ವೇಳೆಯೂ ಎಲ್ಲರೂ ಖುಷಿ ಪಟ್ಟರು. ಜನರು ತಮ್ಮ ಸಂತೋಷ ಹಾಗೂ ಸಂಭ್ರಮ ವ್ಯಕ್ತಪಡಿಸಲು ಪಟಾಕಿಗಳ ಶಬ್ದ ಮತ್ತು “ರಘುಪತಿ ರಾಘವ್ ರಾಜಾ ರಾಮ್, ಪತೀತ್ ಪವನ್ ಸೀತಾ ರಾಮ್” ಎಂಬ ಪ್ರತಿಧ್ವನಿಸುವ ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ದೇಶದ ವಿವಿಧ ಭಾಗಗಳಲ್ಲಿ ಜನರು ಒಂದೆಡೆ ಜಮಾಯಿಸಿದರು. ಅವರೆಲ್ಲರೂ ರಾಮನಾಮ ಸ್ಮರಣೆ ಮಾಡಿ ಸಂಭ್ರಮಿಸಿದರು. ದೇಶದ ಬೀದಿಗಳು ಉತ್ಸಾಹದಿಂದ ಬೆಳಗುತ್ತಿದ್ದವು. ಪಟಾಕಿಗಳ ಸ್ಫೋಟವು ರೋಮಾಂಚಕ ಮತ್ತು ವರ್ಣರಂಜಿತ ಸಂದರ್ಭವನ್ನು ಸೃಷ್ಟಿಸಿತು. ಅಮೆರಿಕದ ನ್ಯೂಯಾರ್ಕ್​ ಸಿಟಿಯಲ್ಲಿಯೂ ಜನರು ಸಂಭ್ರಮಿಸಿದರು.

ರಾಮ ಮಂದಿರದ ಒಳಗಿನ ವಾತಾವರಣವು ಆಳವಾದ ಆಧ್ಯಾತ್ಮಿಕ ಪರಿಸರವನ್ನು ಸೃಷ್ಟಿಸಿತ್ತು. ಹಿಂದೂ ಸಂಪ್ರದಾಯದಲ್ಲಿ ಅಪಾರ ಮಹತ್ವವನ್ನು ಹೊಂದಿರುವ ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ “ರಘುಪತಿ ರಾಘವ್ ರಾಜಾ ರಾಮ್, ಪತೀತ್ ಪವನ್ ಸೀತಾ ರಾಮ್” ಎಂಬ ಪವಿತ್ರ ಮಂತ್ರಗಳು ಸಭಾಂಗಣಗಳಲ್ಲಿ ಪ್ರತಿಧ್ವನಿಸಿದವು. ಭಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುವ ಈ ಸ್ತೋತ್ರವು ಆಧ್ಯಾತ್ಮಿಕ ಆಯಾಮವನ್ನು ಸೃಷ್ಟಿಸಿತ್ತು.

ಪ್ರತಿಷ್ಠಾಪನೆಯನ್ನು ಕೇವಲ ಧಾರ್ಮಿಕ ಘಟನೆಯಾಗಿ ನೋಡದೆ, ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕುರುಹು ಎಂದು ಗುರುತಿಸಿಕೊಂಡರು.

ನನಸಾಯಿತು ಶತಮಾನಗಳ ಕನಸು

ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ.

ಇದನ್ನೂ ಓದಿ : Ayodhya Ram Mandir: ರಾಮ ಮಂತ್ರ ಸಾಮೂಹಿಕ ಪಠನಕ್ಕೆ ಜೋಶ್-‌ ಡೈಲಿಹಂಟ್‌ ಡಿಜಿಟಲ್‌ ರೂಮ್

ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ಇದಾದ ಬಳಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ದಾಸ್‌ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠೆ ನೆರವೇರಿಸಿದರು.

ಇದರೊಂದಿಗೆ 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪಿನಂತೆ ರಾಮಮಂದಿರವನ್ನು ನಿರ್ಮಿಸಿ, ಲೋಕಾರ್ಪಣೆ ಮಾಡಿದಂತಾಗಿದೆ. ಸಾವಿರಾರು ಜನರ ಹೋರಾಟ, ಪ್ರಾಣ ತ್ಯಾಗ ಹಾಗೂ ಸುದೀರ್ಘ ಕಾನೂನು ಹೋರಾಟದ ಬಳಿಕ ರಾಮಮಂದಿರದ ಕನಸು ಸಾಕಾರಗೊಂಡಿದೆ. ಈಗ ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು, ಮುಂದಿನ ದಿನಗಳಲ್ಲಿ ರಾಮರಾಜ್ಯದ ಕನಸು ಕೂಡ ನನಸಾಗಲಿದ ಎಂಬುದು ದೇಶದ ಜನರ ಆಶಯವಾಗಿದೆ.

Exit mobile version