Site icon Vistara News

WhatsApp Outage | ವಾಟ್ಸ್ಆ್ಯಪ್ ಸ್ಥಗಿತವಾಗಿದ್ದೇಕೆ? ವರದಿ ಕೊಡಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮಂಗಳವಾರ ವಾಟ್ಸ್ಆ್ಯಪ್ ಬಳಕೆಯಲ್ಲಿ 2 ಗಂಟೆ ವ್ಯತ್ಯಯವಾಗಿತ್ತು. ಈ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯವು ಕೇಳಿಕೊಂಡಿದೆ. ವಾಟ್ಸ್ಆ್ಯಪ್ (WhatsApp Outage) ಈ ಬಗ್ಗೆ ತನ್ನ ವರದಿಯನ್ನು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕಿದೆ. ಈ ಸಂಸ್ಥೆಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಸಚಿವಾಲಯದಡಿ ಕೆಲಸ ಮಾಡುತ್ತಿದೆ.

ಯಾವಾಗ ಸೇವೆಯಲ್ಲಿ ವ್ಯತ್ಯಯವಾಗುತ್ತದೆಯೋ ಆಗ ಸಚಿವಾಲಯವು ಮಧ್ಯೆ ಪ್ರವೇಶಿಸಿ ಸಂಬಂಧಿಸಿದ ಕಂಪನಿಯಂದ ಈ ಬಗ್ಗೆ ಮಾಹಿತಿ ಸಹಿತ ವರದಿಯನ್ನು ಪಡೆದುಕೊಳ್ಳುತ್ತದೆ. ಈಗ ವಾಟ್ಸ್ಆ್ಯಪ್ ಒಡೆತನದ ಮೆಟಾಗೆ ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಕೇಳಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ ಎಂದು ತಿಳಿದು ಬಂದಿದೆ. ತಮ್ಮ ಕಡೆ ಸಂಭವಿಸಿದ ತಾಂತ್ರಿಕ ತೊಂದರೆಯಿಂದಾಗಿ ವಾಟ್ಸ್ಆ್ಯಪ್ ಸ್ವಲ್ಪ ಕಾಲ ಸ್ಥಗಿತವಾಗಿತ್ತು. ಆ ಸಮಸ್ಯೆಯನ್ನು ಈಗ ಬಗೆಹರಿಸಲಾಗಿದೆ ಎಂದು ಮೆಟಾ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಾಟ್ಸ್‌ಆ್ಯಪ್ ಬಿಸಿನೆಸ್ ಮತ್ತು ವೈಯಕ್ತಿಕ ಬಳಕೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಮಂಗಳವಾರ ಮಧ್ಯಾಹ್ನ 2 ಗಂಟೆಗಳ ವಾಟ್ಸ್ಆ್ಯಪ್ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಳಕೆದಾರರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದರು. ಟೆಲಿಗ್ರಾಮ್ ಸೇರಿದಂತೆ ಇತರ ಆ್ಯಪ್‌ಗಳ ಮೊರೆ ಹೋದರು.

ಇದನ್ನೂ ಓದಿ | WhatsApp is OK | ವಾಟ್ಸ್ಆ್ಯಪ್‌ಗೆ ಹಿಡಿದಿದ್ದ ಗ್ರಹಣ ವಿಮೋಚನೆ! ನೀವೀಗ ಸಂದೇಶ ಕಳುಹಿಸಬಹುದು!

Exit mobile version