ನವದೆಹಲಿ: ಕೇಂದ್ರ ಸರ್ಕಾರವು 2023ನೇ ಸಾಲಿನ ಪದ್ಮ ಪ್ರಶಸ್ತಿ (Padma Awards 2023) ಘೋಷಣೆ ಮಾಡಿದ್ದು, ಕರ್ನಾಟಕದ ಉಮ್ಮಥಾಟ್ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ (79), ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ (72) ಸೇರಿ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 25 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಕೊಡವ ಸಂಸ್ಕೃತಿ ಹಾಗೂ ನೃತ್ಯವನ್ನು ಪಸರಿಸುವಲ್ಲಿ ರಾಣಿ ಮಾಚಯ್ಯ ಅವರ ಪಾತ್ರ ಮಹತ್ತರವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷೆಯಾಗಿರುವ ಇವರು ಕಲೆಗೆ ನೀಡಿದ ಕೊಡುಗೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಮುನಿ ವೆಂಕಟಪ್ಪ ಅವರು ತಮಟೆ ನುಡಿಸುವ ಮೂಲಕ ಜಾನಪದ ಕಲೆಗೆ ನೀಡಿದ ಕೊಡುಗೆ ಪರಿಗಣಿಸಿ ಪ್ರಶಸ್ತಿ ಘೋಷಿಸಲಾಗಿದೆ.
ಖಾದರ್ ವಲ್ಲಿ ದುಡೇಕುಲ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಕಲೆ ಹಾಗೂ ಎಸ್.ಸುಬ್ಬರಾಮನ್ ಅವರಿಗೆ ಪ್ರಾಚ್ಯವಸ್ತು ಸಂಶೋಧನೆಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಇದನ್ನೂ ಓದಿ: Padma Awards 2023: ನಾಡಿನ ಎಂಟು ಸಾಧಕರಿಗೆ ಪದ್ಮ ಪ್ರಶಸ್ತಿಯ ಗರಿ, ಇಲ್ಲಿದೆ ಅವರ ಸಾಧನೆಗಾಥೆ