Site icon Vistara News

Cigarette Lighter: 10 ರೂ. ಮೌಲ್ಯದ ಸಿಗರೇಟ್‌ ಲೈಟರ್‌ ಬಳಸುತ್ತೀರಾ? ನಿಮ್ಮ ಜೇಬು ‘ಸುಡುವುದು’ ಗ್ಯಾರಂಟಿ

Cigarette lighters Import banned

Central Government Bans import of cigarette lighters under ₹20

ನವದೆಹಲಿ: ಕೇಂದ್ರ ಸರ್ಕಾರವು 20 ರೂಪಾಯಿಗಿಂತ ಕಡಿಮೆ ಬೆಲೆ ಇರುವ ಸಿಗರೇಟ್‌ ಲೈಟರ್‌ಗಳ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ. 20 ರೂಪಾಯಿಗಿಂತ ಕಡಿಮೆ ಬೆಲೆ ಇರುವ ಸಿಗರೇಟ್‌ಗಳ ಆಮದು ಪ್ರಮಾಣವನ್ನು ಇಳಿಸಬೇಕು ಎಂಬ ಕಾರಣಕ್ಕಾಗಿ ನಿಷೇಧಿಸಿದೆ ಎಂದು ತಿಳಿದುಬಂದಿದೆ. ಆದರೆ, 20 ರೂಪಾಯಿಗಿಂತ ಹೆಚ್ಚಿನ ಬೆಲೆ ಇರುವ ಸಿಗರೇಟ್‌ಗಳ ಆಮದು ಮುಂದುವರಿಯಲಿದೆ. ಆದರೆ, ಇನ್ನುಮುಂದೆ 10 ರೂಪಾಯಿ ಮೌಲ್ಯದ ಸಿಗರೇಟ್‌ ಲೈಟರ್‌ಗಳ ಲಭ್ಯ

“ಸಿಗರೇಟ್‌ ಲೈಟರ್‌ಗಳ ಆಮದನ್ನು ನಿಷೇಧಿಸಲಾಗಿದೆ. ಸಿಗರೇಟ್‌ ಲೈಟರ್‌ಗಳ ಆಮದು ನೀತಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಇದ್ದುವರೆಗೆ ಸುಂಕವಿಲ್ಲದೆ ಆಮದು ಮಾಡಿಕೊಳ್ಳಲಾಗುತ್ತಿದ್ದ 20 ರೂಪಾಯಿಗಿಂತ ಕಡಿಮೆ ದರದ ಲೈಟರ್‌ಗಳ ಆಮದು ನಿಷೇಧಿಸಲಾಗಿದೆ. ಆದಾಗ್ಯೂ, 20 ರೂಪಾಯಿಗಿಂತ ಜಾಸ್ತಿ ಇರುವ ಲೈಟರ್‌ಗಳ ಮೇಲೂ ಯಾವುದೇ ಸುಂಕವಿರುವುದಿಲ್ಲ” ಎಂದು ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ (DGFT) ತಿಳಿಸಿದೆ.

2022-2023ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 5.41 ಕೋಟಿ ರೂಪಾಯಿ (0.66 ದಶಲಕ್ಷ ಡಾಲರ್)‌ ಮೌಲ್ಯದ ಸಿಗರೇಟ್‌ ಲೈಟರ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಭಾರತವು ಯುಎಇ, ಸ್ಪೇನ್‌ ಹಾಗೂ ಟರ್ಕಿಯಿಂದ ಪಾಕೆಟ್‌ ಲೈಟರ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ ಸಿಗರೇಟ್‌ ಸೇದುವವರು ಹೆಚ್ಚಾಗಿ ಬಳಸುವುದರಿಂದ ಇವುಗಳಿಗೆ ಸಿಗರೇಟ್‌ ಲೈಟರ್‌ ಎನ್ನುತ್ತಾರೆ.

ಇದನ್ನೂ ಓದಿ: Viral News : ಏರ್‌ ಇಂಡಿಯಾ ವಿಮಾನದಲ್ಲಿ ತೆಂಗಿನ ಕಾಯಿ ಬ್ಯಾನ್‌! ವೈರಲ್‌ ಆಯ್ತು ಸುದ್ದಿ

ಕೇಂದ್ರದ ನಿರ್ಧಾರದಿಂದ ಏನಾಗುತ್ತದೆ?

ದೇಶದಲ್ಲಿ ಹೆಚ್ಚಿನ ಜನ 10 ರೂಪಾಯಿ ಮೌಲ್ಯದ ಸಿಗರೇಟ್‌ ಲೈಟರ್‌ಗಳನ್ನು ಬಳಸುತ್ತಾರೆ. ಆದರೆ, ಇವುಗಳ ಆಮದು ನಿಷೇಧಗೊಳಿಸಿದ ಕಾರಣ ಇನ್ನುಮುಂದೆ 10 ರೂಪಾಯಿ ಮೌಲ್ಯದ ಲೈಟರ್‌ಗಳು ಸಿಗುವುದು ಕಷ್ಟವಾಗುತ್ತದೆ. ಗ್ಯಾಸ್‌ ತುಂಬಿದ ಲೈಟರ್‌ಗಳು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದೆ ಜನ ಇನ್ನು 20 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಲೈಟರ್‌ಗಳನ್ನು ಖರೀದಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

Exit mobile version