Site icon Vistara News

YouTube Channels: ದೇಶ ವಿರೋಧಿ ಚಟುವಟಿಕೆಗಳಿಗೆ ಬ್ರೇಕ್; 8 ಯುಟ್ಯೂಬ್‌ ಚಾನೆಲ್‌ ನಿಷೇಧಿಸಿದ ಕೇಂದ್ರ ಸರ್ಕಾರ

Modi Government Blocks YouTube Channels

Central Government busts 8 YouTube channels for spreading fake news

ನವದೆಹಲಿ: ಕೇಂದ್ರ ಸರ್ಕಾರವು ನಕಲಿ ಸುದ್ದಿಗಳನ್ನು ಹರಡುವ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯುಟ್ಯೂಬ್‌ ಚಾನೆಲ್‌ ಹಾಗೂ ವೆಬ್‌ಸೈಟ್‌ಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ನಕಲಿ ಸುದ್ದಿ ಪ್ರಸಾರ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ 8 ಯುಟ್ಯೂಬ್‌ ಚಾನೆಲ್‌ಗಳನ್ನು (YouTube Channels) ಕೇಂದ್ರ ಸರ್ಕಾರ ನಿಷೇಧಿಸಿದೆ. ಆ ಮೂಲಕ ನಕಲಿ ಸುದ್ದಿ ಪ್ರಸಾರ ಮಾಡುವ ಇತರ ಯುಟ್ಯೂಬ್‌ ಚಾನೆಲ್‌ಗಳಿಗೂ ದಿಟ್ಟ ಸಂದೇಶ ರವಾನಿಸಿದೆ.

ಎಂಟೂ ಯುಟ್ಯೂಬ್‌ ಚಾನೆಲ್‌ಗಳು ಸೇರಿ ಒಟ್ಟು 2.3 ಕೋಟಿ ಸಬ್‌ಸ್ಕ್ರೈಬ್‌ಗಳನ್ನು ಹೊಂದಿದ್ದವು. ಆದರೆ, ಇವು ನಕಲಿ ಸುದ್ದಿ ಪ್ರಸಾರ ಮಾಡುತ್ತಿದ್ದ ಕಾರಣ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಯಹಾ ಸಚ್‌ ದೇಖೊ (Yahan Sach Dekho), ಕ್ಯಾಪಿಟಲ್‌ ಟಿವಿ (Capital TV), ಕೆಪಿಎಸ್‌ ನ್ಯೂಸ್ (KPS News),‌ ಸರ್ಕಾರಿ ವ್ಲೋಗ್ (Sarkari Vlog),‌ ಅರ್ನ್‌ ಟೆಕ್‌ ಇಂಡಿಯಾ (Earn Tech India), ಎಸ್‌ಪಿಎನ್‌9 ನ್ಯೂಸ್ (SPN9 News),‌ ಎಜ್ಯುಕೇಶನಲ್‌ ದೋಸ್ತ್‌ (Educational Dost) ಹಾಗೂ ವರ್ಲ್ಡ್‌ ಬೆಸ್ಟ್‌ ನ್ಯೂಸ್ (World Best News)‌ ಯುಟ್ಯೂಬ್‌ ಚಾನೆಲ್‌ಗಳು ನಿಷೇಧಕ್ಕೊಳಗಾಗಿವೆ.

ವರ್ಲ್ಡ್‌ ಬೆಸ್ಟ್‌ ನ್ಯೂಸ್ 17 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು, 18 ಕೋಟಿ ವೀಕ್ಷಣೆ ಕಂಡಿದೆ. ಆದರೆ, ಇದು ಸೇನೆಯ ಕುರಿತು ತಪ್ಪು ಮಾಹಿತಿ ನೀಡುತ್ತಿತ್ತು. 34 ಲಕ್ಷ ಸಬ್‌ಸ್ಕ್ರೈಬರ್ಸ್‌ ಹಾಗೂ 23 ಕೋಟಿ ವೀಕ್ಷಣೆ ಕಂಡಿದ್ದ ಎಜುಕೇಷನಲ್‌ ದೋಸ್ತ್‌ ಚಾನೆಲ್‌ ಸರ್ಕಾರದ ಯೋಜನೆಗಳ ಕುರಿತು ಜನರ ದಾರಿ ತಪ್ಪಿಸುತ್ತಿತ್ತು. ಉಳಿದ ಚಾನೆಲ್‌ಗಳು ಕೂಡ ಚುನಾವಣೆ ಆಯೋಗ, ಚುನಾವಣೆ, ವಿದ್ಯುನ್ಮಾನ ಮತಯಂತ್ರ (EVM), ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಗ್ಯಾಸ್‌ ಸಿಲಿಂಡರ್‌ ಸೇರಿ ಹಲವು ವಿಷಯಗಳಲ್ಲಿ ಜನರ ದಾರಿ ತಪ್ಪಿಸುತ್ತಿವೆ ಎಂದು ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ.

ಇದನ್ನೂ ಓದಿ: ವಿಸ್ತಾರ Explainer: ಮೋದಿ ಸರ್ಕಾರ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಆಮದು ನಿಷೇಧಿಸಿದ್ದೇಕೆ? ದರ ಹೆಚ್ಚಬಹುದಾ?

ಭಾರತದ ಭದ್ರತೆ, ಆಡಳಿತ, ವಿದೇಶಾಂಗ ವ್ಯವಹಾರ, ಧಾರ್ಮಿಕ ವಿಷಯಗಳು- ಹೀಗೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ತಪ್ಪು ಮಾಹಿತಿ ನೀಡುವುದಲ್ಲದೆ, ಕೋಮುಗಲಭೆ, ಸಂಘರ್ಷಕ್ಕೆ ಕಾರಣವಾಗುತ್ತಿದ್ದ ಎಲ್ಲ ಯೂಟ್ಯೂಬ್​ ಚಾನೆಲ್​ಗಳು, ವೆಬ್​ಸೈಟ್​ಗಳ ವಿರುದ್ಧ ಕೇಂದ್ರ ಸರ್ಕಾರವು, 2021ರ ಐಟಿ ನಿಯಮ (ಮಾಹಿತಿ ತಂತ್ರಜ್ಞಾನ-ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ 150ಕ್ಕೂ ಅಧಿಕ ಯುಟ್ಯೂಬ್‌ ಚಾನೆಲ್‌ ಹಾಗೂ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿದೆ ಎಂದು ತಿಳಿದುಬಂದಿದೆ. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ವಿದೇಶಿ Appಗಳನ್ನೂ ಕೇಂದ್ರ ಸರ್ಕಾರ ನಿಷೇಧಿಸಿದೆ.

Exit mobile version