ನವದೆಹಲಿ: ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (Pradhan Mantri Garib Kalyan Anna Yojana) ಮುಂದಿನ ಐದು ವರ್ಷಗಳವರೆಗೆ ವಿಸ್ತರಣೆ ಮಾಡಲಾಗಿದೆ(Scheme Extended). ಈ ಯೋಜನೆಯಡಿ ಬಡವರು ಎಂದು ಗುರುತಿಸಲಾದ ಜನರು (Poor People) ಪ್ರತಿ ತಿಂಗಳು 5 ಕೆಜಿ ಆಹಾರಧಾನ್ಯಗಳನ್ನು ಪಡೆಯಲಿದ್ದಾರೆ. ಹಾಗೆಯೇ, ಅಂತ್ಯೋದಯ ಕುಟುಂಬಗಳು (Antyodaya households) ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ಪಡೆಯಲಿವೆ. ಒಟ್ಟಾರೆಯಾಗಿ 81 ಕೋಟಿ ಜನರಿಗೆ ಈ ಯೋಜನೆಯ ಲಾಭ ದೊರೆಯಲಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗಾಗಿ ಕೇಂದ್ರ ಸರ್ಕಾರವು 11.80 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಕೇಂದ್ರ ಸಚಿವ ಅನುಗಾರ್ ಠಾಕೂರ್ ಅವರು ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆಯ ಮಾಹಿತಿಯನ್ನು ಅವರು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಪ್ರತಿ ಫಲಾನುಭವಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ 5 ಕೆಜಿ ಸಬ್ಸಿಡಿ ಆಹಾರ ಧಾನ್ಯವನ್ನು ಒದಗಿಸಲಾಗುತ್ತಿದೆ.
ಕೇಂದ್ರ ಸಚಿವ ಸಂಪುಟವು, 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವ ಕೇಂದ್ರ ಯೋಜನೆಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, 2024-25ರ ಆರ್ಥಿಕ ವರ್ಷದಿಂದ ಎರಡು ವರ್ಷಗಳವರೆಗೆ 1,261 ಕೋಟಿ ರೂ. ವೆಚ್ಚವಾಗುತ್ತದೆ. ಈ ಯೋಜನೆಯು 2024-25 ರಿಂದ 2025-2026 ರ ಅವಧಿಯಲ್ಲಿ 15,000 ಆಯ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೃಷಿ ಉದ್ದೇಶಕ್ಕಾಗಿ ರೈತರಿಗೆ ಬಾಡಿಗೆ ಸೇವೆಗಳನ್ನು ಒದಗಿಸಲು ಡ್ರೋನ್‌ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಠಾಕೂರ್ ಹೇಳಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಆರು ತಿಂಗಳಲ್ಲಿ ಜನಕಲ್ಯಾಣ ಯೋಜನೆ ಜಾರಿ ಮಾಡಿ! ಅಧಿಕಾರಿಗಳಿಗೆ ಮೋದಿ ಟಾರ್ಗೆಟ್