Site icon Vistara News

Indian Highways: 2027ರ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಗಳಿಂದಲೇ 2 ಲಕ್ಷ ಕೋಟಿ ರೂ. ಆದಾಯ!

Bangalore Mysore expressway

ನವದೆಹಲಿ: ಮುಂಬರುವ ವರ್ಷಗಳಲ್ಲಿ ಹೆದ್ದಾರಿಗಳಿಂದ (Indian Highways) ಹಣಗಳಿಸುವ ಮೂಲಕ ಸರಿಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಲು ಭಾರತ ಸರ್ಕಾರ ಯೋಜಿಸಿದೆ ಎಂದು ರೇಟಿಂಗ್ ಏಜೆನ್ಸಿ ಕೇರ್‌ಎಡ್ಜ್ (CareEdge) ಹೇಳಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (National Highways Authority) ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ ಸರಿಸುಮಾರು 4,000 ರಿಂದ 4,500 ಕಿಲೋಮೀಟರ್‌ಗಳಷ್ಟು ಹೊಸ ರಸ್ತೆಗಳನ್ನು ನಿರ್ಮಿಸುವ ನಿರೀಕ್ಷೆಯಿದೆ. ಸರ್ಕಾರವು (Central Government) ಈ ಸ್ವತ್ತುಗಳಿಂದ ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (ಇನ್ವಿಟ್) ಅಥವಾ ಟೋಲ್-ಆಪರೇಟ್-ಟ್ರಾನ್ಸ್‌ಫರ್ (TOT) ಮಾದರಿಯಲ್ಲಿ ಆದಾಯವನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮಾದರಿಯನ್ನು ಆಧರಿಸಿದ ಸರ್ಕಾರದ ಪ್ರಸ್ತುತ ಯೋಜನೆಗಳು ಯಶಸ್ವಿಯಾಗಿವೆ. 2020ರ ಮಾರ್ಚ್ ಮೊದಲು ನೀಡಲಾದ 88% ರಸ್ತೆ ಯೋಜನೆಗಳು ಈಗ ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳಿಂದ ಆದಾಯ ಕೂಡ ಗಳಿಸಲಾಗುತ್ತಿದೆ. 2020 ರ ಪೂರ್ವದ ಅವಧಿಯಲ್ಲಿ ನೀಡಲಾದ 12% ಯೋಜನೆಗಳು ಮಾತ್ರ ಅವುಗಳ ನಿರ್ವಾಹಕರ ಕಾರಣದಿಂದಾಗಿ ವಿಳಂಬವಾಗಿವೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

ಈ ಸುದ್ದಿಯನ್ನೂ ಓದಿ: Pot Holes: ವರ್ಷಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತಗೊಳಿಸಲು ಯತ್ನ: ನಿತಿನ್ ಗಡ್ಕರಿ

ಪ್ರಾಯೋಜಕರು ಉತ್ತಮ ಬ್ಯಾಲೆನ್ಸ್ ಶೀಟ್ ಸೂಚಕಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ, ಅವರಿಗೆ ಆರ್ಥಿಕ ಹೊಂದಾಣಿಕೆಯನ್ನು ಒದಗಿಸಲಾಗವುದು. ಗಣನೀಯ ಪ್ರಮಾಣದ ನಿರ್ಮಾಣದ ಬಂಡವಾಳದೊಂದಿಗೆ ಮಧ್ಯಮ ಪ್ರಾಯೋಜಕರು ಮತ್ತು ಕಠಿಣ ಮಂಜೂರಾತಿ ನಿಯಮಗಳು ವರ್ಧಿತ ಹಣಕಾಸು ಅಪಾಯಗಳನ್ನು ಎದುರಿಸುತ್ತವೆ ಎಂದು ಕೇರ್ ಎಡ್ಜ್ ರೇಟಿಂಗ್ಸ್‌ನ ನಿರ್ದೇಶಕ ಮೌಲೇಶ್ ದೇಸಾಯಿ ಹೇಳಿದ್ದಾರೆ.

2021 ನವೆಂಬರ್‌ನಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು InvIT ಆರಂಭಿಸಿತ್ತು ಮತ್ತು 2022ರ ಹೊತ್ತಿಗೆ ಸುಮಾರು 102 ಶತಕೋಟಿ ರೂಪಾಯಿ ಸಂಗ್ರಹಿಸಿತ್ತು. ಈಗ ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಮುಕ್ತಾಯಕ್ಕಿಂತ ಮುಂಚೆಯೇ InvIT ಮತ್ತೊಂದು ಕಂತಿನ ಮೂಲಕ ಸುಮಾರು 100 ಶತಕೋಟಿ ರೂಪಾಯ ಸಂಗ್ರಹಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version