Site icon Vistara News

MRPL: ಶೀಘ್ರ ಹಿಂದೂಸ್ತಾನ್‌ ಪೆಟ್ರೋಲಿಯಂ ಜತೆ ಮಂಗಳೂರು ರಿಫೈನರಿ ವಿಲೀನ!

Central government is planning to merge mrpl with hpcl

ನವದೆಹಲಿ: ತೈಲ ಮತ್ತು ನೈಸರ್ಗಿಕ ಅನಿಲ(ONGC) ಸಂಸ್ಥೆಯ ಎರಡು ಕಂಪನಿಗಳಾದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್(MRPL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳನ್ನು ವಿಲೀನ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಎಂಆರ್‌ಪಿಎಲ್ ಮತ್ತು ಎಚ್‌ಪಿಸಿಎಲ್‌ಗಳನ್ನು ವಿಲೀನ ಮಾಡುವ ಪ್ರಕ್ರಿಯೆಯನ್ನು ಒಎನ್‌ಜಿಸಿ ಐದು ವರ್ಷಗಳ ಹಿಂದೆಯೇ ಆರಂಭಿಸಿತ್ತು. ಆಗ ಸರ್ಕಾರದಿಂದ ಅನುಮತಿ ಪಡೆದುಕೊಂಡಿತ್ತು. ಆದರೆ, ಬಳಿಕ ಈ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಗಳು ಆಗಲಿಲ್ಲ. ಈಗ ತೈಲ ಸಚಿವಾಲಯವು ಎರಡು ಸಂಸ್ಥೆಗಳ ವಿಲೀನಕ್ಕೆ ಒತ್ತಾಯಿಸುತ್ತಿದೆ ಎಂದು ತಿಳಿದು ಬಂದಿದೆ. ಷೇರು ವಿನಿಮಯವನ್ನು ಇದು ಒಳಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: HPCL : ಎಚ್‌ಪಿಸಿಎಲ್‌ನಿಂದ ಶೀಘ್ರದಲ್ಲಿಯೇ ಎಥೆನಾಲ್‌ ಅಡುಗೆ ಒಲೆ ಬಿಡುಗಡೆ

ಎಂಆರ್‌ಪಿಎಲ್‌ನಲ್ಲಿ ಒಎನ್‌ಜಿಸಿ ಶೇ. 71.63 ಷೇರು ಹೊಂದಿದೆ. ಎಚ್‌ಪಿಸಿಎಲ್ ಕೂಡ ಶೇ.16.96 ಪಾಲು ಹೊಂದಿದೆ. ಸಾರ್ವಜನಿಕರ ಪಾಲು ಶೇ.11.42ರಷ್ಟಿದೆ. ಶೀಘ್ರವೇ ತೈಲ ಸಚಿವಾಲಯವು, ಎಂಆರ್‌ಪಿಎಲ್ ಮತ್ತು ಎಚ್‌ಪಿಸಿಎಲ್ ವಿಲೀನಕ್ಕೆ ಸಂಬಂಧಿಸಿದಂತೆ ಒಎನ್‌ಜಿಸಿ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಒಎನ್‌ಜಿಸಿಯಾಗಲೀ, ಎಂಆರ್‌ಪಿಎಲ್ ಅಥವಾ ಎಚ್‌ಪಿಸಿಎಲ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version