Site icon Vistara News

Wheat Stock: ಗೋಧಿ ದಾಸ್ತಾನು ಮಿತಿಯನ್ನು ಇಳಿಕೆ ಮಾಡಿದ ಕೇಂದ್ರ ಸರ್ಕಾರ

central government reduced the wheat stock limit

ನವದೆಹಲಿ: ಅಕ್ರಮ ದಾಸ್ತಾನು ತಡೆಯಲು ಮುಂದಾಗಿರುವ ಕೇಂದ್ರ ಸರ್ಕಾರವು ವ್ಯಾಪಾರಿಗಳು(Central Government), ಸಗಟು ವ್ಯಾಪಾರಸ್ಥರು, ಬೃಹತ್ ಚೈನ್ ರಿಟೇಲರ್ಸ್‌ಗೆ ಗೋಧಿ ದಾಸ್ತಾನು ಮಿತಿಯನ್ನು ಕಡಿಮೆ ಮಾಡಿದೆ(Wheat Stock Limit). ವ್ಯಾಪಾರಿಗಳು ಅಥವಾ ಸಗಟು ವ್ಯಾಪಾರಿಗಳಿಗೆ ಗೋಧಿ ದಾಸ್ತಾನು ಮಿತಿಯನ್ನು 1000ರಿಂದ 500 ಮೆಟ್ರಿಕ್ ಟನ್‌ಗೆ (metric ton) ಇಳಿಸಿದೆ.

ಎಲ್ಲಾ ಗೋಧಿ ಸ್ಟಾಕಿಂಗ್ ಘಟಕಗಳು ಗೋಧಿ ಸ್ಟಾಕ್ ಮಿತಿ ಪೋರ್ಟಲ್ (https://evegoils.nic.in/wsp/login)ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರದಂದು ಸ್ಟಾಕ್ ಸ್ಥಾನವನ್ನು ನವೀಕರಿಸಬೇಕು. ಪೋರ್ಟಲ್‌ನಲ್ಲಿ ನೋಂದಾಯಿಸದ ಅಥವಾ ಸ್ಟಾಕ್ ಮಿತಿಗಳನ್ನು ಉಲ್ಲಂಘಿಸುವ ಯಾವುದೇ ಘಟಕವು ಅಗತ್ಯ ಸರಕುಗಳ ಕಾಯಿದೆ, 1955 ರ ಸೆಕ್ಷನ್ 6 ಮತ್ತು 7 ರ ಅಡಿಯಲ್ಲಿ ಸೂಕ್ತ ದಂಡನಾತ್ಮಕ ಕ್ರಮಕ್ಕೆ ಒಳಪಟ್ಟಿರುತ್ತದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗೋಧಿ ದಾಸ್ತಾನು ಮಿತಿಯನ್ನು ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳಿಗೆ 1,000 ಮೆ.ಟನ್‌ನಿಂದ 500 ಮೆ.ಟನ್‌ಗೆ ಇಳಿಸಲಾಗಿದೆ. ಬೃಹತ್ ಚೈನ್ ರಿಟೇಲರ್ಸ್‌ ವ್ಯಾಪಾರಿಗಳಿಗೆ, ಗೋಧಿ ದಾಸ್ತಾನು ಮಿತಿಯನ್ನು ಅವರ ಎಲ್ಲಾ ಡಿಪೋಗಳಲ್ಲಿ 1,000ರಿಂದ 500 ಮೆಟ್ರಿಕ್ ಟನ್‌ಗೆ ಇಳಿಕೆ ಮಾಡಲಾಗಿದೆ.

ಒಂದು ವೇಳೆ ಸೂಚಿಸಲಾದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ದಾಸ್ತಾನು ಮಾಡಿಕೊಂಡರೆ ಅವರು ಅಧಿಸೂಚನೆಯನ್ನು ನೀಡಿದ 30 ದಿನಗಳ ಒಳಗೆ ಅದನ್ನು ನಿಗದಿತ ಸ್ಟಾಕ್ ಮಿತಿಗಳಿಗೆ ತರಬೇಕು. ದೇಶದಲ್ಲಿ ಯಾವುದೇ ಕೃತಕ ಗೋಧಿ ಕೊರತೆ ಉಂಟಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಈ ದಾಸ್ತಾನು ಮಿತಿಗಳ ಜಾರಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ್ ಅಕ್ಕಿಗೆ ಭರ್ಜರಿ ಬೇಡಿಕೆ; ಖರೀದಿಗೆ ಮುಗಿಬಿದ್ದ ಜನ

ಬೆಂಗಳೂರು: ಆಹಾರ ಸಾಮಗ್ರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ತುಸು ಪರಿಹಾರ ನೀಡಲು ರಿಯಾಯಿತಿ ದರದಲ್ಲಿ ಗುಣಮಟ್ಟದ ಅಕ್ಕಿ, ಗೋಧಿ ಹಿಟ್ಟು, ಬೇಳೆ ಕಾಳು ವಿತರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಭಾರತ್‌ ಬ್ರ್ಯಾಂಡ್‌ನಲ್ಲಿ ಅಕ್ಕಿ ಮಾರಾಟಕ್ಕೆ ಮಂಗಳವಾರ ಚಾಲನೆ ನೀಡಲಾಗಿತ್ತು. ಇದರಿಂದ ದೇಶದ ಎಲ್ಲೆಡೆ ಭಾರತ್‌ ಅಕ್ಕಿಗೆ (Bharat Rice) ಭಾರಿ ಬೇಡಿಕೆ ಉಂಟಾಗಿದ್ದು, ರಾಜ್ಯದಲ್ಲೂ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡುಬಂದಿದೆ.

‘ಭಾರತ್‌’ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಪ್ರತಿ ಕೆ.ಜಿ.ಗೆ 29 ರೂ. ನಿಗದಿ ಪಡಿಸಲಾಗಿದೆ. ಕೋಲಾರದಲ್ಲಿ ಬುಧವಾರ ಭಾರತ್ ಅಕ್ಕಿಗಾಗಿ ಜನರು ಮುಗಿಬಿದ್ದದ್ದು ಕಂಡುಬಂತು. ಹತ್ತು ಕೆ.ಜಿ. ಬ್ಯಾಗ್‌ಗೆ 290 ರೂ ಹಣ ಕೊಟ್ಟು ಜನರು ಭಾರತ್ ಅಕ್ಕಿ ಖರೀದಿಸಿದರು.

ಕೋಲಾರ ನಗರದಲ್ಲಿ ಮೊದಲ ಹಂತದಲ್ಲಿ 10 ಕೆ.ಜಿ.ಯ ಸಾವಿರ ಬ್ಯಾಗ್‌ಗಳು ಮಾರಾಟವಾಗಿವೆ. ನಾಳೆಯಿಂದ ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು, ಬೇಳೆ ಕಾಳು ರಿಯಾಯಿತಿ ದರದಲ್ಲಿ ಸಿಗಲಿವೆ. ಇದು ಮೋದಿ ಸರ್ಕಾರದ ಮಹತ್ವದ ಕೊಡುಗೆ. ಈ ಭಾರತ್ ಅಕ್ಕಿ ವಿತರಣೆಯಲ್ಲಿ ಯಾವುದೇ ರಾಜಕೀಯ, ಭೇದ ಭಾವ ಇಲ್ಲ. ಸಮಸ್ತ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೋಲಾರದ ಬಿಜೆಪಿ ಮುಖಂಡ ಓಂ ಶಕ್ತಿ ಚಲಪತಿ ತಿಳಿಸಿದ್ದಾರೆ.

ಭಾರತ್‌ ಅಕ್ಕಿಯನ್ನು ಪ್ರತಿ ಕೆ.ಜಿ. 29 ರೂ.ಗಳಿಗೆ ಮಾರಾಟ ಮಾಡುತ್ತಿದ್ದರೆ, ಭಾರತ್‌ ಅಟ್ಟಾ (ಗೋಧಿ ಹಿಟ್ಟು) ಪ್ರತಿ ಕೆ.ಜಿ 27.5 ರೂ., ಭಾರತ್‌ ದಾಲ್‌(ಕಡಲೆ ಬೇಳೆ) 60 ರೂ.ಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಲೆ ಬೇಳೆಯನ್ನು 1 ಕೆ.ಜಿ ಪ್ಯಾಕ್​ಗೆ ಪ್ರತಿ ಕೆ.ಜಿ.ಗೆ 60 ರೂ., 30 ಕೆ.ಜಿಯ ಪ್ಯಾಕ್​ಗೆ ಪ್ರತಿ ಕೆ.ಜಿ.ಗೆ 55 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Bharat Rice: ಬೆಲೆ ಏರಿಕೆ ಎಫೆಕ್ಟ್; ಕೇಂದ್ರದಿಂದ ಕೆ.ಜಿ.ಗೆ 29 ರೂ.ನಂತೆ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ!

Exit mobile version