Site icon Vistara News

Union Cabinet | 11 ವರ್ಷದ ಬಳಿಕ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌, ಡೌನ್‌ಲಿಂಕಿಂಗ್‌ ಮಾರ್ಗಸೂಚಿ ಬದಲು, ಏನಿದೆ ವಿಶೇಷ?

Uplinking And Downlinking

ನವದೆಹಲಿ: ದೇಶದಲ್ಲಿ 11 ವರ್ಷದ ಬಳಿಕ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ (Uplinking) ಹಾಗೂ ಡೌನ್‌ಲಿಂಕಿಂಗ್‌ಗೆ (Downlinking) ನೂತನ ಮಾರ್ಗಸೂಚಿಗಳನ್ನು ಹೊರಡಿಸಲು ಕೇಂದ್ರ ಸಚಿವ ಸಂಪುಟ ಸಭೆ (Union Cabinet) ಸಮ್ಮತಿ ಸೂಚಿಸಿದೆ. 2011ರಲ್ಲಿ ಕೊನೆಯ ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸಲಾಗಿತ್ತು.

ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ಲಿಂಕ್‌ ಮತ್ತು ಡೌನ್‌ಲಿಂಕ್‌ ಟೆಲಿಪೋರ್ಟ್‌ಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ (DSNG) ಅಥವಾ ಸ್ಯಾಟಲೈಟ್ ಸುದ್ದಿ ಸಂಗ್ರಹ (SNG) ಅಥವಾ ಎಲೆಕ್ಟ್ರಾನಿಕ್ ಸುದ್ದಿ ಸಂಗ್ರಹ (ENG) ವ್ಯವಸ್ಥೆಗಳು, ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್‌ಲಿಂಕ್‌ ಮತ್ತು ನೇರ ಪ್ರಸಾರದ ತಾತ್ಕಾಲಿಕ ಅಪ್‌ಲಿಂಕ್ ಬಳಕೆಗೆ ನೋಂದಣಿಯಾದ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ನೂತನ ಮಾರ್ಗಸೂಚಿಗಳು ಸುಲಭಗೊಳಿಸುತ್ತವೆ.

ನೂತನ ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು…
| ಯಾವುದೇ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲು ಈಗ ಅನುಮತಿ ಬೇಕಿಲ್ಲ
| ಕಾರ್ಯಕ್ರಮದ ಕುರಿತು ಮೊದಲೇ ನೋಂದಣಿ ಮಾಡಿಕೊಂಡಿದ್ದರೆ ನೇರ ಪ್ರಸಾರದ ಅನುಮತಿ ಬೇಕಾಗಿಲ್ಲ
| ಭಾರತದ ಟೆಲಿಪೋರ್ಟ್‌ಗಳು ವಿದೇಶಿ ಚಾನೆಲ್‌ಗಳನ್ನು ಕೂಡ ಅಪ್‌ಲಿಂಕ್‌ ಮಾಡಿಕೊಳ್ಳಲು ಅವಕಾಶವಿದೆ
| ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲಿ ಹೊಣೆಗಾರಿಕೆ ತೋರಿಸುವುದು
| ಇದೇ ವಿಷಯದ ಕುರಿತು ನಿತ್ಯ ಅರ್ಧ ಗಂಟೆ ಕಾರ್ಯಕ್ರಮ ಪ್ರಸಾರ ಮಾಡಬೇಕು ಎಂಬ ನಿಬಂಧನೆ
| ಮಹಿಳಾ ಸಬಲೀಕರಣ, ಬೋಧನೆ, ಕೃಷಿ ಸೇರಿ ಸಾರ್ವಜನಿಕ ಹಿತಾಸಕ್ತಿಯ ಕುರಿತು ಕಾರ್ಯಕ್ರಮ ಪ್ರಸಾರ

ಇದನ್ನೂ ಓದಿ | ವಿಸ್ತಾರ ನ್ಯೂಸ್ ಟಿವಿ‌ | ಏನಿದರ ಧ್ಯೇಯ, ಉದ್ದೇಶ, ಕಾರ್ಯವೈಖರಿ?

Exit mobile version