Site icon Vistara News

Bangalore Onion: ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ; ರಫ್ತು ಸುಂಕ ವಿನಾಯಿತಿ ನೀಡಿದ ಕೇಂದ್ರ

Bangalore Rose Onion

ಬೆಂಗಳೂರು: ದೇಶಾದ್ಯಂತ ಖ್ಯಾತಿ ಗಳಿಸಿರುವ ‘ಬೆಂಗಳೂರು ಗುಲಾಬಿ ಈರುಳ್ಳಿ’ (Bangalore Onion) ಬೆಳೆಗಾರರಿಗೆ, ರಫ್ತು ಮಾಡುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಗುಲಾಬಿ ಈರುಳ್ಳಿ ಮೇಲಿನ ರಫ್ತು ಸುಂಕಕ್ಕೆ ಕೇಂದ್ರ ಸರ್ಕಾರವು ಕೆಲವು ಷರತ್ತುಗಳೊಂದಿಗೆ ವಿನಾಯಿತಿ (Export Duty) ನೀಡಿದೆ. ಇದರಿಂದಾಗಿ, ಈರುಳ್ಳಿ ಬೆಳೆಗಾರರು, ವ್ಯಾಪಾರಿಗಳು ರಫ್ತು ಸುಂಕವಿಲ್ಲದೆ ಬೆಂಗಳೂರು ಈರುಳ್ಳಿಯನ್ನು ರಫ್ತು ಮಾಡಿ, ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ಕರ್ನಾಟಕದ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಲಾಬಿ ಈರುಳ್ಳಿಯನ್ನು ಬೆಳೆಯುವ ಕಾರಣ ಇದಕ್ಕೆ ಬೆಂಗಳೂರು ಗುಲಾಬಿ ಈರುಳ್ಳಿ ಎಂದೇ ಕರೆಯಲಾಗುತ್ತಿದೆ. ಈ ಈರುಳ್ಳಿಗೆ ದೇಶದಲ್ಲಿ ಮಾತ್ರವಲ್ಲ, ಬೇರೆ ದೇಶಗಳಲ್ಲೂ ಬೇಡಿಕೆ ಇದೆ. ಹಾಗೆಯೇ, ಬೆಂಗಳೂರು ಗುಲಾಬಿ ಈರುಳ್ಳಿಗೆ 2015ರಲ್ಲಿ ಭೌಗೋಳಿಕ ಸೂಚಕ ಟ್ಯಾಗ್‌ (Geographical Indication Tag) ನೀಡಿದ ಬಳಿಕ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.

“ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಆಯುಕ್ತರಿಂದ ಬೆಂಗಳೂರು ಗುಲಾಬಿ ಈರುಳ್ಳಿಯನ್ನು ರಫ್ತು ಮಾಡಬಹುದು ಎಂಬ ಪ್ರಮಾಣಪತ್ರ ಇರುವ ರಫ್ತುದಾರರು ರಫ್ತು ಸುಂಕ ಇಲ್ಲದೆಯೇ ರಫ್ತು ಮಾಡಬಹುದು: ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರದ ನೂತನ ಅಧಿಸೂಚನೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ.

ಇದನ್ನೂ ಓದಿ: Self Harming : ಖ್ಯಾತ ಕಬಡ್ಡಿ ಆಟಗಾರ, ಮಳೆ ನಂಬಿ ಈರುಳ್ಳಿ ಬೆಳೆದ ಬೆಳೆಗಾರ ಆತ್ಮಹತ್ಯೆ

ದೇಶದಲ್ಲಿ ಮುಂಗಾರು ಮಳೆಯ ಕೊರತೆಯಾಗಿ ಈರುಳ್ಳಿ ಉತ್ಪಾದನೆಯು ಕುಂಠಿತಗೊಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಸಮರ್ಪಕ ಪೂರೈಕೆಯಾಗಬೇಕು ಹಾಗೂ ಬೆಲೆ ನಿಯಂತ್ರಣ ಮಾಡಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ಸುಂಕ ವಿಧಿಸಿದೆ. ಆಗಸ್ಟ್‌ನಲ್ಲಿ ರಫ್ತು ಸುಂಕ ವಿಧಿಸಿದ್ದು, ಇದು 2023ರ ಡಿಸೆಂಬರ್‌ವರೆಗೆ ಜಾರಿಯಲ್ಲಿರಲಿದೆ.

Exit mobile version