Site icon Vistara News

Waqf Board: ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

Delhi Jama Masjid

Centre Issues Notice To Take Over 123 Waqf Board Assets, Including Delhi's Jama Masjid

ನವದೆಹಲಿ: ಡಾ.ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ದೆಹಲಿಯ ಜಾಮಾ ಮಸೀದಿ (Jama Masjid) ಸೇರಿ ವಕ್ಫ್‌ ಮಂಡಳಿಗೆ (Waqf Board) ನೀಡಿದ್ದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್‌ ಮಂಡಳಿಗೆ ನೋಟಿಸ್‌ ಜಾರಿ ಮಾಡಿದೆ. ಹಾಗಾಗಿ, ಕೆಲವೇ ದಿನಗಳಲ್ಲಿ ವಕ್ಫ್‌ ಆಸ್ತಿಗಳು ಕೇಂದ್ರ ಸರ್ಕಾರದ ಪಾಲಾಗಲಿವೆ ಎನ್ನಲಾಗುತ್ತಿದೆ.

ವಕ್ಫ್‌ ಮಂಡಳಿ ವಶದಲ್ಲಿರುವ ಮಸೀದಿಗಳು, ದರ್ಗಾ ಹಾಗೂ ಸ್ಮಶಾನಗಳ ಆಸ್ತಿಯನ್ನು ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಕಳೆದ ಫೆಬ್ರವರಿಯಲ್ಲಿಯೇ ತೀರ್ಮಾನಿಸಿದೆ. ಇಬ್ಬರು ಸದಸ್ಯರ ಸಮಿತಿ ವರದಿ ಆಧಾರದ ಮೇಲೆ ವಕ್ಫ್‌ ಮಂಡಳಿ ಆಸ್ತಿಯನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಿತ್ತು. ಈಗ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಆಗಸ್ಟ್‌ 30ರಂದು ವಕ್ಫ್‌ ಮಂಡಳಿಗೆ ನೋಟಿಸ್‌ ಜಾರಿ ಮಾಡಿದೆ.

ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (L&DO) ನಿವೃತ್ತ ನ್ಯಾಯಮೂರ್ತಿ ಎಸ್‌.ಪಿ. ಗರ್ಗ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ವಕ್ಫ್‌ ಮಂಡಳಿ ಆಸ್ತಿಗಳ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಹಾಗೆಯೇ, 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್‌ ಮಂಡಳಿಯಿಂದ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ ಎಂದು ಕೂಡ ತಿಳಿಸಿತ್ತು.

ಇದನ್ನೂ ಓದಿ: Waqf Property | ದೇಶದ್ರೋಹಿಗಳಿಂದ ವಕ್ಫ್‌ ಆಸ್ತಿ ಎಂಜಾಯ್‌, ಸದನದಲ್ಲಿ ಶಾಸಕ ಯತ್ನಾಳ್‌ ಆರೋಪ

ಸಮಿತಿಯ ವರದಿ ಹಾಗೂ ಆಕ್ಷೇಪಣೆ ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ನೋಟಿಸ್‌ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, 123 ಆಸ್ತಿಗಳಲ್ಲಿ ಭೌತಿಕ ತಪಾಸಣೆ ಮಾಡಬಹುದು ಎಂದು ಕೂಡ ದೆಹಲಿ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ, ಆಪ್‌ ಶಾಸಕ, ಮಂಡಳಿ ಚೇರ್ಮನ್‌ ಅಮಾನತುಲ್ಲಾ ಖಾನ್‌ ಅವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

Exit mobile version