Site icon Vistara News

Dearness Allowance: ಕೇಂದ್ರ ನೌಕರರಿಗೆ ಬಂಪರ್‌ ಉಡುಗೊರೆ, ಶೀಘ್ರದಲ್ಲೇ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆ ಸಾಧ್ಯತೆ

Dearness Allowance

Central Government Hikes 4 pc to 50 pc; new rate effective January 1

ನವದೆಹಲಿ: ಕೇಂದ್ರ ಸರ್ಕಾರವು ನೌಕರರಿಗೆ ಶೀಘ್ರದಲ್ಲೇ ಬಂಪರ್‌ ಉಡುಗೊರೆ ನೀಡಲಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇ.೪ರಷ್ಟು ತುಟ್ಟಿಭತ್ಯೆ (Dearness Allowance) ಏರಿಕೆ ಮಾಡುವ ಸಾಧ್ಯತೆ ಇದೆ. ಸದ್ಯ ಶೇ.೩೮ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದ್ದು, ಏರಿಕೆಯಾದರೆ ಶೇ.೪೨ರಷ್ಟು ಆಗಲಿದೆ. ಜನವರಿ ೧ರಿಂದಲೇ ಅನ್ವಯವಾಗುವಂತೆ ಹೆಚ್ಚಳವಾಗಲಿವೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿತ್ತು. ೨೦೨೨ರ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲಾಗಿತ್ತು. ಶೇ.31ರಿಂದ ಶೇ.34ಕ್ಕೆ ತುಟ್ಟಿ ಭತ್ಯೆ ಏರಿಕೆಯಾಗಿತ್ತು. ಹಾಗೆಯೇ, ೨೦೨೨ರ ಸೆಪ್ಟೆಂಬರ್‌ನಲ್ಲಿ ಶೇ.೪ರಷ್ಟು ಏರಿಕೆ ಮಾಡುವ ಮೂಲ ತುಟ್ಟಿ ಭತ್ಯೆಯ ಪ್ರಮಾಣ ಶೇ.38 ಆಗಿತ್ತು.

ಈಗ ಇದನ್ನು ಶೇ.೪೨ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಹಣದುಬ್ಬರದಿಂದ ಉಂಟಾಗುವ ಬೆಲೆಯೇರಿಕೆಯ ಪರಿಣಾಮಗಳನ್ನು ಸರಿದೂಗಿಸಲು ತುಟ್ಟಿಭತ್ಯೆಯನ್ನು ಅವರ ಸಂಬಳದ ಮೇಲೆ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಇದು ನೌಕರರಿಗೆ ಹಾಗೂ ನಿವೃತ್ತರಿಗೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ.

ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ 2.75% ಹೆಚ್ಚಳ

Exit mobile version