ನವದೆಹಲಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಪಾಕಿಸ್ತಾನ ಮೂಲದ ಒಂದು ಒಟಿಟಿ ಪ್ಲಾಟ್‌ಫಾರ್ಮ್ (Pak OTT Blocked), ಎರಡು ಮೊಬೈಲ್ ಆ್ಯಪ್‌ಗಳು, ನಾಲ್ಕು ಸೋಷಿಯಲ್ ಮೀಡಿಯಾ ಖಾತೆಗಳು ಹಾಗೂ ಒಂದು ಸ್ಮಾರ್ಟ್ ಟಿವಿ ಆ್ಯಪ್‌ಅನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.
ಭಾರತದ ಭದ್ರತೆ, ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪಾಕ್ ಮೂಲದ ಒಟಿಟಿ ಪ್ಲಾಟ್‌ಫಾರ್ಮ್ ವೈಡ್ಲಿ ಟಿವಿ ಸೇರಿ ಹಲವು ಆ್ಯಪ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಖಾತೆಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಬ್ಲಾಕ್ ಮಾಡಿದೆ.
ವೈಡ್ಲಿ ಟಿವಿ ಮೇಲೆ ಗಂಭೀರ ಆರೋಪ
ಪಾಕ್ ಮೂಲದ ಒಟಿಟಿ ಆ್ಯಪ್ ವೈಡ್ಲಿ ಟಿವಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ವೆಬ್‌ಸಿರೀಸ್, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂಬ ಗಂಭೀರ ಆರೋಪವಿದೆ. ‘ಸೇವಕ್: ದಿ ಕನ್ಫೆಷನ್ಸ್’ ವೆಬ್ ಸಿರೀಸ್‌ನಲ್ಲಿ ಭಾರತದ ವಿರೋಧಿ ಅಂಶಗಳಿವೆ. ಆಪರೇಷನ್ ಬ್ಲ್ಯೂಸ್ಟಾರ್, ಬಾಬ್ರಿ ಮಸೀದಿ ಧ್ವಂಸ ಸೇರಿ ಹಲವು ವಿಷಯಗಳ ಕುರಿತು ಸತ್ಯ ಮರೆಮಾಚಿ ಚಿತ್ರಿಸಲಾಗಿದೆ. ಹಾಗೆಯೇ, ಬೇರೆ ದೇಶಗಳೊಂದಿಗೆ ಭಾರತ ಹೊಂದಿರುವ ಉತ್ತಮ ಸಂಬಂಧವನ್ನು ಹಾಳುಮಾಡುವ ಅಂಶಗಳು ಕೂಡ ಇರುವುದರಿಂದ ವೈಡ್ಲಿ ಟಿವಿಯನ್ನು ಬ್ಲಾಕ್ ಮಾಡಿದೆ.
ಇದನ್ನೂ ಓದಿ | ಭಾರತದಲ್ಲಿ 8 ಯೂಟ್ಯೂಬ್ ನ್ಯೂಸ್ ಚಾನೆಲ್ಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ; ಇಲ್ಲಿದೆ ನೋಡಿ ಲಿಸ್ಟ್