Site icon Vistara News

Digital Media | ಡಿಜಿಟಲ್‌ ಮಾಧ್ಯಮ ನಿಯಂತ್ರಣ, ಡಿಜಿಟಲ್‌ ಪತ್ರಕರ್ತರಿಗೂ ಮಾನ್ಯತೆ, ಸಚಿವ ಅನುರಾಗ್‌ ಘೋಷಣೆ ಏನು?

Anurag Minister Digital Media

ನವದೆಹಲಿ: ಡಿಜಿಟಲ್‌ ಮಾಧ್ಯಮ (Digital Media) ಕ್ಷೇತ್ರದ ವ್ಯಾಪ್ತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಡಿಜಿಟಲ್‌ ಮೀಡಿಯಾ ನಿಯಂತ್ರಣದ ಕುರಿತು ಶೀಘ್ರವೇ ಕಾನೂನು ರೂಪಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಘೋಷಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಬದಲಾದ ಕಾಲಘಟ್ಟದಲ್ಲಿ ಜನರಿಗೆ ಸುದ್ದಿ ತಲುಪಿಸುವ ರೀತಿಯೇ ಬದಲಾಗಿದೆ. ಒಂದು ಸಣ್ಣ ಹಳ್ಳಿಯ ಸುದ್ದಿಯು ಡಿಜಿಟಲ್‌ ಮಾಧ್ಯಮದ ಮೂಲಕ ದೇಶಾದ್ಯಂತ ಪಸರಿಸುತ್ತಿದೆ. ಡಿಜಿಟಲ್‌ ಮಾಧ್ಯಮವು ಹತ್ತಾರು ಅವಕಾಶಗಳನ್ನು ಸೃಷ್ಟಿಸುವ ಜತೆಗೆ ಸವಾಲುಗಳನ್ನೂ ತಂದೊಡ್ಡಿದೆ. ಸಮತೋಲನ ಕಾಪಾಡುವ ಹಾಗೂ ಡಿಜಿಟಲ್‌ ಮಾಧ್ಯಮವನ್ನು ನಿಯಂತ್ರಿಸುವ ದಿಸೆಯಲ್ಲಿ ಶೀಘ್ರವೇ ವಿಧೇಯಕ ಮಂಡಿಸಲಾಗುತ್ತದೆ” ಎಂದು ಮಾಹಿತಿ ನೀಡಿದರು.

ಡಿಜಿಟಲ್‌ ಪತ್ರಕರ್ತರಿಗೂ ಮಾನ್ಯತೆ

“ಮುದ್ರಣ ಹಾಗೂ ಟಿವಿ ಮಾಧ್ಯಮದ ಪತ್ರಕರ್ತರಂತೆ ಡಿಜಿಟಲ್‌ ಮೀಡಿಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು” ಎಂದು ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಹಾಗೆಯೇ, “ಕಂಪನಿಗಳ ನೋಂದಣಿ ಪ್ರಕ್ರಿಯೆ ಸುಲಭಗೊಳಿಸುವುದು ಸೇರಿ ಹತ್ತಾರು ಯೋಜನೆಗಳು ಕೇಂದ್ರ ಸರ್ಕಾರದ ಮುಂದಿವೆ” ಎಂದಿದ್ದಾರೆ.

ಇದನ್ನೂ ಓದಿ | ಡಿಜಿಟಲ್‌ ಮಾಧ್ಯಮದಲ್ಲಿ ಪ್ರಯೋಗಶೀಲತೆಯಿಂದಲೇ ಗೆಲುವು: ವಿಸ್ತಾರ ಸಂವಾದ

Exit mobile version