ನವದೆಹಲಿ: ದೇಶದಲ್ಲಿ ಗುಣಮಟ್ಟದ ಔಷಧಗಳ ಉತ್ಪಾದನೆ ಹಾಗೂ ಮಾರಾಟದ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು “ರಾಷ್ಟ್ರೀಯ ಔಷಧ ಡೇಟಾಬೇಸ್” (National Drugs Database) ರಚನೆಗೆ ಮುಂದಾಗಿದೆ. ಇದ್ಕಕಾಗಿ ಏಳು ಸದಸ್ಯರ ಸಮಿತಿಯನ್ನೂ ರಚಿಸಿದೆ.
ಗ್ರಾಹಕರ ಹಿತದೃಷ್ಟಿಯಿಂದ ದೇಶಾದ್ಯಂತ ಉತ್ಪಾದನೆಯಾಗುವ ಔಷಧಗಳು, ಅವುಗಳಲ್ಲಿ ಏಕರೂಪತೆ ಹಾಗೂ ಪಾರದರ್ಶಕತೆ ಕಾಪಾಡುವ ದಿಸೆಯಲ್ಲಿ ಸಮಿತಿ ರಚಿಸಲಾಗಿದೆ. ಇದು ಔಷಧಗಳ ಕುರಿತು ಮಾಹಿತಿ ಇರುವ ದತ್ತಾಂಶ ಸಂಗ್ರಹಿಸುವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಡೇಟಾಬೇಸ್‌ನಲ್ಲಿ ಏನಿರಲಿದೆ?
ಸಮಗ್ರ ಡೇಟಾಬೇಸ್‌ನಲ್ಲಿ ಔಷಧ ಕ್ಷೇತ್ರಗಳ ಕುರಿತು ಹತ್ತಾರು ಮಾಹಿತಿ ಇರಲಿದೆ. ಔಷಧ, ಅದರ ಡೋಸೇಜ್, ಸಾಮರ್ಥ್ಯ, ಉತ್ಪಾದನೆ ಮಾಡುವ ಕಂಪನಿ ಕುರಿತು ಮಾಹಿತಿ, ಮಾರುಕಟ್ಟೆಗೆ ಬಿಡುಗಡೆ ಮಾಡುವವರು, ಬೇರೆ ದೇಶದಿಂದ ಆಮದು ಮಾಡಿಕೊಂಡಿರುವುದು, ಆಮದುದಾರರು ಸೇರಿ ಹತ್ತಾರು ಮಾಹಿತಿಯನ್ನು ಅಳವಡಿಸಲಾಗುತ್ತದೆ.
ಇದನ್ನೂ ಓದಿ | ಔಷಧದ ಮೇಲೆ ಶ್ರೀ ಹರಿ ಎಂದು ಬರೆಯುವ ಜತೆಗೆ ಹೆಸರು ಹಿಂದಿಯಲ್ಲಿರಲಿ, ಇದು ಸಿಎಂ ಚೌಹಾಣ್ ಭಾಷಾ ಪ್ರೇಮ