ನವದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ಕಿವಿಹಿಂಡಿದೆ. ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ (IT Rules) ಅಡಿಯಲ್ಲಿ ಜಾಲತಾಣಗಳ ಕಂಪನಿಗಳು ಕುಂದುಕೊರತೆ ಮೇಲ್ಮನವಿ ಸಮಿತಿ ರಚನೆ ಕುರಿತು ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಜಾಲತಾಣಗಳ ಬಳಕೆದಾರರಿಗೆ ಅನುಕೂಲವಾಗಲಿದೆ.
ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್, ಇನ್‌ಸ್ಟಾಗ್ರಾಂ ಸೇರಿ ಎಲ್ಲ ಜಾಲತಾಣಗಳು ಬಳಕೆದಾರರು ಕಂಟೆಂಟ್ ಸೇರಿ ಯಾವುದೇ ವಿಷಯದ ಕುರಿತು ಕುಂದುಕೊರತೆಗಳ ಸಮಿತಿಗಳಿಗೆ ದೂರು ನೀಡಬಹುದಾಗಿದೆ. ಕೇಂದ್ರ ಸರ್ಕಾರವೇ ಸಮಿತಿ ರಚಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಅಂಶಗಳನ್ನು ನಿರ್ಬಂಧಿಸಬಹುದಾಗಿದೆ.
ಮೂರು ತಿಂಗಳಲ್ಲಿ ನೂತನ ಐಟಿ ನಿಯಮಗಳ ಪ್ರಕಾರ ಮೂವರು ಸದಸ್ಯರ ಕುಂದುಕೊರತೆ ಮೇಲ್ಮನವಿ ಸಮಿತಿ ರಚಿಸಲಾಗುತ್ತದೆ. ಸಮಿತಿಯಲ್ಲಿ ಒಬ್ಬ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಇರಲಿದ್ದಾರೆ. ಜಾಲತಾಣಗಳನ್ನು ಬಳಸುವ ಗ್ರಾಹಕರು ದೂರು ನೀಡಿದ 30 ದಿನಗಳ ಒಳಗಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | ಭಾರತದಲ್ಲಿ 8 ಯೂಟ್ಯೂಬ್ ನ್ಯೂಸ್ ಚಾನೆಲ್ಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ; ಇಲ್ಲಿದೆ ನೋಡಿ ಲಿಸ್ಟ್