Site icon Vistara News

E-pharmacies: ಆನ್‌ಲೈನ್ ಔಷಧ ಮಾರಾಟ ಒಪ್ಪಿಗೆ ವಾಪಸ್? ಉಲ್ಟಾ ಹೊಡೆಯಿತೇ ಮೋದಿ ಸರ್ಕಾರ?

Medicine Price

False And Misleading: Central Government on reports of hike in medicine prices

ನವದೆಹಲಿ: ಆನ್‌ಲೈನ್ ಔಷಧ ಮಾರಾಟಕ್ಕೆ ಒಪ್ಪಿಗೆ ನೀಡಿದ ಬೆನ್ನಲ್ಲೇ ನರೇಂದ್ರ ಮೋದಿ ಸರ್ಕಾರ ಉಲ್ಟಾ ಹೊಡೆದಿದೆ. ಸಚಿವರ ಸಮೂಹ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇ-ಫಾರ್ಮಾಸಿಸ್ ಒಪ್ಪಿಗೆಯನ್ನು ಹಿಂಪಡೆಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ(E-pharmacies).

ಆರೋಗ್ಯ ಸಚಿವಾಲಯವು ಈ ವಲಯದಲ್ಲಿ ವರದಿಯಾದ ವಂಚನೆಗಳನ್ನು ಪರಿಗಣಿಸಿದೆ. ಇದು ಡೇಟಾ ಗೌಪ್ಯತೆ, ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳ ಮಾರಾಟ ಮತ್ತು ಹೆಚ್ಚು ಬೆಲೆಗಳ ಬಗ್ಗೆ ಕಳವಳಕ್ಕೆ ಕಾರಣವಾಗುತ್ತದೆ ಎಂಬ ಆತಂಕವನ್ನು ಸಚಿವರ ಗುಂಪು ಪರಿಗಣಿಸಿದೆ ಎಂದು ಹೇಳಲಾಗುತ್ತಿದೆ.

ಇದು ತುಂಬಾ ಅಪಾಯಕಾರಿ ನಡೆಯಾಗಿದೆ. ರಿಯಾಯಿತಿ ದರ ಮಾರಾಟವು ಚಿಲ್ಲರೆ ವಲಯವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಅಲ್ಲದೇ, ಇ-ಫಾರ್ಮಸಿ ಔಷಧಿಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಬಹುದು. ಇದರಿಂದ ರೋಗಿಗಳ ಸುರಕ್ಷತೆಯ ಅಪಾಯವನ್ನು ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಇ-ಫಾರ್ಮಾಸಿಸ್ ಸ್ಥಗಿತಕ್ಕೆ ಸಚಿವರ ಗುಂಪು ಒಲವು ತೋರಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಸ್ತಾರ Money Guide : Sovereign Gold Bond : ಸಾವರಿನ್‌ ಗೋಲ್ಡ್ ಬಾಂಡ್‌ ಮಾರಾಟ ಇಂದಿನಿಂದ ಶುರು

ಇಷ್ಟಾಗಿಯೂ ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ. ಈ ವಲಯದಲ್ಲಿ ಮುಂದಿನ ಹೆಜ್ಜೆ ಕೈಗೊಳ್ಳುವ ಮುಂಚೆ, ಪರಿಹಾರವವನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

Exit mobile version