Site icon Vistara News

ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದು ಯುವಕನ ಕೊಲೆ; ಆರೋಪಿ ಶಬ್ಬೀರನ ಮನೆಗೆ ಬೆಂಕಿ ಹಚ್ಚಿದ ಜನ

Chamba Murder Case: People Sets Fire A House

Chamba Murder Case: mob sets accused’s house on fire

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಮನೋಹರ್ ಲಾಲ್‌ ಎಂಬ 21 ವರ್ಷದ ಯುವಕನನ್ನು ಹತ್ಯೆಗೈಯಲಾಗಿದೆ. ಇನ್ನು, ಮನೋಹರ್ ಲಾಲ್‌ನನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ ಶಬ್ಬೀರ್‌ನ ಮನೆಗೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಚಂಬಾ ಜಿಲ್ಲೆ ಸಲೂನಿ ಉಪ ವಿಭಾಗದ ಭಂಡಾಲ್‌ ಗ್ರಾಮದಲ್ಲಿ ಆರೋಪಿ ಶಬ್ಬೀರನ ಮನೆಗೆ ನುಗ್ಗಿದ ಉದ್ರಿಕ್ತ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಉಲ್ಬಣಗೊಂಡಿದ್ದು ಜಿಲ್ಲಾಡಳಿತವು ಚಂಬಾ ಪ್ರದೇಶದಲ್ಲಿ ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಅಡಿಯಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಆದರೂ, ಸಲೂನಿ ಪ್ರದೇಶದಲ್ಲಿ ಪರಿಸ್ಥಿತಿ ಕೈಮೀರಿದೆ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?

ಮನೋಹರ್‌ ಲಾಲ್‌ ಎಂಬ ಯುವಕನು ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನ ಪ್ರೀತಿಯನ್ನು ಒಪ್ಪಿಕೊಂಡಿದ್ದಳು. ಇದನ್ನು ತಿಳಿದ ಬಾಲಕಿಯ ಕುಟುಂಬಸ್ಥರು ಮನೋಹರ ಲಾಲ್‌ ಮೇಲೆ ಹಲ್ಲೆ ನಡೆಸಿ, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕೆರೆಯೊಂದಕ್ಕೆ ಎಸೆದಿದ್ದಾರೆ. ಜೂನ್‌ 6ರಿಂದಲೇ ಮನೋಹರ್‌ ಲಾಲ್‌ ನಾಪತ್ತೆಯಾಗಿದ್ದ. ಆತನ ಶವವು ಜೂನ್‌ 9ರಂದು ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಐವರು ಭಯೋತ್ಪಾದಕರ ಹತ್ಯೆಗೈದ ಸೆಕ್ಯುರಿಟಿ ಫೋರ್ಸ್​​

ಮನೋಹರ್‌ ಲಾಲ್‌ ಹತ್ಯೆ ಬಳಿಕ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಇನ್ನು ಸಲೂನಿ ಪ್ರದೇಶದ ಹಲವೆಡೆ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರೀತಿಸಿದ್ದಕ್ಕೇ ಹಿಂದು ಯುವಕನನ್ನು ಹತ್ಯೆಗೈದ ಎಂಬ ಕೋಪದಲ್ಲಿ ಗ್ರಾಮಸ್ಥರು ಹತ್ಯೆ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version