Site icon Vistara News

Bhagat Singh | ಜನ್ಮದಿನಕ್ಕೆ 3 ದಿನ ಬಾಕಿ ಇರುವಾಗಲೇ ಚಂಡೀಗಢ ಏರ್‌ಪೋರ್ಟ್‌ಗೆ ಭಗತ್‌ ಸಿಂಗ್ ಹೆಸರು, ಮೋದಿ ಘೋಷಣೆ

Modi

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಭಗತ್‌ ಸಿಂಗ್‌ (Bhagat Singh) ಅವರ ಜನ್ಮದಿನಕ್ಕೆ ಕೆಲವೇ ದಿನ ಬಾಕಿ ಇರುವಾಗಲೇ ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್‌ ಸಿಂಗ್‌ ಅವರ ಹೆಸರಿಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮನ್‌ ಕೀ ಬಾತ್‌ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಈ ಕುರಿತು ಘೋಷಣೆ ಮಾಡಿದ್ದಾರೆ.

“ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಗೆ ಗೌರವ ಸಲ್ಲಿಸುವ ದಿಸೆಯಲ್ಲಿ ಚಂಡೀಗಢ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲು ತೀರ್ಮಾನಿಸಲಾಗಿದೆ” ಎಂದು ಘೋಷಿಸಿದರು. ನರೇಂದ್ರ ಮೋದಿ ಅವರ ಘೋಷಣೆಯನ್ನು ಆಮ್‌ ಆದ್ಮಿ ಪಕ್ಷವು ಸ್ವಾಗತಿಸಿದೆ. “ಪಂಜಾಬ್‌ ನಾಗರಿಕರ ಹಲವು ದಿನಗಳ ಬೇಡಿಕೆ ಈಡೇರುತ್ತಿರುವುದಕ್ಕೆ ಸಂತಸವಾಗಿದೆ” ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ತಿಳಿಸಿದ್ದಾರೆ.

“ಏರ್‌ಪೋರ್ಟ್‌ಗೆ ಭಗತ್‌ ಸಿಂಗ್‌ ಹೆಸರಿಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯಲಾಗಿತ್ತು. ಸೆಪ್ಟೆಂಬರ್‌ ೨೮ರಂದು ಭಗತ್‌ ಸಿಂಗ್‌ ಅವರ ಜನ್ಮ ದಿನಾಚರಣೆ ಇದೆ. ಇದೇ ವೇಳೆ ಮೋದಿ ಅವರು ಘೋಷಣೆ ಮಾಡಿರುವುದು ಸಂತಸ ತಂದಿದೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿರುವುದು ಖುಷಿಯಾಗಿದೆ” ಎಂದು ಮಾನ್‌ ಹೇಳಿದ್ದಾರೆ.

ಇದನ್ನೂ ಓದಿ | ಭಗತ್‌ ಸಿಂಗ್‌ ಪಾಠ ಕೈಬಿಟ್ಟಿದ್ದರೆ‌ ಗಲ್ಲಿಗೆ ಹಾಕಿ: ಸುಧಾಕರ್‌ ಸವಾಲು

Exit mobile version